Site icon Vistara News

Shehbaz Sharif | ನಾವೀಗ ಭಿಕ್ಷಾ ಪಾತ್ರೆ ಹಿಡಿದು ನಿಂತಿದ್ದೇವೆ, ಆರ್ಥಿಕ ಬಿಕ್ಕಟ್ಟು ಒಪ್ಪಿಕೊಂಡ ಪಾಕ್‌ ಪ್ರಧಾನಿ

Sharif

ಇಸ್ಲಾಮಾಬಾದ್:‌ ಆರ್ಥಿಕತೆಯಲ್ಲಿ ಪಾಕಿಸ್ತಾನವೂ ಶ್ರೀಲಂಕಾ ಹಾದಿಯೇ ಹಿಡಿದಿದೆ. ದಿನೇದಿನೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಬಡವರು ಜೀವನ ಸಾಗಿಸಲು ಪರಿತಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಹೀನಾಯ ಪರಿಸ್ಥಿತಿಯನ್ನು ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif) ಅವರೇ ಒಪ್ಪಿಕೊಂಡಿದ್ದಾರೆ. “ನಾವು ಜಗತ್ತಿನ ಎದುರು ಭಿಕ್ಷಾ ಪಾತ್ರೆ ಹಿಡಿದು ನಿಂತಿದ್ದೇವೆ” ಎಂದಿದ್ದಾರೆ.

“ನಾವು ನಮ್ಮ ಜತೆ ಉತ್ತಮ ಬಾಂಧವ್ಯ ಹೊಂದಿರುವ ರಾಷ್ಟ್ರಗಳಿಗೆ ಕರೆ ಮಾಡಿದರೂ, ಅವರು ಪಾಕಿಸ್ತಾನ ಹಣಕ್ಕಾಗಿಯೇ ಕರೆ ಮಾಡುತ್ತಿದೆ. ಪಾಕ್‌ ಈಗ ಭಿಕ್ಷಾ ಪಾತ್ರೆ ಹಿಡಿದು ನಿಂತಿದೆ ಎಂಬುದಾಗಿಯೇ ಭಾವಿಸುತ್ತಾರೆ” ಎಂದು ಶೆಹಬಾಜ್‌ ಷರೀಫ್‌ ಬಹಿರಂಗವಾಗಿಯೇ ಹೇಳಿದ್ದಾರೆ.

“ಸ್ವಾತಂತ್ರ್ಯ ಬಂದು ೭೫ ವರ್ಷವಾಗಿದೆ. ಸಣ್ಣ ಸಣ್ಣ ರಾಷ್ಟ್ರಗಳೇ ನಮ್ಮ ಆರ್ಥಿಕತೆಯನ್ನು ಮೀರಿ ಬೆಳೆದಿವೆ. ನಾವು ಮಾತ್ರ ಈಗಲೂ ಭಿಕ್ಷಾ ಪಾತ್ರೆ ಹಿಡಿದು ಜಗತ್ತಿನ ಎದುರು ನಿಂತಿದ್ದೇವೆ” ಎಂದು ಕಾರ್ಯಕ್ರಮವೊಂದರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ. ಇತ್ತೀಚೆಗಂತೂ ಹಣದುಬ್ಬರ ಜಾಸ್ತಿಯಾಗಿ ಜನ ಪರದಾಡುವಂತಾಗಿದೆ.

ಇದನ್ನೂ ಓದಿ | SCO Summit | ಪಾಕಿಸ್ತಾನ ಪ್ರಧಾನಿಗೆ ಹೆಡ್‌ಫೋನ್ ಪೇಚು, ವಿಡಿಯೋ ವೈರಲ್

Exit mobile version