ರೋಮ್: ಸಲಿಂಗಿಗಳಿಗೆ (Gays) ಹೆಚ್ಚಿನ ಪ್ರಮಾಣದಲ್ಲಿ ಮಂಕಿಪಾಕ್ಸ್ ತಗುಲುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ ಬೆನ್ನಲ್ಲೇ ಇಟಲಿಯಲ್ಲಿ ವ್ಯಕ್ತಿಯೊಬ್ಬನಿಗೆ (Italian Man) ಒಂದೇ ಬಾರಿಗೆ ಮಂಕಿಪಾಕ್ಸ್, ಎಚ್‌ಐವಿ ಹಾಗೂ ಕೊರೊನಾ ದೃಢಪಟ್ಟಿದೆ. ಈತ ಹಲವು ಪುರುಷರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೇ ಇದಕ್ಕೆಲ್ಲ ಕಾರಣ ಎಂದು ತಿಳಿದುಬಂದಿದೆ.
ಹೆಸರು ತಿಳಿದುಬರದ ೩೬ ವರ್ಷದ ವ್ಯಕ್ತಿಯು ಜೂನ್ ೧೬ರಿಂದ ಜೂನ್ ೨೦ರವರೆಗೆ ಸ್ಪೇನ್‌ನಲ್ಲಿ ಕಾಲ ಕಳೆದಿದ್ದು, ಅಲ್ಲಿ ಪುರುಷರ ಜತೆ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾನೆ. ಈತ ಮನೆಗೆ ಬಂದ ಬಳಿಕ ಮೊದಲ ಬಾರಿಗೆ ಜೂನ್ ೨ರಂದು ಕೊರೊನಾ ದೃಢಪಟ್ಟಿದೆ. ಇದೇ ದಿನದ ರಾತ್ರಿ ವೇಳೆಗೆ ಮೈತುಂಬ ಗುಳ್ಳೆಗಳಾಗಿ ಕೆರೆತ ಶುರುವಾಗಿದೆ. ಇದರಿಂದ ಆತಂಕಗೊಂಡ ಆತ ವೈದ್ಯರ ಬಳಿ ತೆರಳಿದ್ದಾನೆ. ವೈದ್ಯರು ಎಲ್ಲ ತಪಾಸಣೆ ನಡೆಸಿದಾಗ ಈತನಿಗೆ ಕೊರೊನಾ ಜತೆಗೆ ಮಂಕಿಪಾಕ್ಸ್, ಎಚ್‌ಐವಿ ಸಹ ದೃಡಪಟ್ಟಿರುವುದು ಗೊತ್ತಾಗಿದೆ.
ಗಮನಿಸಬೇಕಾದ ವಿಷಯ ಏನೆಂದರೆ, ಕಳೆದ ವರ್ಷ ವ್ಯಕ್ತಿಯು ಎಚ್‌ಐವಿ ತಪಾಸಣೆಗೆ ಒಳಪಟ್ಟಿದ್ದ. ಆಗ, ಆತನಿಗೆ ಎಚ್‌ಐವಿ ನೆಗೆಟಿವ್ ಎಂದು ವರದಿ ಬಂದಿತ್ತು. ಆದರೆ, ಸ್ಪೇನ್‌ಗೆ ಹೋಗಿ ಬಂದ ಕೆಲವೇ ದಿನದಲ್ಲಿ ಪಾಸಿಟಿವ್ ವರದಿ ಬಂದಿದೆ. ಸದ್ಯ ವೈದ್ಯರು ಈತನಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | CWG- 2022 | ಮಂಕಿಪಾಕ್ಸ್ ಭೀತಿ, ಸುರಕ್ಷಿತ ಲೈಂಗಿಕತೆಗೆ ಮನವಿ, 1.5 ಲಕ್ಷ ಕಾಂಡೋಮ್ ವಿತರಣೆ