ಟೆಲ್ ಅವಿವ್: ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್(Hamas-Israel War) ಮೇಲೆ ಹಮಾಸ್ ಬಂಡುಕೋರರು (Hamas Terrorist) ದಾಳಿ ನಡೆಸಿದ್ದರು. ಬಳಿಕ ಇಸ್ರೇಲ್ ಕೂಡ ಹಮಾಸ್ ಮೇಲೆ ಮಾರಣಾಂತಿಕ ಯುದ್ಧವನ್ನೇ ಕೈಗೊಂಡಿದೆ. ಈ ಮಧ್ಯೆ, ಹಮಾಸ್ ಬಂಡುಕೋರರು ಇಸ್ರೇಲಿಗರ ಮೇಲೆ ಯಾವ ರೀತಿಯ ಪೈಶಾಚಿಕ ಕೃತ್ಯವನ್ನು ಎಸಗಿದ್ದರು ಎಂಬ ಮಾಹಿತಿ ಹೊರ ಬಿದ್ದಿದೆ. ದಾಳಿಯ ವೇಳೆ ಇಸ್ರೇಲಿ ಮಹಿಳೆಯರ ಮೇಲೆ ಲೈಂಗಿಕ ಹಿಂಸಾಚಾರ ಎಸಗಲಾಗಿದೆ(Hamas Sexual Assault). ಇಸ್ರೇಲ್ ಸೈನಿಕರ (Israel Soldiers) ಖಾಸಗಿ ಭಾಗಕ್ಕೆ ಗುಂಡು ಹೊಡೆದು ಸಾಯಿಸಲಾಗಿದೆ. ಈ ಕುರಿತು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ (New York Times) ವರದಿ ಮಾಡಿದೆ.
ನ್ಯೂಯಾರ್ಕ್ ಟೈಮ್ಸ್ ಎರಡು ತಿಂಗಳ ತನಿಖೆಯನ್ನು ನಡೆಸಿತು, ಭಯೋತ್ಪಾದಕರು ಗುರಿಯಾಗಿಸಿಕೊಂಡ ಅನೇಕ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ಮತ್ತು ವಿರೂಪಗೊಳಿಸುವಿಕೆಯನ್ನು ಸೂಚಿಸುವ ದುಃಖಕರ ವಿವರಗಳನ್ನು ಬಹಿರಂಗಪಡಿಸಿತು. ಕೆಲವು ಕಡೆ ಮಹಿಳೆಯರನ್ನು ಅಂಗಹೀನರನ್ನಾಗಿ ಮಾಡಿದ್ದಾರೆ ಎಂಬ ಭಯಾನಕ ಮಾಹಿತಿಯು ಬೆಚ್ಚಿ ಬೀಳಿಸಿದೆ.
New details show a pattern of rape and mutilation against Israeli women by Hamas in the Oct. 7 terrorist attacks, a New York Times investigation found. https://t.co/FrChcRLvYC pic.twitter.com/cSl45HFjPG
— The New York Times (@nytimes) December 28, 2023
ಹಮಾಸ್ ಬಂಡುಕೋರರ ದಾಳಿಗೊಳಗಾದ ಸಂತ್ರಸ್ತರ ಪೈಕಿ ಒಬ್ಬರಾದ ಗಾಲ್ ಅಬ್ಬುಶ್ ಎಂಬಾಕೆ ಎರಡು ಮಕ್ಕಳ ತಾಯಿಯಾಗಿದ್ದಾರೆ. ಹಮಾಸ್ ದಾಳಿ ಮಾಡಿದ ಸ್ಥಳದಿಂದ ಈ ಮಹಿಳೆಯು ನಾಪತ್ತೆಯಾಗಿದ್ದರು. ಕಾಣೆಯಾದ ತನ್ನ ಸ್ನೇಹಿತೆಯನ್ನು ಹುಡುಕುತ್ತಿರುವ ಮಹಿಳೆಯೊಬ್ಬರು ಚಿತ್ರೀಕರಿಸಿದ ವೈರಲ್ ವೀಡಿಯೊದಲ್ಲಿ ಗಾಲ್ ಅಬ್ದುಶ್ ರಸ್ತೆಯ ಮೇಲೆ ಬಿದ್ದಿರುವುದನ್ನು ತೋರಿಸಲಾಗಿದೆ. ಭಾಗಶಃ ಬಟ್ಟೆಯನ್ನು ಧರಿಸಿ, ಅವಳ ಮುಖ ಗುರುತಿಸಲಾಗದಷ್ಟು ಸುಟ್ಟುಹೋಗಿದೆ.
ಈ ಕುರಿತು ಹೇಳಿಕೆ ನೀಡಿರುವ ಇಸ್ರೇಲ್ ಪೊಲೀಸರು, ಗಾಲ್ ಅಬ್ದುಶ್ ಅವರನ್ನು ಅತ್ಯಾಚಾರ ಮಾಡಿ, ಹತ್ಯ ಮಾಡಲಾಗಿದೆ. ಗಾಲ್ ಅವರ ಈ ಕತೆಯು, ದಾಳಿಯ ವೇಳೆ ಹಮಾಸ್ ಬಂಡುಕೋರರು ತೋರಿದ ಪೈಶಾಚಿಕ ವರ್ತನೆಯ ಸಂಕೇತವಾಗಿ ಮಾರ್ಪಟ್ಟಿದೆ.
