Site icon Vistara News

Oscars 2023: ಅತ್ಯುತ್ತಮ ನಟಿ ಆಸ್ಕರ್ ಗೆದ್ದ ಏಷ್ಯಾದ ಮೊದಲ ನಟಿ ಮಿಷೆಲ್ ಯೋ, ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನೋಡಿರ್ತಿರಿ!

Michelle Yeoh is first Asian actress to achieve best female lead in Oscars 2023

ಲಾಸ್ ಏಂಜಲೀಸ್, ಅಮೆರಿಕ: ಅತ್ಯುತ್ತಮ ನಟಿ ಕೆಟಗರಿಯಲ್ಲಿ ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ಮಿಷೆಲ್ ಯೋ(Michelle Yeoh) ಅವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಫಿಮೇಲ್ ಲೀಡ್ ಕೆಟಗರಿಯಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಏಷ್ಯಾದ ಮೊದಲ ನಟಿ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ. ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್(Everything Everywhere All at Once) ಚಿತ್ರದ ಅಮೋಘ ಅಭಿನಯಕ್ಕಾಗಿ ಅವರಿಗೆ ಆಸ್ಕರ್ 2023 ಸಂದಿದೆ(Oscars 2023).

ಮಿಷೆಲ್ ಅವರು ಮಲೇಷಿಯಾದ ರಾಜಧಾನಿ ಕೌಲಾಲಂಪುರ್‌ನಿಂದ ಉತ್ತರಕ್ಕೆ 200 ಕಿಲೋಮೀಟರ್ ದೂರದಲ್ಲಿರುವ ಇಪೋಹ್ ನಗರದಲ್ಲಿ 1962 ಆಗಸ್ಟ್ 6 ರಂದು ಜನಿಸಿದರು. ಇವರ ತಂದೆ ತಾಯಿ ಮಲೇಷ್ಯನ್-ಚೀನಿ. ಬಾಲಕಿಯಿದ್ದಾಗಲೇ ನೃತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಮಿಷೆಲ್, ಬ್ಯಾಲೆ ನೃತ್ಯದಲ್ಲಿ ಪರಿಣತಿಯನ್ನು ಪಡೆದುಕೊಂಡಿದ್ದಾರೆ. ಇವರು ತಮ್ಮ ವಿದ್ಯಾಭ್ಯಾಸವನ್ನು ಇಂಗ್ಲೆಂಡ್‌ನಲ್ಲಿ ಪೂರೈಸಿದ್ದಾರೆ.

ಮಿಷೆಲ್ ಅವರು ತಾಯಿ, ಮಿಷಲ್ ಅವರನ್ನು ಕೇಳದಯೇ ಮಿಸ್ ಮಲೇಷ್ಯಾ ಸೌಂದರ್ಯ ಸ್ಪರ್ಧೆಗೆ ಹೆಸರು ನೋಂದಾಯಿಸಿದ್ದರು. ಅಲ್ಲಿಂದ ಅವರು ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಪಯಣ ಆರಂಭವಾಯಿತು.

1980ರಲ್ಲಿ ಮಿಷೆಲ್‌ಗೆ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಿಷೆಲ್ ಅವರು ತಮ್ಮ ನೃತ್ಯ ವೃತ್ತಿಯನ್ನು ತೊರೆಯಬೇಕಾಯಿತು. ಆದರೆ, ನೃತ್ಯದಲ್ಲಿ ಕಲಿತ ಕೌಶಲ್ಯಗಳು ಚಾಕಿ ಚಾನ್‌ ಅವರಂಥ ಶ್ರೇಷ್ಠ ನಟರ ಜತೆ ಆಕ್ಷನ್ ಫಿಲ್ಮ್‌ಗಳಲ್ಲಿ ನಟಿಸುವಾಗ ನೆರವಿಗೆ ಬಂತು.

ಇದನ್ನೂ ಓದಿ: Oscars 2023: ಬೆಸ್ಟ್‌ ಫಿಲಂ Everything Everywhere All At Onceಗೆ 7 ಪ್ರಶಸ್ತಿ, ಭಾರತಕ್ಕೆ 2; ಆಸ್ಕರ್‌ನ ಸಮಗ್ರ ಪಟ್ಟಿ ಇಲ್ಲಿದೆ

ಜೇಮ್ಸ್ ಬಾಂಡ್ ಚಿತ್ರದಲ್ಲಿ ಬ್ರಾನ್ಸನ್ ಎದುರು ನಟನೆ

1997ರಲ್ಲಿ ತೆರೆ ಕಂಡ ಟುಮಾರೋ ನೆವರ್ ಡೈಸ್ ಜೇಮ್ಸ್ ಬಾಂಡ್ ಸರಣಿಯ ಚಿತ್ರದಲ್ಲಿ ನಾಯಕ ಪಿಯರ್ಸ್ ಬ್ರಾನ್ಸನ್ ಅವರ ಎದುರು ಚೀನಾದ ಗೂಢಚರರಾಗಿ ಅಭಿನಯಿಸಿದರು. ಅಲ್ಲಿಂದ ಅವರು ಜಾಗತಿಕ ನಟಿಯಾಗಿ ಗುರುತಿಸಿಕೊಂಡರು. ‘ಕ್ರೌಚಿಂಗ್ ಟೈಗರ್, ಹಿಡನ್ ಡ್ರ್ಯಾಗನ್’ ಮತ್ತು ‘ಮೆಮೊಯಿರ್ಸ್ ಆಫ್ ಎ ಗೀಷಾ’ ಅವರ ಇತರ ಸೂಪರ್ ಡೂಪರ್ ಚಿತ್ರಗಳು. ಅಲ್ಲದೇ ಈ ಚಿತ್ರಗಳು ಅವರು ಭಾರೀ ಹೆಸರನ್ನು ತಂದುಕೊಟ್ಟವು. ಮಿಷೆಲ್ ಅವರು ಫಾರ್ಮುಲಾ ಒನ್ ಸರ್ಕ್ಯೂಟ್ ಅನ್ನು ನಿಯಂತ್ರಿಸುವ ಇಂಟರ್ನ್ಯಾಷನಲ್ ಆಟೋಮೊಬೈಲ್ ಫೆಡರೇಶನ್‌ನ ಮಾಜಿ ಮುಖ್ಯಸ್ಥ ಜೀನ್ ಟಾಡ್ಟ್ ಅವರ ಜೊತೆ ವಾಸಿಸುತ್ತಿದ್ದಾರೆ.

Exit mobile version