ವಾಷಿಂಗ್ಟನ್: ನಸೀಬು ಕೈಕೊಟ್ಟಾಗ ಒಬ್ಬ ವ್ಯಕ್ತಿ ಎಂತಹ ತೊಂದರೆಗೆ ಸಿಲುಕುತ್ತಾನೆ ಎಂಬುದಕ್ಕೆ ಅಮೆರಿಕದ ಮೈಕ್ ಕ್ರುಮ್‌ಹೋಲ್ಜ್ ಎಂಬ ೨೧ ವರ್ಷದ ಯುವಕನೇ ಸಾಕ್ಷಿಯಾಗಿದ್ದಾನೆ. ಕಾಂಟಾಕ್ಟ್ ಲೆನ್ಸ್ ಹಾಕಿಕೊಂಡೇ ಮಲಗಿದ ಮೈಕ್‌ನ ಒಂದು ಕಣ್ಣನ್ನೇ ಕೀಟಗಳು (Viral News) ತಿಂದುಹಾಕಿವೆ. ಮೈಕ್‌ನ ಒಂದು ಬಲಗಣ್ಣು ದೃಷ್ಟಿಹೀನವಾಗಿದ್ದು, ಬೇರೆ ಕಣ್ಣು ಅಳವಡಿಸಬೇಕು ಎಂಬುದಾಗಿ ವೈದ್ಯರು ಸೂಚಿಸಿದ್ದಾರೆ.
ಮೈಕ್ ಕ್ರುಮ್‌ಹೋಲ್ಜ್ ಕಳೆದ ಏಳು ವರ್ಷದಿಂದ ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಿದ್ದಾನೆ. ಅವುಗಳನ್ನು ಬಿಚ್ಚಿಡದೆ ಮಲಗಿದರೆ ಕಣ್ಣುಗಳಿಗೆ ತೊಂದರೆ (Eye Infection Or Pink Eye) ಆಗುತ್ತದೆ ಎಂಬುದೂ ಆತನಿಗೆ ಗೊತ್ತಿದೆ. ಆದರೆ, ಬಿಡುವಿಲ್ಲದ ಕೆಲಸ ಮಧ್ಯೆ ವಿಶ್ರಾಂತಿ ಸ್ವಲ್ಪ ಸಮಯ ಮಲಗಿದರಾಯಿತು ಎಂದು ನಿದ್ದೆಗೆ ಜಾರಿದವನಿಗೆ ಒಂದು ಕಣ್ಣೇ ಕಳೆದುಕೊಳ್ಳುವಂತಾಗಿದೆ.
ಇದನ್ನೂ ಓದಿ: Nepal plane crash | ವೈರಲ್ ವಿಡಿಯೊ| ಯೇತಿ ಏರ್‌ಲೈನ್ಸ್‌ನ ಕೊನೆಯ ಕ್ಷಣಗಳು ಫೇಸ್‌ಬುಕ್‌ನಲ್ಲಿ ದಾಖಲು!
ನಿದ್ದೆಯಿಂದ ಎದ್ದವನಿಗೆ ಬಲಗಣ್ಣಿನ ತೊಂದರೆ ಕಾಣಿಸಿಕೊಂಡಿದೆ. ಲೆನ್ಸ್ ಹಾಕಿಕೊಂಡು ಮಲಗಿದ್ದಕ್ಕೆ ಹೀಗಾಗಿರಬಹುದು ಎಂದು ಆತ ಭಾವಿಸಿದ್ದಾನೆ. ಆದರೆ, ಯಾವಾಗ ನೋವು ಜಾಸ್ತಿಯಾಯಿತೋ ವೈದ್ಯರ ಬಳಿ ತೆರಳಿದ್ದಾನೆ. ವೈದ್ಯರು ತಪಾಸಣೆ ಮಾಡಿದ ಬಳಿಕ ಕೀಟಗಳು ಮಾಡಿದ ಅನಾಹುತವು ಗೊತ್ತಾಗಿದೆ. “ನನಗೆ ಒಂದು ಕಣ್ಣು ಕಾಣಿಸುತ್ತಿಲ್ಲ. ಕೆಲಸ ಮಾಡಲು ಬಿಡಿ, ಹೊರಗೆ ಹೋಗಲು ಕೂಡ ಆಗುತ್ತಿಲ್ಲ. ಈ ಸಮಸ್ಯೆಯಿಂದ ಹೇಗಾದರೂ ಮಾಡಿ ಹೊರಬರಲು ಯತ್ನಿಸುತ್ತಿದ್ದೇನೆ” ಎಂಬುದಾಗಿ ಅಳಲು ತೋಡಿಕೊಂಡಿದ್ದಾನೆ. ಆತನಿಗೆ, ಕಣ್ಣಿನ ಕಸಿ ಮಾಡಬೇಕು ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.