Site icon Vistara News

Viru Nikah: ಪುರುಷರ ಜತೆ ಡಾನ್ಸ್‌ ಮಾಡಿದ್ದಕ್ಕೆ ಕಿರೀಟ ಕಳೆದುಕೊಂಡ ಬ್ಯೂಟಿ ಕ್ವೀನ್;‌ ಏಕೆ?

Viru Nikah Ngadau

Malaysian beauty queen Viru Nikah stripped of title after viral holiday video

ಕೌಲಾಲಂಪುರ: ಒಂದೊಂದು ದೇಶದಲ್ಲಿ ಸಂಪ್ರದಾಯ, ಸಂಸ್ಕೃತಿ, ಆಚರಣೆಗಳು ತುಂಬ ಕಠಿಣವಾಗಿರುತ್ತವೆ. ಎಲ್ಲರೂ ಆ ಆಚರಣೆಗಳನ್ನು ಪಾಲಿಸುವ ಮೂಲಕ ದೇಶದ ಘನತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತಾರೆ. ಸಂಸ್ಕೃತಿ, ಸಂಪ್ರದಾಯದಲ್ಲಿಯೇ ಅಸ್ಮಿತೆಯನ್ನು ಕಾಣುತ್ತಾರೆ. ಆದರೆ, ಕೆಲವೊಬ್ಬರು ಈ ಆಚಾರ, ವಿಚಾರ, ಸಂಸ್ಕೃತಿಗೆ ಧಕ್ಕೆ ತಂದರೆ ಅವರ ವಿರುದ್ಧ ಜನ ಮುಗಿಬೀಳುತ್ತಾರೆ. ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಪುರುಷರ ಜತೆ ಡಾನ್ಸ್‌ ಮಾಡಿದ ಕಾರಣಕ್ಕಾಗಿ ಮಲೇಷ್ಯಾದ (Malaysia) ಬ್ಯೂಟಿ ಕ್ವೀನ್‌ ವಿರು ನಿಕಾಹ್‌ ಟೆರಿನ್ಸಿಪ್‌ (Viru Nikah Terinsip) ಅವರು ಅಪ್ರತಿಮ ಸೌಂದರ್ಯಕ್ಕಾಗಿ ತಾವು ಗಳಿಸಿದ ಕಿರೀಟವನ್ನೇ ಕಳೆದುಕೊಂಡಿದ್ದಾರೆ.

ಹೌದು, ಥಾಯ್ಲೆಂಡ್‌ನಲ್ಲಿ ತುಂಡುಡುಗೆ ತೊಟ್ಟ ಪುರುಷರ ಜತೆ ವಿರು ನಿಕಾಹ್‌ ಟೆರಿನ್ಸಿಪ್‌ ಅವರು ನೃತ್ಯ ಮಾಡಿದ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ದೇಶಾದ್ಯಂತ ವಿರು ನಿಕಾಹ್‌ ಟೆರಿನ್ಸಿಪ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದರಿಂದಾಗಿ ವಿರು ನಿಕಾಹ್‌ ಟೆರಿನ್ಸಿಪ್‌ ಅವರು 2023ರಲ್ಲಿ ಅಪ್ರತಿಮ ಸೌಂದರ್ಯಕ್ಕಾಗಿ 2023ರಲ್ಲಿ ಮುಡಿಗೇರಿಸಿಕೊಂಡಿದ್ದ ಉಂಡುಕ್‌ ಗಡೌ ಜೊಹೊರ್‌ (Unduk Ngadau Johor) ಕಿರೀಟವನ್ನು ಅವರು ಹಿಂತಿರುಗಿಸಿದ್ದಾರೆ. ಒಂದು ನೃತ್ಯವು ಅವರ ಕಿರೀಟವನ್ನೇ ಬಲಿ ಪಡೆದುಕೊಂಡಿದೆ.

ಏಕೆ ಕಿರೀಟ ವಾಪಸ್?‌

ಮಲೇಷ್ಯಾದಲ್ಲಿ ಸುಂದರಿಯರಿಗೆ ಉಂಡುಕ್‌ ಗಡೌ ಜೊಹೊರ್‌ ಎಂಬ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮಲೇಷ್ಯಾ ಪುರಾಣಶಾಸ್ತ್ರದಲ್ಲಿ ಉಲ್ಲೇಖ ಇರುವ, ಸೌಂದರ್ಯ, ಮೌಲ್ಯಗಳು, ಒಳ್ಳೆಯ ವರ್ತನೆ, ಸನ್ನಡತೆಗೆ, ಪರಿಶುದ್ಧ ಹೃದಯದ ಸಂಕೇತವಾಗಿರುವ ಹುಮಿನೊಡುನ್‌ ಎಂಬ ಮಹಿಳೆಗೆ ಗೌರವ ನೀಡುವ ಪ್ರತೀಕವಾಗಿ ಸುಂದರಿಯರಿಗೆ ಪ್ರಶಸ್ತಿ ನೀಡಲಾಗುತ್ತದೆ. ಹಾಗಾಗಿ, ಆ ಪ್ರಶಸ್ತಿ ಪಡೆದವರು ಕೂಡ ಸನ್ನಡತೆ ತೋರಬೇಕು ಎಂಬುದು ಮಲೇಷ್ಯಾ ನಾಗರಿಕರ ನಂಬಿಕೆಯಾಗಿದೆ.

24 ವರ್ಷದ ವಿರು ನಿಕಾಹ್‌ ಟೆರಿನ್ಸಿಪ್‌ ಅವರು ಥಾಯ್ಲೆಂಡ್‌ ಪ್ರವಾಸದ ವೇಳೆ ತುಂಡುಡುಗೆ ತೊಟ್ಟ ಪುರುಷರೊಂದಿಗೆ ನೃತ್ಯ ಮಾಡಿದ್ದು ಹುಮಿನೊಡುನ್‌ ಅವರಿಗೆ ಮಾಡಿದ ಅವಮಾನ ಎಂದೇ ಭಾವಿಸಿದ್ದಾರೆ. ಇದರಿಂದಾಗಿಯೇ ವಿರು ನಿಕಾಹ್‌ ಟೆರಿನ್ಸಿಪ್‌ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಸ್ವಯಂಪ್ರೇರಿತಳಾಗಿ ನನ್ನ ಕಿರೀಟ, ಸುಂದರಿ ಎಂಬ ಬಿರುದನ್ನು ಹಿಂತಿರುಗಿಸಿದ್ದೇನೆ ಎಂಬುದಾಗಿ ವಿರು ನಿಕಾಹ್‌ ಟೆರಿನ್ಸಿಪ್‌ ತಿಳಿಸಿದ್ದಾರೆ. ಇನ್ನು, ವಿರು ನಿಕಾಹ್‌ ಟೆರಿನ್ಸಿಪ್‌ ಅವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಜನ ಮಾತನಾಡಿದ್ದಾರೆ.

ಇದನ್ನೂ ಓದಿ: Aishwarya rai | 48ರಲ್ಲೂ ಕಂಗೊಳಿಸುವ ಐಶ್ ಫಿಟ್‌ನೆಸ್‌ ರಹಸ್ಯ ಇಲ್ಲಿದೆ!

Exit mobile version