Site icon Vistara News

Man Survives at Sea | ಸಮುದ್ರದಲ್ಲಿ ಕಳೆದು ಹೋದ, 24 ದಿನ ಕೆಚಪ್‌, ಶುಂಠಿ ಪುಡಿ ತಿಂದು ಬದುಕಿದ, ಇದು ಕಾಸ್ಟ್‌ ಅವೇ ಸಿನಿಮಾದ ನೈಜ ಕಥನ

Man Survives at Sea

ಬೊಗೊಟ: ಕಾಸ್ಟ್‌ ಅವೇ (Cast Away) ಸಿನಿಮಾ ನೋಡಿದವರಿಗೆ ಈ ಕತೆ ಆಪ್ತವಾಗುತ್ತದೆ. ವಿಮಾನ ಸಮುದ್ರಕ್ಕೆ ಪತನವಾಗಿ, ಎಲ್ಲರೂ ಸತ್ತು, ಒಬ್ಬನೇ ಬದುಕುಳಿಯುತ್ತಾನೆ. ಕಾಡಿನ ಮಧ್ಯೆ, ಸಮುದ್ರದ ತೀರದಲ್ಲಿ ಒಬ್ಬನೇ (ಸಿನಿಮಾ ಹೀರೊ ಟಾಮ್‌ ಹಾಂಕ್ಸ್)‌ ವರ್ಷಗಟ್ಟಲೇ ಕಾಲ ಕಳೆಯುತ್ತಾನೆ. ಕೊನೆಗೆ ಆತನನ್ನು ರಕ್ಷಿಸಲಾಗುತ್ತದೆ. ಕಾಸ್ಟ್‌ ಅವೇ ಸಿನಿಮಾದ ಸಾರಾಂಶ ಇಷ್ಟೇ ಆದರೂ, ಅದರ ಸಂದೇಶ ಅಗಾಧವಾದುದು. ಈ ಹಾಲಿವುಡ್‌ ಸಿನಿಮಾದ ರೀತಿಯೇ ಸಮುದ್ರದಲ್ಲಿ ಕಳೆದುಹೋದ ವ್ಯಕ್ತಿಯೊಬ್ಬನನ್ನು (Man Survives at Sea) 24 ದಿನದ ಬಳಿಕ ರಕ್ಷಿಸಲಾಗಿದೆ.

ಹೌದು, ಕೆರಿಬಿಯನ್‌ ದ್ವೀಪವಾದ ಡಾಮಿನಿಕಾದವರಾದ ಎಲ್ವಿಸ್‌ ಫ್ರಾಂಕೋಯಿಸ್‌ ಅವರು ಕಳೆದ ಡಿಸೆಂಬರ್‌ನಲ್ಲಿ ಕೊಲೊಂಬಿಯನ್‌ ಸಾಗರ ಪ್ರದೇಶದಲ್ಲಿ ಹಡಗು ರಿಪೇರಿ ಮಾಡುವಾಗ ಸಿಗ್ನಲ್‌ ಕಳೆದುಕೊಂಡು ನಾಪತ್ತೆಯಾಗಿದ್ದಾರೆ. 24 ದಿನವೂ ಯಾರ ಸಂಗಡವೂ ಇಲ್ಲದೆ, ಹಡಗಿನಲ್ಲಿಯೇ ಕಾಲ ಕಳೆದ ಅವರು 24 ದಿನವೂ ಹಡಗಿನಲ್ಲಿದ್ದ ಕೆಚಪ್‌, ಶುಂಠಿ ಪುಡಿ ತಿಂದು ಬದುಕಿದ್ದಾರೆ. ಕೊನೆಗೆ ಜನವರಿ 15ರಂದು ಕೊಲೊಂಬಿಯನ್‌ ನೇವಿಯು ಇವರನ್ನು ರಕ್ಷಿಸಿದೆ. ಸದ್ಯ, ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಆರೋಗ್ಯದಿಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಹಡಗಿನಲ್ಲಿ ಕಳೆದ ದಿನಗಳು ಹಾಗೂ ರಕ್ಷಣೆ ಕುರಿತು ಎಲ್ವಿಸ್‌ ಫ್ರಾಂಕೋಯಿಸ್‌ ಮಾತನಾಡಿದ್ದು, “ನಾನು ಸಿಗ್ನಲ್‌ ಕಳೆದುಕೊಂಡು ಸಮುದ್ರದಲ್ಲಿಯೇ ಕಳೆದುಹೋದೆ. 24 ದಿನ ಯಾರೂ ಇರಲಿಲ್ಲ, ತಿನ್ನಲೂ ಸಿಗಲಿಲ್ಲ. ಎಲ್ಲಿದ್ದೇನೆ ಎಂಬುದೂ ಗೊತ್ತಿರಲಿಲ್ಲ. ಅದೊಂದು ದಿನ, ವಿಮಾನ ಕಾಣಿಸಿತು. ನನ್ನ ಬಳಿ ಇದ್ದ ಕನ್ನಡಿಯನ್ನು ಸಿಗ್ನಲ್‌ ಆಗಿ ಬಳಸಿದೆ. ಕೊನೆಗೆ ನನ್ನನ್ನು ರಕ್ಷಿಸಲಾಯಿತು” ಎಂದಿದ್ದಾರೆ.

ಇದನ್ನೂ ಓದಿ | Viral Video | ಅಬ್ಬಾ, ಅಜ್ಜ ಪಾರಾದರಲ್ಲ; ಆದರೂ ಬಸ್​ನಡಿ ಬಿದ್ದ ವೃದ್ಧ ಬದುಕಿ ಬಂದಿದ್ದು ಹೇಗೆ?!

Exit mobile version