Site icon Vistara News

Rupert Murdoch: ಫಾಕ್ಸ್ ಮತ್ತು ನ್ಯೂಸ್ ಕಾರ್ಪ್‌ ಅಧ್ಯಕ್ಷ ಹುದ್ದೆ ತೊರೆದ ‘ಮಾಧ್ಯಮ ದೊರೆ’ ರೂಪರ್ಟ್ ಮುರ್ಡೋಕ್

Rupert Murdoch

ನವದೆಹಲಿ: ಮಾಧ್ಯಮ ದಿಗ್ಗಜ, 92 ವರ್ಷದ ರೂಪರ್ಟ್ ಮುರ್ಡೋಕ್ (Rupert Murdoch) ಅವರು ಫಾಕ್ಸ್ ಆ್ಯಂಡ್ ನ್ಯೂಸ್ ಕಾರ್ಪ್‌ (Fox and News Corp) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ (Resigned as Chairman) ಎಂದು ಪಾಶ್ಚಿಮಾತ್ಯ ಮಾಧ್ಯಮಗಳು ವರದಿ ಮಾಡಿವೆ. ಪರಿಣಾಮ, ಈಗ ರೂಪರ್ಟ್ ಮುರ್ಡೋಕ್ ಅವರ ಪುತ್ರ ಲಾಚ್ಲಾನ್ ಮುರ್ಡೋಕ್ (Lachlan Murdoch) ಅವರು ನ್ಯೂಸ್ ಕಾರ್ಪ್‌ನ ಏಕೈಕ ಅಧ್ಯಕ್ಷರಾಗಿರಲಿದ್ದಾರೆ. ಜತೆಗೆ, ಫಾಕ್ಸ್ ಅಧ್ಯಕ್ಷ ಹಾಗೂ ಸಿಇಒ ಕೂಡ ಆಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ನನ್ನ ಸಂಪೂರ್ಣ ವೃತ್ತಿಪರ ಜೀವನಕ್ಕಾಗಿ ನಾನು ಪ್ರತಿದಿನ ಸುದ್ದಿ ಮತ್ತು ಆಲೋಚನೆಗಳೊಂದಿಗೆ ತೊಡಗಿಸಿಕೊಂಡಿದ್ದೇನೆ ಮತ್ತು ಅದು ಬದಲಾಗುವುದಿಲ್ಲ. ಆದರೆ ಲಚ್ಲಾನ್‌ನಲ್ಲಿ ನಾವು ನಿಜವಾದ ಪ್ರತಿಭಾವಂತ ತಂಡಗಳನ್ನು ಕಂಡಿದ್ದೇನೆ. ಅವರು ಎರಡೂ ಕಂಪನಿಗಳ ಏಕೈಕ ಅಧ್ಯಕ್ಷರಾಗುವ ಉತ್ಸಾಹಭರಿತ, ತತ್ವಬದ್ಧ ನಾಯಕರಾಗಿ ಬೆಳೆದಿದ್ದಾರೆ. ಹಾಗಾಗಿ ಅವರಿಗೆ ಜವಾಬ್ದಾರಿ ವಹಿಸಲು ಸಮಯ ಸೂಕ್ತವಾಗಿದೆ ಎಂದು ಮುರ್ಡೋಕ್ ಉದ್ಯೋಗಿಗಳಿಗೆ ಬರೆದ ಜ್ಞಾಪಕ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.

ಫಾಕ್ಸ್ ಮತ್ತು ನ್ಯೂಸ್ ಕಾರ್ಪ್ ನಿರ್ದೇಶಕರ ಮಂಡಳಿಗಳು, ನಾಯಕತ್ವ ತಂಡಗಳು ಮತ್ತು ಅವರ ಕಠಿಣ ಪರಿಶ್ರಮದಿಂದ ಪ್ರಯೋಜನ ಪಡೆದ ಎಲ್ಲಾ ಷೇರುದಾರರ ಪರವಾಗಿ ನನ್ನ ತಂದೆಯ ಗಮನಾರ್ಹ 70 ವರ್ಷಗಳ ವೃತ್ತಿಜೀವನಕ್ಕೆ ನಾನು ಅಭಿನಂದಿಸುತ್ತೇನೆ ಎಂದು ಲಾಚ್ಲಾನ್ ಮುರ್ಡೋಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Rupert Murdoch: ಆಕೆಯ ಅತಿಯಾದ ಧಾರ್ಮಿಕತೆ ಸಹಿಸಲಾಗುತ್ತಿಲ್ಲ; 5ನೇ ಮದುವೆ ಇಲ್ಲ ಎಂದ ರೂಪರ್ಟ್ ಮುರ್ಡೋಕ್

ಸಿಎನ್ಎನ್ ವಾಹಿನಿಗೆ ಪ್ರತಿಯಾಗಿ ಮುರ್ಡೋಕ್ ಅವರು 1996ರಲ್ಲಿ ಫಾಕ್ಸ್ ನ್ಯೂಸ್ ಆರಂಭಿಸಿದರು. ಬಳಿಕ ನಿಧಾನವಾಗಿ ಅಮೆರಿಕದ ನಂಬರ್ ಕೇಬಲ್ ನ್ಯೂಸ್ ಚಾನೆಲ್ ಆಗಿ ಗುರುತಿಸಿಕೊಂಡರು. ಫೋರ್ಬ್ಸ್ ಪ್ರಕಾರ ಮುರ್ಡೋಕ್ ಸುಮಾರು 17 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ. ಅವರ ಮಾಧ್ಯಮ ಸಾಮ್ರಾಜ್ಯವು ಫಾಕ್ಸ್ ನ್ಯೂಸ್, ವಾಲ್ ಸ್ಟ್ರೀಟ್ ಜರ್ನಲ್, ದಿ ನ್ಯೂಯಾರ್ಕ್ ಪೋಸ್ಟ್ ಮತ್ತು ಪ್ರಪಂಚದಾದ್ಯಂತದ ಇತರ ಮಾಧ್ಯಮ ಆಸ್ತಿಗಳನ್ನು ಒಳಗೊಂಡಿದೆ.

ಮಾಧ್ಯಮ ದೊರೆ ಎಂದು ಕರೆಯಿಸಿಕೊಳ್ಳುವ ಮುರ್ಡೋಕ್ ಅವರಿಗೆ ಮೊದಲ ಮೂರು ಮದುವೆಗಳಿಂದ ಆರು ಮಕ್ಕಳಿದ್ದಾರೆ. ಜೆರಿ ಹಾಲ್ ಎಂಬುವವರನ್ನು ಆರು ವರ್ಷಗಳ ಹಿಂದೆ ಮದ್ವೆಯಾಗಿದ್ದಾರೆ. ಇದಕ್ಕೂ ಮೊದಲು ವೆಂಡಿ ಡೆಂಗ್(1999-2013), ಅನ್ನಾ ಮರಿಯಾ(1967-1999) ಮತ್ತು ಪ್ಯಾಟ್ರಿಕಾ ಬೂಕರ್(1956-1967) ಎಂಬುವವರನ್ನು ಮದುವೆಯಾಗಿದ್ದರು.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version