Site icon Vistara News

Jennifer Lopez: ಜೆನ್ನಿಫರ್ ಲೋಪೆಜ್‌ಗೆ 88 ಲಕ್ಷ ರೂ. ಮೌಲ್ಯದ ವಜ್ರ ಖಚಿತ ಟಾಯ್ಲೆಟ್ ಸೀಟ್ ಗಿಫ್ಟ್!

Jennifer Lopez gets Toilet Seat Encrusted With Diamond worth 88 lakh by husband

ನವದೆಹಲಿ: ಅಮೆರಿಕದ ಖ್ಯಾತ ನಟಿ(American Actor), ಗಾಯಕಿ ಮತ್ತು ನೃತ್ಯಗಾತಿ ಜೆನ್ನಿಫರ್ ಲೋಪೆಜ್ (Jennifer Lopez) ಅವರಿಗೆ ಅವರ ಪತಿ ಬೆನ್ ಅಫ್ಲೆಕ್ (Ben Affleck) ಅವರು 88 ಲಕ್ಷ ಮೌಲ್ಯದ ವಜ್ರ ಖಚಿತ ಟಾಯ್ಲೆಟ್ ಸೀಟ್‌ (Toilet Seat Encrusted With Diamond) ಕಾಣಿಕೆಯಾಗಿ ನೀಡಿ, ಸುದ್ದಿಯಾಗಿದ್ದಾರೆ. 1991ರಲ್ಲಿ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಜೆನ್ನಿಫರ್ ಅವರು ಗಾಯನ, ನೃತ್ಯ ಮತ್ತು ನಟನೆಯ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ. ಈ ಹಿಂದೆ ಅವರು ವಜ್ರ ಖಚಿತ ಉಡುಗೆಯೊಂದಿಗೆ ಸೆಲ್ಫಿಗೆ ಪೋಸು ನೀಡಿ ಕೂಡ ಸುದ್ದಿಯಾಗಿದ್ದರು. ಈಗ ಅವರ ಪತಿ ನೀಡಿದ ವಜ್ರ ಮತ್ತು ಮುತ್ತುಗಳ ಖಚಿತ ಟಾಯ್ಲೆಟ್ ಸೀಟ್‌ನಿಂದಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ.

ನಟಿ ಜೆನ್ನಿಫರ್ ಲೋಪೆಜ್ ಅವರು ವರ್ಷದ ಹಿಂದೆ ಬೆನ್‌ ಅಫ್ಲೆಕ್ ಅವರನ್ನು ವಿವಾಹವಾಗಿದ್ದಾರೆ. ದಂಪತಿಯು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ರೋಮಾನ್ಸ್ ಫೋಟೋಗಳನ್ನು ಅಪ್‌ಲೋಡ್ ಕೂಡ ಮಾಡುತ್ತಾರೆ. ಬೆನ್‌ ಅಫ್ಲೆಕ್ ಅವರು ಈಗ ತಮ್ಮ ಪತ್ನಿಗೆ 88 ಲಕ್ಷ ಬೆಲೆ ಬಾಳುವ ವಜ್ರ ಖಚಿತ ಟಾಯ್ಲ್ ಸೀಟ್ ಅನ್ನು ಗಿಫ್ಟ್ ನೀಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಜೆನ್ನಿಫರ್ ಲೋಪೆಜ್ ಮತ್ತು ಬೆನ್ ಅಫ್ಲೆಕ್ ಅವರ ಪ್ರೇಮಕಥೆಯ ಬಗ್ಗೆ ಇಡೀ ಜಗತ್ತಿಗೇ ಗೊತ್ತು. ಈ ಜೋಡಿಯು ತಮ್ಮ ಪ್ರೇಮವನ್ನು ಸತಿ-ಪತಿಯಾಗಿಸಲು ಸಾಕಷ್ಟು ಅಡ್ಡಿ ಆತಂಕಗಳನ್ನು ಎದುರಿಸಿದ್ದಾರೆ. 2003ರ ಜೇ ಲೆನೋ ಶೋನ ವೀಡಿಯೊ ಇಂಟರ್ನೆಟ್‌ನಲ್ಲಿ ಈಗ ವೈರಲ್ ಆಗಿದೆ. ಈ ಶೋನಲ್ಲಿ ಬೆನ್ ಅಫ್ಲೆಕ್ ಅತಿಥಿಯಾಗಿ ಕಾಣಿಸಿಕೊಂಡು, ಅವರು ತಮ್ಮ ಪತ್ನಿ ಜೆನ್ನಿಫರ್ ಲೋಪೆಜ್‌ಗೆ 88 ಲಕ್ಷ ರೂ. ಮೌಲ್ಯದ ವಜ್ರ ಖಚಿತ ಟಾಯ್ಲೆಟ್ ಸೀಟ್ ಉಡುಗೊರೆಯಾಗಿ ನೀಡಿದ್ದಾರೆಂಬ ಮಾಹಿತಿಯನ್ನು ಬಹಿರಂಗಗೊಳಿಸಿದರು.

ಟಾಯ್ಲೆಟ್ ಸೀಟ್ ಅನ್ನು ಮುತ್ತುಗಳು, ಮಾಣಿಕ್ಯಗಳು, ನೀಲಮಣಿಗಳು ಮತ್ತು ಬೃಹತ್ ವಜ್ರದಂತಹ ದುಬಾರಿ ಆಭರಣಗಳಿಂದ ಮಾಡಲಾಗಿದೆ ಎಂಬ ಮಾಹಿತಿಯನ್ನು ಅವರು ಇದೇ ವೇಳೆ ಬಹಿರಂಗಪಡಿಸಿದ್ದಾರೆ. ಜೆನ್ನಿಫರ್ ಲೋಪೆಜ್ ಅವರು ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಯಾವುದೇ ಕೊಳಕಾದ ಮೇಲೆ ಕುಳಿತುಕೊಳ್ಳಲು ಅವರು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ ಅವರ ಪ್ರೀತಿಯ ಪತಿಯು ಮುತ್ತುಗಳು ಮತ್ತು ವಜ್ರ ಖಚಿತವಾದ ಟಾಯ್ಲೆಟ್ ಸೀಟ್ ನೀಡಿದ್ದಾರೆಂದು ಅವರಿಬ್ಬರಿಗೂ ಹತ್ತಿರವಾಗಿರುವವರು ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಈ ಸುದ್ದಿಯನ್ನೂ ಓದಿ: Diwali Gift: ದೀಪಾವಳಿ ಹಿನ್ನೆಲೆ ಕಂಪನಿ ಉದ್ಯೋಗಿಗಳಿಗೆ ದುಬಾರಿ ಕಾರು ಗಿಫ್ಟ್‌ ಕೊಟ್ಟ ಬಾಸ್!

Exit mobile version