12 ಪತ್ನಿಯರ ಗಂಡನಾಗಿ, 102 ಮಕ್ಕಳಿಗೆ ಅಪ್ಪನಾದ ಉಗಾಂಡಾದ ಮೂಸಾ ಹಸಹ್ಯ ಎಂಬಾತ ಈಗ ತನ್ನ ಪತ್ನಿಯರಿಗೆ ‘ಗರ್ಭ ನಿರೋಧಕ ಮಾತ್ರೆ’ ತೆಗೆದುಕೊಳ್ಳಿ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾನೆ. ಉಗಾಂಡಾದ ಬುಗಿಸಾದಲ್ಲಿರುವ 12 ಬೆಡ್ರೂಮ್ಗಳ ಮನೆಯೊಂದರಲ್ಲಿ ತನ್ನ 12 ಪತ್ನಿಯರು, 102 ಮಕ್ಕಳು ಮತ್ತು 568 ಮೊಮ್ಮಕ್ಕಳೊಂದಿಗೆ ವಾಸವಾಗಿರುವ ಮೂಸಾ, ‘ನನಗೀಗ ಸಾಕಾಗಿದೆಯಪ್ಪ. ನಮ್ಮ ಬಳಿ ಇರುವ ಸೀಮಿತ ಸಂಪನ್ಮೂಲಗಳ ಕಾರಣದಿಂದ ಸರಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಇನ್ನು ಮಕ್ಕಳನ್ನು ಮಾಡಿಕೊಳ್ಳಲು ಸಾಧ್ಯವೇ ಇಲ್ಲ’ ಎಂದಿದ್ದಾರೆ.
‘ನನ್ನ ಸಂಸಾರ ತುಂಬ ದೊಡ್ಡದಾಯಿತು. ಕುಟುಂಬವನ್ನು ಸಲುಹುವುದು ಕಷ್ಟವಾಗುತ್ತಿದೆ. ನನ್ನ 12 ಪತ್ನಿಯರಲ್ಲಿ ಇನ್ನೂ ಹೆರಿಗೆ ಸಾಮರ್ಥ್ಯ ಇರುವವರೂ ಇದ್ದಾರೆ. ಅವರಿಗೆಲ್ಲ ನಾನು ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವಂತೆ ಹೇಳಿದ್ದೇನೆ. ಒಂದು ಟಿಪ್ಪಣಿಯನ್ನು ಬರೆದು ಎಲ್ಲರಿಗೂ ಕೊಟ್ಟುಬಿಟ್ಟಿದ್ದೇನೆ’ ಎಂದು ತಿಳಿಸಿದ್ದಾರೆ.
ಅಂದಹಾಗೆ ಮೂಸಾ ಹಸಹ್ಯಗೆ ಈಗ 67ವರ್ಷ. ‘ನಾನೊಬ್ಬ ಉದ್ಯಮಿಯಾಗಿದ್ದೆ. ಹಾಗೇ, ನನ್ನ ಹಳ್ಳಿಯ ಅಧ್ಯಕ್ಷನೂ ಆಗಿದ್ದೆ. ನಾನು ಯಥೇಚ್ಛವಾಗಿ ದುಡ್ಡುದುಡಿಯುತ್ತಿದ್ದೆ. ಹೀಗಾಗಿ ಹೆಚ್ಚೆಚ್ಚು ಮಹಿಳೆಯರನ್ನು ಮದುವೆಯಾಬೇಕು ಎನ್ನಿಸಿತು. ಮಕ್ಕಳಾದರು..ಮೊಮ್ಮಕ್ಕಳೂ ಹುಟ್ಟಿದರು. ಆದರೆ ಈಗ ನನ್ನ ಗಳಿಕೆ ಕಡಿಮೆಯಾಗಿದೆ. ಸಣ್ಣ ಮಕ್ಕಳು, ಮೊಮ್ಮಕ್ಕಳಿಗೆ ಶಿಕ್ಷಣ ಕೊಡಿಸಲು ಹೆಣಗಾಡುತ್ತಿದ್ದೇನೆ. ಸರ್ಕಾರದ ಸಹಾಯ ಕೇಳಿದ್ದೇನೆ’ ಎಂದು ಹಸಹ್ಯ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral Video | ನನ್ನ ಬಿಟ್ಟು ಯಾರನ್ನು ಮದುವೆ ಆಗ್ತಿದ್ದೀಯಾ?-ವರನ ಮೈಮೇಲೆ ಏರಿ ಕುಳಿತ ಕಪ್ಪು ಕೋತಿ, ಪಕ್ಕಕ್ಕೆ ಸರಿದ ವಧು!