Site icon Vistara News

ʼಅವನೇಕೆ ನನ್ನನ್ನು ರೇಪ್‌ ಮಾಡಲಿಲ್ಲ ಎಂದರೆ…ʼ ಹಾರರ್‌ ಸ್ಟೋರಿ ಬಿಚ್ಚಿಟ್ಟ ಹಮಾಸ್‌ ಒತ್ತೆಯಾಳು

mia schem hamasa hostage

ಟೆಲ್‌ ಅವಿವ್‌: ಹಮಾಸ್‌ ಉಗ್ರರಿಂದ (Hamas terrorists) ಬಿಡುಗಡೆಗೊಂಡ ಇಸ್ರೇಲಿ ಒತ್ತೆಯಾಳು (Israeli Hostage) ಮಿಯಾ ಸ್ಕೆಮ್ (Mia Schem) ಅಲ್ಲಿ ತಾನು ಅನುಭವಿಸಿದ ಮಾನಸಿಕ ಹಿಂಸೆ, ಒತ್ತಡದ ಕತೆಯನ್ನು ಬಿಚ್ಚಿಟ್ಟಿದ್ದಾಳೆ. ತನ್ನನ್ನು ಒತ್ತೆಯಾಗಿಟ್ಟುಕೊಂಡಿದ್ದ ಹಮಾಸ್‌ ಉಗ್ರನಿಗೆ ತನ್ನ ಮೇಲೆ ಅತ್ಯಾಚಾರ ನಡೆಸುವ ಆತುರವಿತ್ತು, ಆದರೆ ಹಾಗೆ ಮಾಡಲಿಲ್ಲ ಎಂಬುದನ್ನೂ ಹೊರಗೆಡಹಿದ್ದಾಳೆ.

ಮಿಯಾ ಸ್ಕೆಮ್‌ಳನ್ನು ಒಂದು ಮನೆಯಲ್ಲಿ ಕೂಡಿಹಾಕಲಾಗಿತ್ತು. ಅದೊಂದು ಮನೆಯಾಗಿತ್ತು. ಆ ಮನೆಯ ಹೊರಭಾಗದಲ್ಲಿ ಉಗ್ರ, ಆತನ ಹೆಂಡತಿ ಹಾಗೂ ಮಕ್ಕಳು ಇದ್ದರು. ಒಳಗೆ ಕತ್ತಲಿನ ಕೋಣೆಯಲ್ಲಿ ಮಿಯಾ ಸ್ಕೆಮ್‌ಳನ್ನು ಕೂಡಿಹಾಕಲಾಗಿತ್ತು. ಜೊತೆಗೆ ಆತನ ಹೆಂಡತಿ ಮಕ್ಕಳಿದ್ದ ಏಕೈಕ ಕಾರಣಕ್ಕೆ ಆತ ತನ್ನನ್ನು ಅತ್ಯಾಚಾರ (Physical Abuse) ಮಾಡಲಿಲ್ಲ ಎಂದು ಮಿಯಾ ಹೇಳಿದ್ದಾಳೆ.

ಮಿಯಾ ಸ್ಕೆಮ್‌ ಇಸ್ರೇಲಿ- ಫ್ರೆಂಚ್‌ ನಾಗರಿಕಳಾಗಿದ್ದು, ಆಕೆಯನ್ನು ಅಕ್ಟೋಬರ್‌ 7ರಂದು ನೋವಾ ಮ್ಯೂಸಿಕ್‌ ಫೆಸ್ಟಿವಲ್‌ನಿಂದ ಅಪಹರಿಸಲಾಗಿತ್ತು. ಆಕೆಯ ತೋಳಿಗೆ ಗುಂಡಿಟ್ಟ ಉಗ್ರರು ಆಕೆಯ ಕಾರನ್ನು ಸುಟ್ಟುಹಾಕಿದ್ದರು. ಗಾಜಾದ ಹಮಾಸ್‌ ಉಗ್ರನ ಮನೆಯಲ್ಲಿ ಆಕೆಯನ್ನು ಒತ್ತೆಯಾಳಾಗಿಟ್ಟಿದ್ದು, ಆಕೆ ಹೊರಗೆ ಕಾಣಿಸಿಕೊಳ್ಳುವಂತಿರಲಿಲ್ಲ. ಆತ ನಿರಂತರ ಆಕೆಯನ್ನು ಗಮನಿಸುತ್ತಿದ್ದ; ಕ್ರೂರವಾಗಿ ದಿಟ್ಟಿಸುತ್ತಿದ್ದ. ಆತನ ಹೆಂಡತಿ ಕೂಡ ಆಕೆಯನ್ನು ಕ್ರೂರವಾಗಿ ನಡೆಸಿಕೊಂಡಿದ್ದಳು ಎಂದು ಮಿಯಾ ವಿವರಿಸಿದ್ದಾಳೆ.

ಗಾಜಾದ ನಾಗರಿಕ ಬಡಾವಣೆಯಲ್ಲಿಯೇ ಆಕೆಯನ್ನು ಇಡಲಾಗಿತ್ತು. ಈ ಕುಟುಂಬ ಕೂಡ ಹಮಾಸ್‌ ಉಗ್ರರ ಜೊತೆಗೆ ಶಾಮೀಲಾಗಿತ್ತು. ʼʼನಾನೇಕೆ ಫ್ಯಾಮಿಲಿಯ ಜೊತೆಗೆ ಇದ್ದೇನೆ ಎಂಬುದು ನನಗೆ ಮೊದಲು ಆಶ್ಚರ್ಯ ಉಂಟುಮಾಡಿತ್ತು. ನಂತರ ಅವರೂ ಹಮಾಸ್‌ ಜೊತೆಗೆ ಶಾಮೀಲಾಗಿರುವುದು ತಿಳಿಯಿತು. ಅಲ್ಲಿರುವ ಎಲ್ಲರೂ ಭಯೋತ್ಪಾದಕರೇ, ಬೇರೇನಲ್ಲ” ಎಂದು ಮಿಯಾ ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾಳೆ.

ಇದನ್ನೂ ಓದಿ: ಇಸ್ರೇಲಿ ಮಹಿಳೆಯರ ಮೇಲೆ ರೇಪ್, ಸೈನಿಕರ ಜನನಾಂಗಕ್ಕೇ ಗುಂಡು! ಹಮಾಸ್ ಪೈಶಾಚಿಕ ಕೃತ್ಯ ಬಯಲು

Exit mobile version