Site icon Vistara News

ದಪ್ಪ ಇದ್ದರೂ ಭುವನ ಸುಂದರಿ ರೇಸ್‌ನಲ್ಲಿ ನೇಪಾಳ ಸುಂದರಿ ಕ್ಯಾಟ್‌ವಾಕ್‌; ಯಾರಿವರು ದೀಪಿಕಾ?

Jane Dipika Garrett

Miss Nepal Jane Dipika Garrett makes history as first plus-size model in Miss Universe

ನವದೆಹಲಿ: ಸೌಂದರ್ಯ ಎಂಬುದು ನೋಡುವವರ ಕಣ್ಣು ಹಾಗೂ ಮನಸ್ಸಿನಲ್ಲಿರುತ್ತದೆಯೇ ಹೊರತು, ಅದು ಬಣ್ಣ, ಆಕಾರ, ನೀಳ ಕಾಯದಲ್ಲಿ ಇರುವುದಿಲ್ಲ ಎಂಬ ಮಾತಿದೆ. ಈ ಮಾತಿಗೆ ನಿದರ್ಶನ ಎಂಬಂತೆ ನೇಪಾಳದ ಜೇನ್‌ ದೀಪಿಕಾ ಗ್ಯಾರೆಟ್‌ (Jane Dipika Garrett) ಅವರು ನೋಡಲು ದಪ್ಪ ಇದ್ದರೂ ಭುವನ ಸುಂದರಿ (Miss Universe) ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಮಿಸ್‌ ನೇಪಾಳ ಕೂಡ ಆಗಿರುವ ಇವರು ಭುವನ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಮೊದಲ ದಪ್ಪ ಇರುವ (Plus Size) ರೂಪದರ್ಶಿ ಎನಿಸಿದ್ದಾರೆ.

ಸೆಂಟ್ರಲ್‌ ಅಮೆರಿಕದ ಅಲ್‌ ಸಾಲ್ವಡಾರ್‌ನಲ್ಲಿ ನಡೆಯುತ್ತಿರುವ 72ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿ, ಕ್ಯಾಟ್‌ ವಾಕ್‌ ಮಾಡಿದ್ದಾರೆ. ನವೆಂಬರ್‌ 15ರಂದು ಅವರು ಕ್ಯಾಟ್‌ವಾಕ್‌ ಮಾಡಿದ್ದು, ತಮ್ಮನ್ನು ತಾವು ಪ್ಲಸ್‌ ಸೈಜ್‌ ಇರುವ ರೂಪದರ್ಶಿ ಎಂದು ಕರೆದುಕೊಂಡಿದ್ದಾರೆ. ನೇಪಾಳದ ಪ್ರಮುಖ ರೂಪದರ್ಶಿಯಾಗಿರುವ ಇವರು ಮಿಸ್‌ ನೇಪಾಳ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈಗ ಭುವನ ಸುಂದರಿ ಸ್ಪರ್ಧೆಯಲ್ಲೂ ಭಾಗವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಹಾಗೆಯೇ, ಇವರು ಆತ್ಮವಿಶ್ವಾಸದಿಂದ ಭಾಗವಹಿಸಿರುವುದಕ್ಕೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.

ದೀಪಿಕಾ ಕ್ಯಾಟ್‌ವಾಕ್‌ ಝಲಕ್

“ನಾನು ಕೆಲವು ವರ್ಷಗಳ ಹಿಂದೆ ತುಂಬ ಕೀಳರಿಮೆ ಅನುಭವಿಸುತ್ತಿದ್ದೆ. ನನ್ನ ಮೇಲೆ ನನಗೇ ವಿಶ್ವಾಸ ಇರಲಿಲ್ಲ, ನನ್ನ ದೇಹದ ಮೇಲೆ ನನಗೇ ಪ್ರೀತಿ ಇರಲಿಲ್ಲ. ಆದರೆ, ಈಗ ನನ್ನನ್ನು ನಾನು ಪ್ರೀತಿಸುತ್ತಿದ್ದೇನೆ. ನನ್ನೊಳಗಿನ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ನನಗೆ ಇದೇ ಯಶಸ್ಸು” ಎಂದು 22 ವರ್ಷದ ಜೇನ್‌ ದೀಪಿಕಾ ಗ್ಯಾರೆಟ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಇವರ ಕಾಯದ ಬಗ್ಗೆ ಭಾರಿ ಚರ್ಚೆಗಳಾಗಿದ್ದವು. ಇವರು ಎಂತಹ ರೂಪದರ್ಶಿ ಎಂಬುದಾಗಿ ಕುಹಕವಾಡಿದ್ದರು. ಈಗ ಇವೆಲ್ಲವನ್ನೂ ಮೀರಿ ಜೇನ್‌ ದೀಪಿಕಾ ಗ್ಯಾರೆಟ್‌ ಅವರು ಭುವನ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಭಾರತದ ಶ್ವೇತಾ ಶಾರದಾ

ಇದನ್ನೂ ಓದಿ: ICC World Cup 2023 : ಹಿಂದೂ ವಿರೋಧಿ ಹೇಳಿಕೆ; ಪಾಕ್​ನ ಸುಂದರಿ ಆ್ಯಂಕರ್​ಳನ್ನು ಒದ್ದೋಡಿಸಿದ ಭಾರತ

ಭಾನುವಾರ (ನವೆಂಬರ್‌ 19) 2023ನೇ ಸಾಲಿನ ಭುವನ ಸುಂದರಿ ಯಾರು ಎಂಬುದನ್ನು ಘೋಷಿಸಲಾಗುತ್ತದೆ. ಭಾರತದಿಂದ ಶ್ವೇತಾ ಶಾರದಾ ಅವರು ಸ್ಪರ್ಧಿಸಿದ್ದಾರೆ. ಈ ಬಾರಿಯ ಸ್ಪರ್ಧೆಯಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡ ಇಬ್ಬರು ಮಹಿಳೆಯರು, ಇಬ್ಬರು ತಾಯಂದಿರು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಜಗತ್ತಿನ 90ಕ್ಕೂ ಹೆಚ್ಚು ಸುಂದರಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಯಾರಿಗೆ ಭುವನ ಸುಂದರಿ ಕಿರೀಟ ಲಭಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version