Site icon Vistara News

Japan Tsunami: ಭೂಕಂಪ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಹೊಡೆತ; ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ

Japan Tsunami, after 7.5 quake japan experienced first tsunami waves

ಟೋಕಿಯೊ: ಭಾರೀ ಭೂಕಂಪದ ಬೆನ್ನಲ್ಲೇ ಕೇಂದ್ರ ಜಪಾನ್ (Central Japan) ತೀರಕ್ಕೆ ಸುನಾಮಿ ಸೋಮವಾರ ಅಪ್ಪಳಿಸಿದೆ(Japan Tsunami). 7.5 ತೀವ್ರತೆಯಲ್ಲಿ ಭೂಮಿ ನಡುಗಿದ ಬೆನ್ನಲ್ಲೇ, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿತ್ತು. ಈಗ ಸುನಾಮಿಯ ಬೃಹತ್ ಅಲೆಗಳು ಕಡಲಿಗೆ ಅಪ್ಪಳಿಸುತ್ತಿವೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎತ್ತರ ಪ್ರದೇಶಕ್ಕೆ ಹೋಗುವಂತೆ ಜನರಿಗೆ ಅಧಿಕಾರಿಗಳು ಸೂಚನೆಗಳನ್ನು ನೀಡುತ್ತಿದ್ದಾರೆ. ಜಪಾನ್‌ನ ಇಶಿಕಾವಾ(Ishikawa) ಪ್ರಾಂತ್ಯದ ನೋಟೊ ಪ್ರದೇಶದಲ್ಲಿ (Noto region) ಭಾರೀ ಭೂಕಂಪ ಸಂಭವಿಸಿತ್ತು.

ಜಪಾನ್ ಕರಾವಳಿಯಲ್ಲಿ ಭೂಕಂಪದ ಕೇಂದ್ರ ಸ್ಥಾನದ 300 ಕಿಲೋಮೀಟರ್ (190 ಮೈಲುಗಳು) ಒಳಗೆ ಅಪಾಯಕಾರಿ ಸುನಾಮಿ ಅಲೆಗಳು ಸಾಧ್ಯ ಎಂದು ಹವಾಯಿ ಮೂಲದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿತ್ತು. ಅದರಂತೆ ಈಗ ಸುನಾಮಿ ಅಲೆಗಳು ಎದ್ದಿವೆ. ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರಕ್ಕೆ 1.2 ಮೀಟರ್‌ಗಳಷ್ಟು ದೊಡ್ಡ ಸುನಾಮಿ ಅಲೆಗಳು ಅಪ್ಪಳಿಸಿರುವುದನ್ನು ಖಚಿತಪಡಿಸಲಾಗಿದೆ. ಆದರೆ, ಅದೇ ಪ್ರದೇಶದಲ್ಲಿ ನೊಟೊದಲ್ಲಿ ಐದು ಮೀಟರ್‌ಗಳಷ್ಟು ಹೆಚ್ಚಿನ ಸುನಾಮಿ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ತಿಳಿಸಿದೆ.

ಜಪಾನ್‌ನ ಪ್ರಮುಖ ದ್ವೀಪವಾದ ಹೊನ್‌ಶುವಿನ ಜಪಾನ್ ಸಮುದ್ರದ ಭಾಗದಲ್ಲಿ ನೊಟೊ ಪ್ರದೇಶವು ಭಾರೀ ಭೂಕಂಪಕ್ಕೆ ಸಾಕ್ಷಿಯಾಯಿತು. ಸ್ಥಳೀಯ ಕಾಲಮಾನ ಸಂಜೆ 4:06 ಕ್ಕೆ 5.7 ತೀವ್ರತೆಯ ಕಂಪನದೊಂದಿಗೆ ಪ್ರಾರಂಭವಾಯಿತು ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ.

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ

ಜಪಾನ್‌ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ (Japan Earthquake) ಸಂಭವಿಸಿದ್ದು, ಸುನಾಮಿ ಅಲರ್ಟ್‌ (Tsunami Alert) ನೀಡಲಾಗಿದೆ. ಸೋಮವಾರ ಉತ್ತರ ಮಧ್ಯ ಜಪಾನ್‌ನಲ್ಲಿ 7.6 ರಿಕ್ಟರ್‌ ಪ್ರಾಥಮಿಕ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಇಶಿಕಾವಾ, ನಿಗಾಟಾ ಮತ್ತು ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿದ ನಂತರ ಜಪಾನ್ ಹವಾಮಾನ ಸಂಸ್ಥೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ ಎಂದು ವರದಿಗಳು ಹೇಳಿವೆ.

