ಇಂಡೋನೇಷ್ಯಾದ ಉತ್ತರ ಜಕಾರ್ತಾದಲ್ಲಿರುವ ಜಾಮಿ ಮಸೀದಿ ಅಗ್ನಿಗೆ ಆಹುತಿಯಾಗಿದ್ದು, ಅದರ ಬಹುದೊಡ್ಡ ಗುಮ್ಮಟ ಕುಸಿದುಬಿದ್ದಿದೆ. ಈ ಮಸೀದಿಯನ್ನು ಜೀರ್ಣೋದ್ಧಾರ ಮಾಡಲಾಗುತ್ತಿದ್ದು, ಅದರ ಮಧ್ಯೆಯೇ ಅವಘಡ ಸಂಭವಿಸಿದೆ. ಮಸೀದಿ ಮೇಲ್ಭಾಗದಲ್ಲಿ ಬೆಂಕಿ ಧಗಧಗನೆ ಹೊತ್ತಿ ಉರಿದಿದ್ದು, ಆ ಪ್ರದೇಶದಲ್ಲೆಲ್ಲ ದಟ್ಟವಾದ ಹೊಗೆ ಆವರಿಸಿತ್ತು.
ಉತ್ತರ ಜಕಾರ್ತಾದ ಇಸ್ಲಾಮಿಕ್ ಕೇಂದ್ರಕ್ಕೆ ಸೇರಿದ ಕಟ್ಟಡಗಳ ಸಂಕೀರ್ಣದಲ್ಲಿಯೇ ಈ ಮಸೀದಿಯೂ ಇತ್ತು. ಇಲ್ಲಿ ಇಸ್ಲಾಮಿಕ್ ಅಧ್ಯಯನ ನಡೆಯುವ ಜತೆಗೆ, ಪ್ರಮುಖರು-ವಿದ್ವಾಂಸರೆಲ್ಲ ಸೇರಿ ಸಭೆ ಕೂಡ ನಡೆಸುತ್ತಿದ್ದರು. ಬೆಂಕಿ ಅವಘಡ ಉಂಟಾದ ಸಂದರ್ಭದಲ್ಲಿ ಇಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾರೊಬ್ಬರಿಗೂ ಏನೂ ಗಾಯಗಳಾಗಲಿ, ಪ್ರಾಣಹಾನಿಯಾಗಲಿ ಆಗಿಲ್ಲ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಆದರೆ ಮಸೀದಿಯ ಮುಖ್ಯ ಆಕರ್ಷಣೆಯಾಗಿದ್ದ ಬೃಹತ್ ಗುಮ್ಮಟ ಕುಸಿದಿದೆ. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.