Site icon Vistara News

Nepal Plane Crash | ಪತಿಯಂತೆಯೇ ಕೊನೆಯುಸಿರೆಳೆದ ಪತ್ನಿ! ನೇಪಾಳದ ವಿಮಾನ ದುರಂತದಲ್ಲಿ ಮೃತ ಕೋ-ಪೈಲಟ್‌ ಅಂಜು ