ಸ್ಟಾಕ್‌ಹೋಮ್, ಸ್ವೀಡನ್: ತ್ವರಿತ ಕೋವಿಡ್ ವ್ಯಾಕ್ಸಿನ್ (Covid Vaccine) ತಯಾರಿಕೆಗೆ ದಾರಿ ಮಾಡಿಕೊಟ್ಟ ಮೆಂಸೆಂಜರ್ ಆರ್‌ಎನ್ಎ(mRNA) ತಂತ್ರಜ್ಞಾನದ ಕೆಲಸಕ್ಕಾಗಿ ಕಟಲಿನ್ ಕರಿಕೊ (Katalin Kariko) ಮತ್ತು ಡ್ರೂ ವೈಸ್‌ಮನ್ (Drew Weissman) ಅವರಿಗೆ ವೈದ್ಯಕೀಯ (Medicine) ನೊಬೆಲ್ ಪುರಸ್ಕಾರ ಲಭಿಸಿದೆ(Nobel Prize 2023). ಆಧುನಿಕ ಕಾಲದ ಮಾನವ ಆರೋಗ್ಯಕ್ಕೆ ದೊಡ್ಡ ಬೆದರಿಕೆಯ ಸಮಯದಲ್ಲಿ ಲಸಿಕೆ ಅಭಿವೃದ್ಧಿಗೆ ಅಭೂತಪೂರ್ವ ಕಾಣಿಕೆಯನ್ನು ಮೆಂಸೆಂಜರ್ ಆರ್‌ಎನ್ಎ ನೀಡಿದೆ ಎಂದು ತೀರ್ಪುಗಾರರ ಸಮಿತಿ ಹೇಳಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪುರಸ್ಕಾರಕ್ಕೆ ಪರಿಗಣಿಸುವಾಗ ದಶಕಗಳ ಹಳೆಯ ಸಂಶೋಧನೆಯನ್ನು ಗೌರವಿಸುವ ತನ್ನ ಸಂಪ್ರದಾಯವನ್ನು ನೊಬೆಲ್ ಸಮಿತಿ ಈ ಬಾರಿ ಕೈ ಬಿಟ್ಟಿದೆ. ಬಹುಮಾನ ವಿಜೇತ ವಿಜ್ಞಾನವು 2005ರ ಹಿಂದಿನದ್ದಾರೂ ಎಂಆರ್‌ಎನ್‌ಎ ತಂತ್ರಜ್ಞಾನವನ್ನು ಬಳಸಿಕೊಂಡು ಫೈಜರ್/ಬಯೋಎನ್‌ಟೆಕ್ ಮತ್ತು ಮಾಡರ್ನಾ ಕೋವಿಡ್ ಲಸಿಕೆಗಳನ್ನು ತಯಾರಿಸಿದವು.
BREAKING NEWS
— The Nobel Prize (@NobelPrize) October 2, 2023
The 2023 #NobelPrize in Physiology or Medicine has been awarded to Katalin Karikó and Drew Weissman for their discoveries concerning nucleoside base modifications that enabled the development of effective mRNA vaccines against COVID-19. pic.twitter.com/Y62uJDlNMj
ಕರಿಕೊ ಅವರು ಹಂಗ್ರಿ ದೇಶದವರು ಮತ್ತು ವೈಸ್‌ಮನ್ ಅವರು ಅಮೆರಿಕದವರು. ಯುನಿರ್ವಸಿಟಿ ಆಫ್ ಪೆನ್ಸಿಲ್ವೇನಿಯಾ ಇಬ್ಬರು ಕೊಲಿಗ್ಸ್ ಆಗಿದ್ದವು. ತಮ್ಮ ಸಂಶೋಧನೆಗಳಿಗಾಗಿ 2021ರಲ್ಲಿ ಲಸ್ಕರ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: ICMR Report: ಕೋವಿಡ್ ವ್ಯಾಕ್ಸಿನ್‌ಗೂ ಹಾರ್ಟ್ ಅಟ್ಯಾಕ್‌ಗೂ ಇದ್ಯಾ ನಂಟು? ಐಸಿಎಂಆರ್ ಅಧ್ಯಯನ ವರದಿಯಲ್ಲಿ ಏನಿದೆ?
ದುರ್ಬಲಗೊಂಡ ವೈರಸ್ ಅಥವಾ ವೈರಸ್‌ನ ಪ್ರೋಟೀನ್‌ನ ಪ್ರಮುಖ ಅಂಶಗಳನ್ನು ಬಳಸುವ ಸಾಂಪ್ರದಾಯಿಕ ಲಸಿಕೆಗಳಿಗಿಂತ ಭಿನ್ನವಾಗಿ, ಎಂಆರ್‌ಎನ್ಎ ಲಸಿಕೆಗಳು ಆನುವಂಶಿಕ ಅಣುಗಳನ್ನು ಒದಗಿಸುತ್ತವೆ. ಅದು ಜೀವಕೋಶಗಳಿಗೆ ಯಾವ ಪ್ರೋಟೀನ್‌ಗಳನ್ನು ಮಾಡಬೇಕೆಂದು ತಿಳಿಸುತ್ತದೆ, ಇದು ಸೋಂಕನ್ನು ಅನುಕರಿಸುತ್ತದೆ ಮತ್ತು ನಿಜವಾದ ವೈರಸ್‌ಗೆ ಎದುರಾದಾಗ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪೂರಿಸುತ್ತದೆ. ಹಾಗಾಗಿ, ಲಸಿಕೆ ನಿರ್ಮಾಣದಲ್ಲಿ ಎಂಆರ್‌ಎನ್ಎ ಪ್ರಮುಖ ಸಂಶೋಧನೆಯಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.