ಇಸ್ರೇಲಿ ಮಹಿಳೆಯರು ಮತ್ತು ಹುಡುಗಿಯರು ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದ ಅಥವಾ ವಿರೂಪಗೊಳಿಸಲಾದ ಕನಿಷ್ಠ ಏಳು ಸ್ಥಳಗಳನ್ನು ನ್ಯೂಯಾರ್ಕ್ ಟೈಮ್ಸ್ ಗುರುತಿಸಿದೆ. ಪತ್ರಿಕೆ ಸಂದರ್ಶನ ಮಾಡಿದ 150 ಜನರಲ್ಲಿ ಸಾಕ್ಷಿಗಳು, ವೈದ್ಯಕೀಯ ಸಿಬ್ಬಂದಿ, ಸೈನಿಕರು ಮತ್ತು ಅತ್ಯಾಚಾರ ಸಲಹೆಗಾರರು ಅಕ್ಟೋಬರ್ 7ರಂದು ನಡೆದ ಭೀಕರ ದಾಳಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತೆರೆದಿಟ್ಟಿದ್ದಾರೆ.
Hamas Sexual Assault: ರೇಪ್ ಮಾಡಿ, ಕಾಲು ಕತ್ತರಿಸಿ ಸುಟ್ಟು ಹಾಕಿದರು!
ರೇವ್ ಪಾರ್ಟಿ, ಗಾಜಾ ಗಡಿಯಲ್ಲಿರುವ ಸೇನಾ ನೆಲೆಗಳು ಮತ್ತು ಕಿಬ್ಬುತ್ಜಿಮ್ನಲ್ಲಿ ಮೇಲೆ ಹಮಾಸ್ ಭಯೋತ್ಪಾದಕರು ದಾಳಿ ನಡೆಸಿದ್ದರು. ಗಲ್ ಅಬ್ದುಷ್‌ನ ಶವ ಪತ್ತೆಯಾದ ಹೆದ್ದಾರಿ ಮಾರ್ಗ 232 ರ ಉದ್ದಕ್ಕೂ ವಿವಿಧ ಸ್ಥಳಗಳಲ್ಲಿ ಮಹಿಳೆಯರ ಅತ್ಯಾಚಾರ ಮತ್ತು ಹತ್ಯೆಯ ಗ್ರಾಫಿಕ್ ದೃಶ್ಯಗಳನ್ನು ಸಾಕ್ಷಿಗಳು ವಿವರಿಸಿದ್ದಾರೆ.
ಗಾಲ್ ಅಬ್ದುಶ್ ದೊರೆತ ರೀತಿಯಲ್ಲೇ ಸುಮಾರು 30ಕ್ಕೂ ಹೆಚ್ಚು ಶವಗಳು ದೊರೆತಿವೆ ಎಂದು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿರುವ ವೈದ್ಯರು, ಸೈನಿಕರು ತಿಳಿಸಿದ್ದಾರೆ. ಗಾಲ್ ಅವರ ಕಾಲನ್ನು ಕತ್ತರಿಸಲಾಗಿತ್ತು. ಅವರ ಮೇಲಿನ ಬಟ್ಟೆಯನ್ನು ಸಂಪೂರ್ಣವಾಗಿ ಕಳಚಲಾಗಿತ್ತು. ಗಾಲ್ ಅವರ ಖಾಸಗಿ ಭಾಗಕ್ಕೂ ಹಾನಿ ಮಾಡಲಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇಸ್ರೇಲಿ ಸೈನಿಕರ ಜನನಾಂಗಕ್ಕೇ ಗುಂಡು!
ತೊಡೆ ಮತ್ತು ತೊಡೆಸಂದು ಮೊಳೆಗಳನ್ನು ಒಡೆದಿರುವ ಮಹಿಳೆಯ ಶವವನ್ನು ಒಳಗೊಂಡಂತೆ ಅನೇಕ ಪೈಶಾಚಿಕ ಕೃತ್ಯದ ಅನೇಕ ಫೋಟೋಗಳು ಮತ್ತು ವಿಡಿಯೋಗಳನ್ನು ನ್ಯೂಯಾರ್ಕ್ ಟೈಮ್ಸ್ ತನ್ನ ತನಿಖೆ ವೇಳೆ ಪರಿಶೀಲಿಸಿದೆ. ಇಸ್ರೇಲಿ ಮಿಲಿಟರಿ ಒದಗಿಸಿದ ಮತ್ತೊಂದು ವೀಡಿಯೊದಲ್ಲಿ ಗಾಜಾ ಬಳಿಯ ನೆಲೆಯಲ್ಲಿ ಇಬ್ಬರು ಸತ್ತ ಸೈನಿಕರಿದ್ದು, ಅವರ ಜನನಾಂಗದ ಪ್ರದೇಶಗಳಲ್ಲಿ ನೇರವಾಗಿ ಗುಂಡು ಹಾರಿಸಿಲಾಗಿದೆ!
ಇಸ್ರೇಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಹಮಾಸ್ ತಳ್ಳಿ ಹಾಕಿದೆ. ಹಮಾಸ್ ಪೈಶಾಚಿಕ ಕೃತ್ಯವು ಇಸ್ರೇಲ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಮತ್ತು ವಿಶ್ವ ಸಂಸ್ಥೆ ವುಮನ್, ಈ ಆರೋಪಗಳನ್ನು ಒಪ್ಪಿಕೊಂಡಿರಲಿಲ್ಲ. ಅದಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Israel Palestine War : ಸಂತ್ರಸ್ತರ ಪರಿಹಾರ ಸಾಮಗ್ರಿಗಳನ್ನೇ ಕದ್ದು ಮುಕ್ಕುತ್ತಿರುವ ಹಮಾಸ್ ಉಗ್ರರು