Site icon Vistara News

Pro Khalistan attack on Indians: ವಿಕ್ಟೋರಿಯಾ ಮುಖ್ಯಸ್ಥರನ್ನು ಭೇಟಿಯಾಗಿ ಖಲಿಸ್ತಾನಿ ಗುಂಪಿನ ಬಗ್ಗೆ ಚರ್ಚಿಸಿದ ಭಾರತೀಯ ಹೈಕಮಿಷನ್‌

#image_title

ವಿಕ್ಟೋರಿಯಾ: ಆಸ್ಟ್ರೇಲಿಯಾದಲ್ಲಿರುವ ಹೈಕಮಿಷನರ್‌ ಅವರು ಅಲ್ಲಿನ ವಿಕ್ಟೋರಿಯಾದ ಮುಖ್ಯಸ್ಥರನ್ನು ಸೋಮವಾರ ಭೇಟಿಯಾಗಿದ್ದು, ಹಲವು ರೀತಿಯ ಚರ್ಚೆಗಳನ್ನು ನಡೆಸಿದ್ದಾರೆ. ದೇಶದಲ್ಲಿ ಖಲಿಸ್ತಾನಿ (Khalistan) ಗುಂಪುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ(Pro Khalistan attack on Indians).

ಇದನ್ನೂ ಓದಿ: Khalistan attack: ಆಸ್ಟ್ರೇಲಿಯದಲ್ಲಿ ತ್ರಿವರ್ಣ ಧ್ವಜ ಪ್ರದರ್ಶಿಸಿದವರ ಮೇಲೆ ಖಲಿಸ್ತಾನಿಗಳ ದಾಳಿ, ಐವರಿಗೆ ಗಾಯ

ಈ ವಿಚಾರವಾಗಿ ಹೈಕಮಿಷನರ್‌ ಆಗಿರುವ ಮನ್ಪ್ರೀತ್‌ ವೊಹ್ರಾ ಅವರು ಟ್ವೀಟ್‌ ಮಾಡಿದ್ದು, “ವಿಕ್ಟೋರಿಯಾದ ಮುಖ್ಯಸ್ಥರಾದ ಡೇನಿಯೆಲ್‌ ಆಂಡ್ರ್ಯೂ ಅವರನ್ನು ಭೇಟಿ ಮಾಡಲಾಯಿತು. ಅವರೊಂದಿಗೆ ನಮ್ಮ ಬಲವಾದ ಮತ್ತು ಬೆಳೆಯುತ್ತಿರುವ ದ್ವಿಪಕ್ಷೀಯ ಸಂಬಂಧ, ಮೆಲ್ಬೋರ್ನ್‌ನಲ್ಲಿ ಖಲಿಸ್ತಾನಿ ಗುಂಪುಗಳು ನಡೆಸಿದ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲಾಯಿತು. ಹಾಗೆಯೇ ದೇಶದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಉಗ್ರವಾದಿ ಖಲಿಸ್ತಾನಿ ಗುಂಪುಗಳನ್ನು ಹೇಗೆ ನಿಲ್ಲಿಸುವುದು ಎನ್ನುವ ಬಗ್ಗೆಯೂ ಚರ್ಚಿಸಲಾಯಿತು” ಎಂದು ತಿಳಿಸಿದ್ದಾರೆ.

ಈ ಚರ್ಚೆಗೂ ಮೊದಲು ಮೆಲ್ಬೋರ್ನ್‌ನಲ್ಲಿ ಖಲಿಸ್ತಾನಿ ಗುಂಪುಗಳು ಹಿಂಸಾಚಾರ ನಡೆಸಿದ ಬಿಎಪಿಎಸ್‌ ಶ್ರೀ ಸ್ವಾಮಿನಾರಾಯಣ ದೇಗುಲಕ್ಕೂ ಮನ್ಪ್ರೀತ್‌ ಅವರು ಭೇಟಿ ನೀಡಿದ್ದರು. ಅಲ್ಲಿನ ಆಡಳಿತ ಮಂಡಳಿಯೊಂದಿಗೆ ಹಿಂಸಾಚಾರದ ಕುರಿತಾಗಿ ಚರ್ಚೆ ನಡೆಸಿದ್ದಾಗಿ ಅವರು ಟ್ವೀಟ್‌ ಮುಖಾಂತರ ತಿಳಿಸಿದ್ದರು.

ಭಾನುವಾರದಂದು ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾದ ಹಿಂದೂ ಸಮುದಾಯವು ಖಲಿಸ್ತಾನಿ ಗುಂಪುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುವುದಕ್ಕೆ ತಯಾರಿ ಮಾಡಿಕೊಂಡಿತ್ತು. ಆದರೆ ಖಲಿಸ್ತಾನಿ ಗುಂಪಿನ ಸದಸ್ಯರ ಅವರ ಮೇಲೆ ದಾಳಿ ನಡೆಸಿ, ಹಿಂಸಾಚಾರ ಮಾಡಿದ್ದರು. ಖಡ್ಗಗಳನ್ನು ಹಿಡಿದಿದ್ದ ಖಲಿಸ್ತಾನಿಗಳನ್ನು ಪೊಲೀಸರು ಬಂಧಿಸಿದ್ದರು.

Exit mobile version