Site icon Vistara News

Covid Deaths In China | ಸೋಂಕಿಗೆ ತತ್ತರಿಸಿದ ಚೀನಾ, ಶವಾಗಾರದ ಎದುರು ಹೆಣಗಳ ಸಾಲು, ಇಲ್ಲಿದೆ ಮನಕಲಕುವ ವಿಡಿಯೊ

China Covid Deaths

ಬೀಜಿಂಗ್‌: ಕೊರೊನಾ ಅಬ್ಬರಕ್ಕೆ ಚೀನಾ ತತ್ತರಿಸಿದೆ. ನಿತ್ಯ ಕೋಟ್ಯಂತರ ಜನರಿಗೆ ಸೋಂಕು, ಸಾವಿರಾರು ಜನರ ಸಾವು (Covid Deaths In China), ತಹಬಂದಿಗೆ ಬಾರದ ಪ್ರಕರಣಗಳು ಇಡೀ ದೇಶವನ್ನು ಬಾಧಿಸುತ್ತಿವೆ. ಅದರಲ್ಲೂ, ಕೊರೊನಾದಿಂದ ಮೃತಪಟ್ಟವರ ಶವ ಸುಡಲು ಕೂಡ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶವಾಗಾರದ ಎದುರು ಶವ ಸುಡಲು ನೂರಾರು ಹೆಣಗಳನ್ನು ಇಟ್ಟುಕೊಂಡು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಮನಕಲಕುವ ವಿಡಿಯೊ ಲಭ್ಯವಾಗಿದ್ದು, ಚೀನಾದ ಪರಿಸ್ಥಿತಿಯನ್ನು ವಿಡಿಯೊ ಸಾರಿ ಹೇಳುತ್ತಿದೆ.

ನಿತ್ಯ ಕೋಟ್ಯಂತರ ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ, ಮೃತಪಟ್ಟವರನ್ನು ಸುಡಲು ಕೂಡ ಆಗುತ್ತಿಲ್ಲ. ಶವಾಗಾರಗಳ ಮುಂದೆ ಸಾವಿರಾರು ಹೆಣಗಳನ್ನು ಇಟ್ಟುಕೊಂಡು ಅವರ ಕುಟುಂಬಸ್ಥರು ಕಾಯುವಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆರೋಗ್ಯ ತಜ್ಞರೊಬ್ಬರು ಶವಗಳ ಸಾಲಿನ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಈ ವಿಡಿಯೊ ಮನಕಲಕುವಂತಿದೆ.

ಇದನ್ನೂ ಓದಿ | China Covid Information | ಕೊರೊನಾ ಸೋಂಕಿತರ ಮಾಹಿತಿ ವಿಚಾರದಲ್ಲಿ ಚೀನಾ ಕಳ್ಳಾಟ, ವರದಿ ನೀಡದಿರಲು ತೀರ್ಮಾನ

Exit mobile version