ಮನಿಲಾ: ಫಿಲಿಪ್ಪೀನ್ಸ್ ದ್ವೀಪರಾಷ್ಟ್ರದ ರಾಜಧಾನಿ ಮನಿಲಾದ ಮೃಗಾಲಯದಲ್ಲಿ ಹಲವಾರು ದಶಕಗಳಿಂದ ಒಂಟಿಯಾಗಿ ಬದುಕಿದ್ದ ಹೆಣ್ಣಾನೆ ʼಮಾಲಿʼ ಮೃತಪಟ್ಟಿದೆ. ಇದು ಫಿಲಿಪ್ಪೀನ್ಸ್‌ನಲ್ಲಿದ್ದ (Philippines) ಏಕೈಕ ಆನೆ (ವಿಶ್ವದ (Last elephant) ಆಗಿತ್ತು.
ಮನಿಲಾದ ಮೃಗಾಲಯದಲ್ಲಿ ಸಣ್ಣ ಆವರಣದಲ್ಲಿ ಹೆಚ್ಚಿನ ಚಟುವಟಿಕೆಗಳಿಲ್ಲದಂತೆ ಸಾಕಲಾಗಿದ್ದ ಮಾಲಿಯನ್ನು ಪ್ರಾಣಿ ಹಕ್ಕುಗಳ ಹೋರಾಟಗಾರರು ʼವಿಶ್ವದ ಅತ್ಯಂತ ದುಃಖಿ ಆನೆʼ (saddest elephant of world) ಎಂದು ಕರೆದಿದ್ದರು. ಅದನ್ನು ಬಂಧನದಿಂದ ಬಿಡಿಸಬೇಕು, ಕಾಡಿಗೆ ಬಿಡಬೇಕು ಅಥವಾ ಅದಕ್ಕೆ ಒಂದು ಜೋಡಿಯನ್ನು ಒದಗಿಸಬೇಕು ಎಂಬ ಬೇಡಿಕೆಗಳಿದ್ದವು. ಆದರೆ ಅದ್ಯಾವುದನ್ನೂ ಫಿಲಿಪ್ಪೀನ್ಸ್ ಸರ್ಕಾರ ಮಾನ್ಯ ಮಾಡಿರಲಿಲ್ಲ.
ʼವಿಶ್ವಮಾಲಿʼ ಎಂಬುದು ಇದರ ಪೂರ್ತಿ ಹೆಸರಾಗಿತ್ತು. ಇದನ್ನು ಶ್ರೀಲಂಕಾದ ಸರ್ಕಾರ 1981ರಲ್ಲಿ ಫಿಲಿಪ್ಪೀನ್ಸ್‌ನ ಪ್ರಥಮ ಮಹಿಳೆ ಇಮೆಲ್ಡಾ ಮಾರ್ಕೋಸ್ ಅವರಿಗೆ ಉಡುಗೊರೆಯಾಗಿ ನೀಡಿತ್ತು. ಆಗ ಮಾಲಿಗೆ 11 ತಿಂಗಳು. ಆಗ ಶಿವ ಎಂಬ ಇನ್ನೊಂದು ಆನೆಯೂ ಮನಿಲಾ ಮೃಗಾಲಯದಲ್ಲಿತ್ತು. 1977ರಲ್ಲಿ ಬಂದ ಅದು 1990ರಲ್ಲಿ ಮೃತಪಟ್ಟಿತು. ಆ ಬಳಿಕ ಮಾಲಿ ಒಂಟಿಯಾಗಿ ಇಷ್ಟು ವರ್ಷಗಳ ಕಾಲ (33 ವರ್ಷ) ಜೀವನ ಸವೆಸಿದೆ.
ಮನಿಲಾ ಮೃಗಾಲಯದಲ್ಲಿ ಆನೆಯಂಥ ಪ್ರಾಣಿಗಳನ್ನು ನೋಡಿಕೊಳ್ಳುವುದಕ್ಕೆ ಬೇಕಾದ ಸೂಕ್ತ ವ್ಯವಸ್ಥೆಗಳಿಲ್ಲ ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರರು ಆರೋಪಿಸಿದ್ದಾರೆ. ಮಾಲಿಗೆ ಕ್ಯಾನ್ಸರ್ ಆಗಿತ್ತು. ಆದರೆ ಇದು ಮಾಲಿ ಸತ್ತ ಬಳಿಕ ಅಟಾಪ್ಸಿ ನಡೆಸಿದಾಗಲಷ್ಟೇ ವೈದ್ಯರಿಗೆ ತಿಳಿದುಬಂತು.
ಫಿಲಿಪ್ಪೀನ್ಸ್‌ನಲ್ಲಿ ಆನೆಗಳಿಲ್ಲ. 13ನೇ ಶತಮಾನದವರೆಗೂ ಇಲ್ಲಿ ಆನೆಗಳಿದ್ದವೆಂದು ಹೇಳಲಾಗುತ್ತದೆ. ಆದರೆ ನಂತರ ಅವು ಅಳಿದಿವೆ.
ಇದನ್ನೂ ಓದಿ: Elephant Attack : ಮಂಡ್ಯದಲ್ಲಿ ಆನೆ ದಾಳಿಗೆ ಮಹಿಳೆ ಬಲಿ; ಹೊಲಕ್ಕೆ ಹೋದಾಗ ಅಟ್ಯಾಕ್