ಹೊಕುರಿಕು ಎಲೆಕ್ಟ್ರಿಕ್ ಪವರ್ ಸಂಸ್ಥೆಯ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಏನಾದರೂ ಹಾನಿಯಾಗಿದೆಯೇ ಎಂದು ಪರಿಶೀಲಿಸುತ್ತಿದೆ. ಜಪಾನ್ ಹವಾಮಾನ ಏಜೆನ್ಸಿಯು ಇಶಿಕಾವಾ ಮತ್ತು ಹತ್ತಿರದ ಪ್ರಾಂತಗಳಲ್ಲಿ ಭೂಕಂಪನವನ್ನು ವರದಿ ಮಾಡಿದೆ. ಅವುಗಳಲ್ಲಿ ಒಂದು 7.4ರ ಪ್ರಾಥಮಿಕ ತೀವ್ರತೆಯನ್ನು ದಾಖಲಿಸಿದೆ. ಸಮುದ್ರ ತೀರದಲ್ಲಿ ಅಲೆಗಳು 5 ಮೀಟರ್ (16.5 ಅಡಿ) ಎತ್ತರ ತಲುಪಬಹುದು ಎಂದು ಹವಾಮಾನ ಸಂಸ್ಥೆ ಎಚ್ಚರಿಸಿದೆ. ಸಾಧ್ಯವಾದಷ್ಟು ಬೇಗ ಎತ್ತರದ ಪ್ರದೇಶಗಳು ಅಥವಾ ಹತ್ತಿರದ ಕಟ್ಟಡದ ಮೇಲ್ಭಾಗಕ್ಕೆ ಹೋಗಲು ಜನತೆಗೆ ತಿಳಿಸಿದೆ. ಇಶಿಕಾವಾ ಪ್ರಿಫೆಕ್ಚರ್‌ನ ವಾಜಿಮಾ ನಗರದ ತೀರಕ್ಕೆ 1 ಮೀಟರ್‌ಗಿಂತಲೂ ಹೆಚ್ಚು ಎತ್ತರದ ಅಲೆಗಳು ಅಪ್ಪಳಿಸಿದವು. “ಎಲ್ಲಾ ನಿವಾಸಿಗಳು ತಕ್ಷಣವೇ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಬೇಕು” ಎಂದು ರಾಷ್ಟ್ರೀಯ ಬ್ರಾಡ್‌ಕಾಸ್ಟರ್ NHKಯು ಸೂಚನೆ ನೀಡಿದೆ.

ಏತನ್ಮಧ್ಯೆ ಜಪಾನ್‌ನಲ್ಲಿ 7.6 ತೀವ್ರತೆಯ ಭೂಕಂಪದ ನಂತರ ಪೂರ್ವ ಕರಾವಳಿಯ ಕೆಲವು ಭಾಗಗಳಲ್ಲಿ ಸಮುದ್ರ ಮಟ್ಟವು ಹೆಚ್ಚಾಗಬಹುದು ಎಂದು ದಕ್ಷಿಣ ಕೊರಿಯಾದ ಹವಾಮಾನ ಸಂಸ್ಥೆ ಹೇಳಿದೆ. ಕನ್ಸಾಯ್ ಎಲೆಕ್ಟ್ರಿಕ್ ಪವರ್‌ ಸಂಸ್ಥೆಯ ವಕ್ತಾರರು, ಪ್ರಸ್ತುತ ಅದರ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ. ಪಶ್ಚಿಮ ಜಪಾನ್‌ನಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿದ ನಂತರ ಎಲ್ಲಾ ಹೈಸ್ಪೀಡ್ ರೈಲುಗಳು ಇಶಿಕಾವಾ ಪ್ರಿಫೆಕ್ಚರ್‌ನಲ್ಲಿ ನಿಂತಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ದೊಡ್ಡ ಭೂಕಂಪಗಳು ಇಲ್ಲಿ ಆಗಾಗ ಸಂಭವಿಸುವ ಪರಿಣಾಮ ನಿವಾಸಿಗಳು ಅದಕ್ಕೆ ಇಲ್ಲಿ ಸದಾ ಸಿದ್ಧರಿರುತ್ತಾರೆ. “ನಿಮ್ಮ ಮನೆ, ನಿಮ್ಮ ವಸ್ತುಗಳು ನಿಮಗೆ ಅಮೂಲ್ಯವೆಂದು ನಾವು ಅರಿತುಕೊಂಡಿದ್ದೇವೆ, ಆದರೆ ನಿಮ್ಮ ಜೀವನವು ಎಲ್ಲಕ್ಕಿಂತ ಮುಖ್ಯವಾಗಿದೆ. ಸಾಧ್ಯವಾದಷ್ಟು ಎತ್ತರದ ಜಾಗ ಹೋಗಿ” ಎಂದು ಟಿವಿ ನಿರೂಪಕರು ಹೇಳಿದರು. ಇಲ್ಲಿನ ಕಟ್ಟಡಗಳು ಪ್ರಬಲವಾದ ಭೂಕಂಪಗಳನ್ನು ತಡೆದುಕೊಳ್ಳಬಲ್ಲಂತೆ ಜಪಾನ್ ಕಟ್ಟುನಿಟ್ಟಾದ ನಿರ್ಮಾಣ ನಿಯಮಗಳನ್ನು ಹೊಂದಿದೆ. ದೊಡ್ಡ ಭೂಕಂಪನಕ್ಕೆ ತಯಾರಾಗುವ ತುರ್ತು ಅಭ್ಯಾಸಗಳನ್ನು ಹೊಂದಿದೆ.

ಮಾರ್ಚ್ 11, 2011ರಂದು ಈಶಾನ್ಯ ಜಪಾನ್‌ನಲ್ಲಿ 9.0 ರಿಕ್ಟರ್‌ ವ್ರತೆಯ ಭಾರಿ ಭೂಕಂಪ ಸಂಭವಿಸಿದ ಬಳಿಕ ಸುನಾಮಿ ಅಪ್ಪಳಿಸಿತ್ತು. ಇದು ಹಲವು ಪಟ್ಟಣಗಳನ್ನು ವಿಧ್ವಂಸಗೊಳಿಸಿತು ಮತ್ತು ಫುಕುಶಿಮಾ ಪರಮಾಣು ಸ್ಥಾವರಕ್ಕೆ ದೊಡ್ಡ ಹಾನಿ ಎಸಗಿತ್ತು. ಅದು ಸುಮಾರು 18,500 ಜನರನ್ನು ಕೊಂದಿತ್ತು.

ಈ ಸುದ್ದಿಯನ್ನೂ ಓದಿ: Tsunami Warning: 7.6 ತೀವ್ರತೆಯ ಭೂಕಂಪ; ಭೀಕರ ಸುನಾಮಿಯ ವಾರ್ನಿಂಗ್‌!

Exit mobile version