Site icon Vistara News

31 ಜನರ ಸಜೀವ ದಹನಕ್ಕೆ ಕಾರಣವಾದ ರೆಸ್ಟೋರೆಂಟ್ ಮಾಲೀಕರ ಆಸ್ತಿ ಮುಟ್ಟುಗೋಲು!

LPG Explosion at China Restaurant

ಬೀಜಿಂಗ್, ಚೀನಾ: ಚೀನಾದ (China) ಯಿಂಚುವಾನ್‌ (Yinchuan) ರಾಜ್ಯದ ನಗರವೊಂದರ ರೆಸ್ಟೋರೆಂಟ್‌ನಲ್ಲಿ (Restaurant) ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (LPG Gas Explosion) ಸ್ಫೋಟಗೊಂಡ ಪರಿಣಾಮ ಕನಿಷ್ಠ 31 ಜನರು ಜೀವಂತವಾಗಿ ಸುಟ್ಟು ಕರಕಲರಾಗಿದ್ದಾರೆ (31 people dead) ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆಯ ಬುಧವಾರ ರಾತ್ರಿ ಸಂಭವಿಸಿದೆ. ಮೂರು ದಿನಗಳ ಡ್ರ್ಯಾಗನ್ ಬೋಟ್ ಫೆಸ್ಟಿವಲ್ ರಜೆಯ ಮುನ್ನಾದಿನದಂದು ಬುಧವಾರ ರಾತ್ರಿ ಈ ಸ್ಫೋಟ ಸಂಭವಿಸಿದೆ. ಹಬ್ಬದ ಹಿನ್ನೆಲೆಯಲ್ಲಿ ಬಹಳಷ್ಟು ಜನರು ಒಂದೆಡೆ ಸೇರಿದ್ದರು.

ನಿಂಗ್ಕ್ಸಿಯಾ ಸ್ವಾಯತ್ತ ಪ್ರದೇಶದ ರಾಜಧಾನಿಯಾದ ಡೌನ್‌ಟೌನ್ ಯಿಂಚುವಾನ್‌ನ ವಸತಿ ಪ್ರದೇಶದಲ್ಲಿರುವ ಫ್ಯೂಯಾಂಗ್ ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ ರಾತ್ರಿ ಎಂಟುವರೆಗೆ ಈ ಸ್ಫೋಟ ಸಂಭವಿಸಿದೆ. ಬೆಂಕಿ ನಂದಿಸಲು ಸುಮಾರು 12 ಅಗ್ನಿಶಾಮಕಗಳು ಪ್ರಯತ್ನಿಸುತ್ತಿರುವ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೆಸ್ಟೋರೆಂಟ್‌ನಿಂದ ಭಾರೀ ಪ್ರಮಾಣದಲ್ಲಿ ಹೊಗೆ ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸ್ಫೋಟ ಸಂಭವಿಸಿದ ಸ್ಥಳವು ಹಲವಾರು ತಿನಿಸುಗಳು ಮತ್ತು ಮನರಂಜನಾ ಸ್ಥಳಗಳಿಗೆ ಪ್ರಮುಖ ಜಾಗವಾಗಿದೆ. ಸ್ಫೋಟಸಂಭವಿಸಿದ ಹೊಟೇಲ್‌ನ ಗಾಜಿನ ಚೂರುಗಳು ಮತ್ತು ಇತರ ಅವಶೇಷಗಳು ರಸ್ತೆ ತುಂಬೆಲ್ಲ ಬಿದ್ದಿವೆ. ಸ್ಫೋಟದ ಬೆನ್ನಲ್ಲೇ, ರೆಸ್ಟೋರೆಂಟ್ ಮಾಲೀಕ ಸೇರಿದಂತೆ 9 ಜನರನ್ನು ಪೊಲೀಸರ ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: India-China talks : ಗಡಿಯಲ್ಲಿ ಚೀನಾ ನಿರ್ಮಿಸಿದ ಏರ್‌ಫೀಲ್ಡ್‌, ರೈಲ್ವೆ, ಕ್ಷಿಪಣಿ ನೆಲೆಗಳ ಚಿತ್ರ ಸೆರೆಹಿಡಿದ ಭಾರತದ ಉಪಗ್ರಹ

ಎಲ್‌ಪಿಜಿ ಸೋರಿಕೆಯಿಂದಾಗಿ ಬಾರ್ಬೆಕ್ಯೂ ರೆಸ್ಟೋರೆಂಟ್ ಕಾರ್ಯಾಚರಣೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರಾದೇಶಿಕ ಕಮ್ಯುನಿಸ್ಟ್ ಪಕ್ಷದ ಸಮಿತಿಯನ್ನು ಉಲ್ಲೇಖಿಸಿ ರಾಜ್ಯ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ. ಈ ಘಟನೆಯಲ್ಲಿ ಇನ್ನೂ ಏಳು ಜನರು ಗಾಯಗೊಂಡಿದ್ದು, ಈ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version