Site icon Vistara News

Unbelievable: 6.6 ಕೋಟಿ ರೂ. ಮೌಲ್ಯದ ಫ್ಲ್ಯಾಟ್ ಕೇವಲ 100 ರೂ.ಗೆ ಮಾರಾಟ!

Its Unbelievable, flats worth RS 6.6 crore sold for Rs 100

ನವದೆಹಲಿ: ಬ್ರಿಟನ್‌ನ (United Kingdom) ಕಾರ್ನ್‌ವಾಲ್ ಕೌನ್ಸಿಲ್ (Cornwall Council) 640,000 ಪೌಂಡ್‌ಗಳ ( ಅಂದಾಜು 6,61,64745 ರೂ.) ದ್ವಿತೀಯ ದರ್ಜೆಯಲ್ಲಿ ಪಟ್ಟಿ ಮಾಡಲಾದ ಮಾಡಲಾದ ಫ್ಲ್ಯಾಟ್‌ಗಳನ್ನು (Flats) ಕೇವಲ 1 ಪೌಂಡ್‌ಗೆ(ಅಂದಾಜು 103 ರೂ.) ಮಾರಾಟ ಮಾಡುವ ನಿರ್ಧಾರವನ್ನು ಮಾಡಿದೆ! ಈ ಮೂಲಕ ಕಾರ್ನಿಷ್ ಪಟ್ಟಣದ ಮಧ್ಯಭಾಗದಲ್ಲಿ ಜನರಿಗೆ ಕೈಗೆಟುಕುವ ವಸತಿಗಳ ಆಯ್ಕೆಯನ್ನು ಹೆಚ್ಚಿಸುವುದು ಕಾರ್ನವಾಲ್ ಕೌನ್ಸಿಲ್‌ನ ವಿಚಾರವಾಗಿದೆ(Unbelievable).

ಸೆಪ್ಟೆಂಬರ್ 13 ರಂದು ಕೌನ್ಸಿಲ್‌ನ ಕ್ಯಾಬಿನೆಟ್ ಲೂಯಿಯಲ್ಲಿರುವ 11 ಕೋಸ್ಟ್‌ಗಾರ್ಡ್ ಫ್ಲ್ಯಾಟ್‌ಗಳ ಮಾಲೀಕತ್ವವನ್ನು ಸಮುದಾಯ ಲ್ಯಾಂಡ್ ಟ್ರಸ್ಟ್‌ಗೆ ಕಡಿಮೆ ದರಕ್ಕೆ ವರ್ಗಾಯಿಸುವ ಶಿಫಾರಸಿಗೆ ಅನುಮೋದನೆ ನೀಡಲಾಯಿತು. ಕಟ್ಟಡಕ್ಕೆ ಸಂಬಂಧಿಸಿದ ಹೆಚ್ಚಿನ ನಿರ್ವಹಣಾ ವೆಚ್ಚದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 1 ಮಿಲಿಯನ್ ಪೌಂಡ್ ನವೀಕರಣ ಯೋಜನೆಯನ್ನು ಕೈಗೊಳ್ಳಲು ಮುಂದಾದ ಹಿನ್ನೆಲೆಯಲ್ಲಿ ಲೂಯಿ ಫ್ಲಾಟ್‌ಗಳನ್ನು ಥ್ರೀ ಸೀಸ್ ಕಮ್ಯುನಿಟಿ ಲ್ಯಾಂಡ್ ಟ್ರಸ್ಟ್‌ಗೆ ವರ್ಗಾಯಿಸಲಾಗಿದೆ.

ಕೌನ್ಸಿಲರ್‌ಗಳು ಈ ಒಪ್ಪಂದವನ್ನು ಕೈಗೆಟಕುವ ದರದಲ್ಲಿ ವಸತಿ ಎಂದು ಬಣ್ಣಿಸಿದ್ದಾರೆ. ಕೌಂಟಿಯಲ್ಲಿ ಕೈಗೆಟುಕುವ ವಸತಿ ಕೊರತೆಗೆ ಎರಡನೇ ಮನೆ ಮಾಲೀಕತ್ವ ಮತ್ತು ರಜೆಯ ಬಾಡಿಗೆಗಳು ಕಾರಣವಾಗಿವೆ ಎಂದು ಅವರು ಹೇಳಿದ್ದಾರೆ.
ಸಮುದಾಯ-ನೇತೃತ್ವದ ಪುನರಾಭಿವೃದ್ಧಿ ಯೋಜನೆಯು ಫ್ಲ್ಯಾಟ್‌ಗಳನ್ನು ಇನ್ನೂ ಕೈಗೆಟುಕುವ ವಸತಿ ಸೌಲಭ್ಯಕ್ಕಾಗಿ ಬಳಸುವುದನ್ನು ಈ ಡೀಲ್ ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Richest Beggar: ಈತ ವಿಶ್ವದ ಶ್ರೀಮಂತ ಭಿಕ್ಷುಕ! ಫ್ಲ್ಯಾಟ್ ಮೌಲ್ಯ 1.5 ಕೋಟಿ ರೂ.; ಒಟ್ಟು ಆಸ್ತಿ ಎಷ್ಟು?

ಬ್ರಿಟನ್‌ನಲ್ಲಿ ಮನೆಗಳ ಬಿಕ್ಕಟ್ಟು ಶುರುವಾಗಿದೆ. ವಿಶೇಷವಾಗಿ ಲಂಡನ್ ಮತ್ತು ಸೌತ್ ಈಸ್ಟ್‌ನಲ್ಲಿ ಮನೆಗಳ ಕೊರತೆ ಸಿಕ್ಕಾಪಟ್ಟೆ ಇದೆ. ಈ ಪ್ರದೇಶದಲ್ಲಿ ಆಸ್ತಿ ಬೆಲೆ ಮತ್ತು ಬಾಡಿಗೆ ವೆಚ್ಚವು ಗಗನಮುಖಿಯಾಗಿವೆ. ಇದರಿಂದ ಮನೆ ಖರೀದಿಸಲು ಅಥವಾ ಬಾಡಿಗೆಗೆ ಪಡೆಯಲು ಪ್ರಯತ್ನಿಸುತ್ತಿರುವವರಿಗೆ ಭಾರೀ ಸವಾಲು ಎದುರಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ 4.3 ಮಿಲಿಯನ್ ಮನೆಗಳ ಅಗತ್ಯವಿದೆ ಎಂದು ವರದಿಯೊಂದು ಹೇಳಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version