ರೋಮ್: ಅಂತಾರಾಷ್ಟ್ರೀಯವಾಗಿ ಚೀನಾಗೆ (Set back For China) ಭಾರೀ ಹಿನ್ನಡೆಯಾಗಿದೆ. ಈ ಹಿಂದೆ ಘೋಷಿಸಿದಂತೆ ಇಟಲಿ, ಚೀನಾದ ಬೆಲ್ಟ್ ಆ್ಯಂಡ್ ರೋಡ್ ಇನ್ಫ್ರಾಸ್ಟ್ರಕ್ಚರ್ ಯೋಜನೆಯಿಂದ ಹಿಂದೆ ಸರಿದಿದೆ(Italy withdrawn from Chinas vast Belt and Road project) ಎಂದು ಮೂಲಗಳು ತಿಳಿಸಿವೆ. ಈ ಒಪ್ಪಂದಕ್ಕೆ ಸಹಿ ಹಾಕಿದ ನಾಲ್ಕು ವರ್ಷಗಳ ಬಳಿಕ ಇಟಲಿ ಹಿಂದೆ ಸರಿದಿದೆ. ಜಿ7 (G7 Nations) ರಾಷ್ಟ್ರಗಳ ಪೈಕಿ ಇಟಲಿ ಏಕೈಕ ರಾಷ್ಟ್ರ ಮಾತ್ರವೇ ಈ ಯೋಜನೆಯ ಭಾಗವಾಗಿತ್ತು.
ರೋಡ್ ಆ್ಯಂಡ್ ಬೆಲ್ಟ್ ಮೂಲಸೌಕರ್ಯ ಯೋಜನೆಯಿಂದ ಹಿಂದಿ ಸರಿಯುವ ದೀರ್ಘಾವಧಿಯ ನಿರ್ಧಾರವನ್ನು ಮೂರು ದಿನಗಳ ಹಿಂದೆಯಷ್ಟೇ ಚೀನಾ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಇಟಲಿಯ ಪತ್ರಿಕೆ ಕೊರಿಯೆರೆ ಡೆಲ್ಲಾ ಸೆರಾ ವರದಿ ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಉಭಯ ರಾಷ್ಟ್ರಗಳ ನಡುವಿನ ಸಂವಹನದ ಕುರಿತಾದ ಯಾವುದೇ ಮಾಹಿತಿ ಇಲ್ಲ. ಆದರೂ, ಎಎಫ್‌ಪಿ ಸುದ್ದಿ ಸಂಸ್ಥೆಗೆ ಇಟಲಿ ಸರ್ಕಾರ ಹೊರ ಬಂದಿದೆ ಎಂದು ಮೂಲಗಳು ಖಚಿತಪಡಿಸಿವೆ.
ಉಭಯ ರಾಷ್ಟ್ರಗಳ ನಡುವೆ ರಾಜಕೀಯ ಮಾತುಕತೆಗಳು ನಡೆಯುವಷ್ಟು ಮುಕ್ತವಾಗಿಟ್ಟುಕೊಳ್ಳುವ ರೀತಿಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದಷ್ಟೇ ಇಟಲಿ ಸರ್ಕಾರದ ಮೂಲಗಳು ತಿಳಿಸಿವೆ. ಆದರೆ, ಒಟ್ಟಾರೆ ಈ ಬೆಳವಣಿಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಇಟಲಿಗೆ ಲಾಭಗಳು ಕನಿಷ್ಠ ರೀತಿಯಲ್ಲಿ ಇದ್ದರೂ ರೋಡ್ ಆ್ಯಂಡ್ ಬೆಲ್ಟ್‌ನಲ್ಲಿ ಇಟಲಿಯ ಭಾಗಿದಾರಿಕೆಯನ್ನು ಚೀನಾ ಇಟಲಿಯ ಮೇಲೆ ಬೀರುತ್ತಿರುವ ಪ್ರಭಾವ ಎನ್ನವ ರೀತಿಯಲ್ಲಿ ನೋಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಟಲಿ ಹಿಂದೆ ಸರಿಯುವ ದೃಢವನ್ನು ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಇಟಲಿ ಒಪ್ಪಂದದಿಂದ ಹೊರ ಬರದಿದ್ದರೆ, 2024ರಲ್ಲಿ ಒಪ್ಪಂದವು ಸ್ವಯಂ ಆಗಿ ನವೀಕರಣಗೊಳ್ಳುತ್ತಿತ್ತು. ಆದರೆ ಮೆಲೋನಿ ಮತ್ತು ಅವರ ಬಲಪಂಥೀಯ ಸರ್ಕಾರವು ಬೀಜಿಂಗ್ ಅನ್ನು ಪ್ರಚೋದಿಸುವ ಮತ್ತು ಇಟಾಲಿಯನ್ ಕಂಪನಿಗಳ ವಿರುದ್ಧ ಪ್ರತೀಕಾರದ ಅಪಾಯವನ್ನುಂಟುಮಾಡುವ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ.
