ಸ್ಟಾಕ್‌ಹೋಮ್: ಕ್ವಾಂಟಮ್ ಡಾಟ್ಸ್ (quantum dots) ಎಂದು ಕರೆಯಲಾಗುವ ಟಿನ್ನಿ ಪಾರ್ಟಿಕಲ್ಸ್ ಕುರಿತಾದ ಸಂಶೋಧನೆಗಾಗೆ ಫ್ರೆಂಚ್ ಮೂಲಕ ಮೌಂಗಿ ಬವೆಂಡಿ(Moungi Bawendi), ಅಮೆರಿಕದ ಲೂಯಿಸ್ ಬ್ರಸ್ (Louis Brus) ಮತ್ತು ರಷ್ಯನ್ ಮೂಲದ ಅಲೆಕ್ಸಿ ಎಕಿಮೂವ್ (Alexei Ekimov) ಅವರಿಗೆ 2023ರ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಮೂವರು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಶೇಷ ಎಂದರೆ, ಘೋಷಣೆಗೂ ಮೊದಲೇ ಈ ಮೂವರ ಹೆಸರುಗಳು ಸ್ವೀಡಿಸ್ ಪತ್ರಿಕೆಗಳಲ್ಲಿ ಸೋರಿಕೆಯಾಗಿದ್ದವು. ಈ ಮೂವರು ವಿಜ್ಞಾನಿಗಳ ಸಂಶೋಧನೆಯು ಕ್ವಾಂಟಮ್ ಡಾಟ್ಸ್ ಉತ್ಪಾದನೆಯಲ್ಲಿ ಸಕ್ಸೆಸ್ ಆಗಿದೆ. ಈಗ ಟೆಲಿವಿಷನ್ ಮತ್ತು ಎಲ್‌ಇಡಿ ಬಲ್ಬಗಳಲ್ಲಿ ಬೆಳಕು ಹರಡಲು ಮತ್ತು ಗೆಡ್ಡೆಯ ಅಂಗಾಂಶಗಳನ್ನು ತೆಗೆಯಲು ಶಸ್ತ್ರಚಿಕಿತ್ಸಕರಿಗೆ ಮಾರ್ಗದರ್ಶನ ಸೇರಿದಂತೆ ಅನೇಕ ರೀತಿಯಲ್ಲಿ ನೆರವಿಗೆ ಕಾರಣವಾಗಿದೆ ಎಂದು ನೊಬೆಲ್ ಆಯ್ಕೆ ಸಮಿತಿ ಹೇಳಿದೆ(Nobel Prize 2023).
62 ವರ್ಷದ ಮೌಂಗಿ ಬವೆಂಡಿ ಅವರು ಫ್ರೆಂಚ್ ಮತ್ತು ಟುನಿಷಿಯನ್ ತಂದೆ ತಾಯಿಗೆ ಪ್ಯಾರಿಸಿನಲ್ಲಿ ಜನಿಸಿದರು. ಸದ್ಯ ಅವರು ಮಸ್ಸಾಚುಸೆಟ್ಸ್ ಇನ್ಸ್‌ಟಿಟ್ಯೂ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. 80 ವರ್ಷದ ಬ್ರಸ್ ಅವರು ನ್ಯೂಯಾರ್ಕ್‌ನ ಕೊಲಂಬಿಯಾದಲ್ಲಿ ಪ್ರೊಫೆಸರ್ ಆಗಿದ್ದಾರೆ. ರಷನ್ ಮೂಲದ ಎಕಿಮೋವ್ ಅವರು ಅಮೆರಿಕ ಮೂಲದ ನ್ಯಾನಕ್ರಿಸ್ಟಲ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
BREAKING NEWS
— The Nobel Prize (@NobelPrize) October 4, 2023
The Royal Swedish Academy of Sciences has decided to award the 2023 #NobelPrize in Chemistry to Moungi G. Bawendi, Louis E. Brus and Alexei I. Ekimov “for the discovery and synthesis of quantum dots.” pic.twitter.com/qJCXc72Dj8
ಅಗೋಸ್ಟಿನಿ, ಕ್ರೌಸ್ಟ್, ಎಲ್’ಹುಲ್ಲಿಯರ್‌ಗೆ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ
2023ರ ಸಾಲಿನ ನೊಬೆಲ್ ಪ್ರಶಸ್ತಿ (Nobel Prize 2023) ಘೋಷಣೆಯಾಗುತ್ತಿದ್ದು, ಫ್ರಾನ್ಸ್‌ನ ಪಿಯರೆ ಅಗೋಸ್ಟಿನಿ(Pierre Agostini), ಹಂಗೇರಿ-ಆಸ್ಟ್ರಿಯಾದ ಫೆರೆಂಕ್ ಕ್ರೌಸ್ಟ್ (Ferenc Krausz) ಮತ್ತು ಫ್ರಾನ್ಸ್-ಸ್ವೀಡನ್‌ನ ಆನ್ನೆ ಎಲ್’ಹುಲ್ಲಿಯರ್ (Anne L’ Huillier) ವಿಜ್ಞಾನಿಗಳಿಗೆ ಸೋಮವಾರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ವಸ್ತುಗಳಲ್ಲಿನ ಎಲೆಕ್ಟ್ರಾನ್ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಬೆಳಕಿನ ಅಟೊಸೆಕೆಂಡ್ ಪಲ್ಸ್ ಅನ್ನು ಉತ್ಪಾದಿಸುವ ಪ್ರಾಯೋಗಿಕ ವಿಧಾನಗಳಿಗಾಗಿ ಈ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ನೊಬೆಲ್ ಪ್ರಶಸ್ತಿ ನೀಡುವ ಸಂಸ್ಥೆ ತಿಳಿಸಿದೆ.
