ಕಾಬೂಲ್: ಅಫಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರದ್ದೇ ಆಡಳಿತವಿದ್ದರೂ ಉಗ್ರರ ದಾಳಿಗಳು ಮಾತ್ರ ನಿಲ್ಲುತ್ತಿಲ್ಲ. ಕಾಬೂಲ್‌ನಲ್ಲಿರುವ ವಿದೇಶಾಂಗ ಸಚಿವಾಲಯದ ಬಳಿಯೇ ಬುಧವಾರ ಆತ್ಮಾಹುತಿ ಬಾಂಬ್ ದಾಳಿ (Blast In Afghanistan) ನಡೆದಿದ್ದು, 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 4 ಗಂಟೆ ಸುಮಾರಿಗೆ ವಿದೇಶಾಂಗ ಸಚಿವಾಲಯದ ಬಳಿ ವ್ಯಕ್ತಿಯೊಬ್ಬ ಸುಧಾರಿತ ಸ್ಫೋಟಕ ಸಾಧನಗಳನ್ನು (IED) ಸ್ಫೋಟಿಸಿಕೊಂಡಿದ್ದಾನೆ. ತೀವ್ರ ಪ್ರಮಾಣದ ಸ್ಫೋಟ ಸಂಭವಿಸಿದೆ. ಇದರಿಂದಾಗಿ 20ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆತ್ಮಾಹುತಿ ದಾಳಿಕೋರನು ಸಚಿವಾಲಯ ಪ್ರವೇಶಿಸಲು ಯತ್ನಿಸಿದ್ದ, ಆದರೆ, ಅದು ಫಲಿಸಲಿಲ್ಲ. ಇಲ್ಲದಿದ್ದರೆ, ಇಡೀ ಸಚಿವಾಲಯವನ್ನೇ ಉಡಾಯಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸಚಿವಾಲಯದಲ್ಲಿ ಚೀನಾ ನಿಯೋಗದ ಜತೆ ಸಭೆ ನಡೆಯುತ್ತಿರುವಾಗಲೇ ದಾಳಿ ನಡೆದಿರುವುದು ಹಲವು ಶಂಕೆ ಮೂಡಲು ಕಾರಣವಾಗಿದೆ. ಆದಾಗ್ಯೂ, ಯಾವುದೇ ಉಗ್ರ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Kabul Blast | ಕಾಬೂಲ್ ಸೇನಾ ಏರ್ಪೋರ್ಟ್ ಹೊರಗೆ ದೊಡ್ಡಮಟ್ಟದ ಸ್ಫೋಟ; ಹಲವರು ಮೃತಪಟ್ಟಿರುವ ಶಂಕೆ