ರೋಮ್ ಈ ಒಪ್ಪಂದದಿಂದ ಹೊರ ಬರಬೇಕು, ಅದು ಚೀನಾದೊಂದಿಗೆ ಸಂಬಂಧಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು, ದಿಲ್ಲಿಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ಜಿ20 ಶೃಂಗದಲ್ಲಿ ಪಾಲ್ಗೊಂಡಿದ್ದಾಗ ಹೇಳಿದ್ದರು.
ಉರುಗ್ವೆಯಿಂದ ಶ್ರೀಲಂಕಾದವರೆಗೆ ವಿಸ್ತರಿಸಿರುವ 150 ದೇಶಗಳು ಚೀನಾದ ಪ್ರಭಾವವನ್ನು ಸಾಗರೋತ್ತರದಲ್ಲಿ ವಿಸ್ತರಿಸುವ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಪ್ರಯತ್ನದ ಫಲವಾಗಿ ಈ ಒಪ್ಪಂದಕ್ಕೆ ದೇಶಗಳು ಸಹಿ ಹಾಕಿವೆ ಎಂದು ಬೀಜಿಂಗ್ ಹೇಳಿತ್ತು.
ಆಗ್ನೇಯ ಏಷ್ಯಾವನ್ನು ದಾಟುವ ಹೈಸ್ಪೀಡ್ ರೈಲು ಹಳಿಗಳು ಮತ್ತು ಮಧ್ಯ ಏಷ್ಯಾದ ಮೂಲಕ ಬೃಹತ್ ಸಾರಿಗೆ, ಶಕ್ತಿ ಮತ್ತು ಮೂಲಸೌಕರ್ಯ ಕೆಲಸಗಳಿಂದ ವಿಶ್ವದಾದ್ಯಂತ ಎರಡು ಟ್ರಿಲಿಯನ್ ಡಾಲರ್‌ಗೂ ಹೆಚ್ಚು ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಬೀಜಿಂಗ್ ಹೇಳಿದೆ.
ಈ ಯೋಜನೆಯಿಂದ ದಕ್ಷಿಣ ಜಗತ್ತಿಗೆ ಸಂಪನ್ಮೂಲಗಳು ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಯೋಜನೆ ಪ್ರತಿಪಾದಕರು ಶ್ಲಾಘಿಸುತ್ತಾರೆ. ಆದರೆ, ಇದು ಬಡ ದೇಶಗಳನ್ನು ಅಗಾಧವಾದ ಸಾಲದಲ್ಲಿ ಸುಳಿಯಲ್ಲಿ ಸಿಲುಕಿಸುವ ಯೋಜನೆಯನ್ನು ಟೀಕಿಸಲಾಗುತ್ತದೆ. ಜತೆಗೆ,ಇದು ಅನೇಕ ಉದಯೋನ್ಮುಖ ಆರ್ಥಿಕತೆಗಳಲ್ಲಿ ಚೀನೀ ಮೂಲಸೌಕರ್ಯ ಸಂಸ್ಥೆಗಳಿಗೆ ಒಂದು ಭದ್ರ ನೆಲೆಯನ್ನು ಕೊಡಿಸುವ ಪ್ರಯತ್ನವಾಗಿದೆ ಎಂದು ಬೀಜಿಂಗ್ ಹೇಳಿದೆ.
ಈ ಸುದ್ದಿಯನ್ನೂ ಓದಿ: ಮೆಲೋನಿ+ಮೋದಿ=ಮೆಲೋಡಿ; ಇಟಲಿ ಪ್ರಧಾನಿ ಸೆಲ್ಫಿ ‘ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್’!