ಕೋವಿಡ್ ಲಸಿಕೆ ಅಭಿವೃದ್ಧಿಗೆ ಕಾರಣರಾದ ಇಬ್ಬರಿಗೆ ವೈದ್ಯಕೀಯ ನೊಬೆಲ್ ಅವಾರ್ಡ್
ತ್ವರಿತ ಕೋವಿಡ್ ವ್ಯಾಕ್ಸಿನ್ (Covid Vaccine) ತಯಾರಿಕೆಗೆ ದಾರಿ ಮಾಡಿಕೊಟ್ಟ ಮೆಂಸೆಂಜರ್ ಆರ್‌ಎನ್ಎ(mRNA) ತಂತ್ರಜ್ಞಾನದ ಕೆಲಸಕ್ಕಾಗಿ ಕಟಲಿನ್ ಕರಿಕೊ (Katalin Kariko) ಮತ್ತು ಡ್ರೂ ವೈಸ್‌ಮನ್ (Drew Weissman) ಅವರಿಗೆ ವೈದ್ಯಕೀಯ (Medicine) ನೊಬೆಲ್ ಪುರಸ್ಕಾರ ಲಭಿಸಿದೆ(Nobel Prize 2023). ಆಧುನಿಕ ಕಾಲದ ಮಾನವ ಆರೋಗ್ಯಕ್ಕೆ ದೊಡ್ಡ ಬೆದರಿಕೆಯ ಸಮಯದಲ್ಲಿ ಲಸಿಕೆ ಅಭಿವೃದ್ಧಿಗೆ ಅಭೂತಪೂರ್ವ ಕಾಣಿಕೆಯನ್ನು ಮೆಂಸೆಂಜರ್ ಆರ್‌ಎನ್ಎ ನೀಡಿದೆ ಎಂದು ತೀರ್ಪುಗಾರರ ಸಮಿತಿ ಹೇಳಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪುರಸ್ಕಾರಕ್ಕೆ ಪರಿಗಣಿಸುವಾಗ ದಶಕಗಳ ಹಳೆಯ ಸಂಶೋಧನೆಯನ್ನು ಗೌರವಿಸುವ ತನ್ನ ಸಂಪ್ರದಾಯವನ್ನು ನೊಬೆಲ್ ಸಮಿತಿ ಈ ಬಾರಿ ಕೈ ಬಿಟ್ಟಿದೆ. ಬಹುಮಾನ ವಿಜೇತ ವಿಜ್ಞಾನವು 2005ರ ಹಿಂದಿನದ್ದಾರೂ ಎಂಆರ್‌ಎನ್‌ಎ ತಂತ್ರಜ್ಞಾನವನ್ನು ಬಳಸಿಕೊಂಡು ಫೈಜರ್/ಬಯೋಎನ್‌ಟೆಕ್ ಮತ್ತು ಮಾಡರ್ನಾ ಕೋವಿಡ್ ಲಸಿಕೆಗಳನ್ನು ತಯಾರಿಸಿದವು.
ಈ ಸುದ್ದಿಯನ್ನೂ ಓದಿ: Nobel Peace Prize: 20ನೇ ಶತಮಾನದ ಮೇರು ನಾಯಕ ‘ಮಹಾತ್ಮ ಗಾಂಧಿ’ಗೇಕೆ ಸಿಗಲಿಲ್ಲ ನೊಬೆಲ್ ಪ್ರಶಸ್ತಿ?
ಕರಿಕೊ ಅವರು ಹಂಗ್ರಿ ದೇಶದವರು ಮತ್ತು ವೈಸ್‌ಮನ್ ಅವರು ಅಮೆರಿಕದವರು. ಯುನಿರ್ವಸಿಟಿ ಆಫ್ ಪೆನ್ಸಿಲ್ವೇನಿಯಾ ಇಬ್ಬರು ಕೊಲಿಗ್ಸ್ ಆಗಿದ್ದವು. ತಮ್ಮ ಸಂಶೋಧನೆಗಳಿಗಾಗಿ 2021ರಲ್ಲಿ ಲಸ್ಕರ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ದುರ್ಬಲಗೊಂಡ ವೈರಸ್ ಅಥವಾ ವೈರಸ್‌ನ ಪ್ರೋಟೀನ್‌ನ ಪ್ರಮುಖ ಅಂಶಗಳನ್ನು ಬಳಸುವ ಸಾಂಪ್ರದಾಯಿಕ ಲಸಿಕೆಗಳಿಗಿಂತ ಭಿನ್ನವಾಗಿ, ಎಂಆರ್‌ಎನ್ಎ ಲಸಿಕೆಗಳು ಆನುವಂಶಿಕ ಅಣುಗಳನ್ನು ಒದಗಿಸುತ್ತವೆ. ಅದು ಜೀವಕೋಶಗಳಿಗೆ ಯಾವ ಪ್ರೋಟೀನ್‌ಗಳನ್ನು ಮಾಡಬೇಕೆಂದು ತಿಳಿಸುತ್ತದೆ, ಇದು ಸೋಂಕನ್ನು ಅನುಕರಿಸುತ್ತದೆ ಮತ್ತು ನಿಜವಾದ ವೈರಸ್‌ಗೆ ಎದುರಾದಾಗ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪೂರಿಸುತ್ತದೆ. ಹಾಗಾಗಿ, ಲಸಿಕೆ ನಿರ್ಮಾಣದಲ್ಲಿ ಎಂಆರ್‌ಎನ್ಎ ಪ್ರಮುಖ ಸಂಶೋಧನೆಯಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.