ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಉಗ್ರರು ಹಿಂದು ದೇವಾಲಯವೊಂದರ ಮೇಲೆ ದಾಳಿ (Temple Attack in Australia) ನಡೆಸಿದ್ದು, ಭಾರತ ಹಾಗೂ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಬರೆಯುವ ಮೂಲಕ ಉದ್ಧಟತನ ಮಾಡಿದ್ದಾರೆ. ದೇವಾಲಯದ ಕೆಲ ಭಾಗಗಳನ್ನು ಉಗ್ರರು ಧ್ವಂಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮೆಲ್ಬೋರ್ನ್‌ನ ಮಿಲ್ ಪಾರ್ಕ್‌ನಲ್ಲಿರುವ ಬಾಪ್ಸ್ ಸ್ವಾಮಿನಾರಾಯಣ ದೇಗುಲದ ಮೇಲೆ (BAPS Swaminarayan Mandir) ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ. ಹಾಗೆಯೇ, ದೇವಾಲಯದ ಗೋಡೆಗಳ ಮೇಲೆ ʼಹಿಂದುಸ್ತಾನ ಮುರ್ದಾಬಾದ್ʼ, ʼಮೋದಿ ಹಿಟ್ಲರ್ʼ ಎಂಬ ಸಾಲುಗಳನ್ನು ಬರೆದಿದ್ದಾರೆ.
“ಶಾಂತಿ ಹಾಗೂ ಸಾಮರಸ್ಯದಿಂದ ಕೂಡಿರುವ ಹಿಂದು ಸಮುದಾಯದ ದೇವಾಲಯದ ಮೇಲೆ ದಾಳಿ ಮಾಡಿರುವುದು ಖಂಡನೀಯ” ಎಂದು ಆಸ್ಟ್ರೇಲಿಯಾ ಸಂಸದ ಇವ್ಯಾನ್ ಮುಲ್ಹೋಲ್ಯಾಂಡ್ ಹೇಳಿದ್ದಾರೆ. ಹಿಂದು ಸಂಘಟನೆಗಳು ಕೂಡ ದಾಳಿಯನ್ನು ಖಂಡಿಸಿದ್ದು, ದೂರು ದಾಖಲಿವೆ.
ಇದನ್ನೂ ಓದಿ | Durga Bhawan | ಅಲ್ಲಾ ಹು ಅಕ್ಬರ್ ಎನ್ನುತ್ತ ಬ್ರಿಟನ್‌ನಲ್ಲಿ ಹಿಂದೂ ದೇಗುಲದ ಮೇಲೆ 3 ಸಾವಿರ ಜನರಿಂದ ದಾಳಿ!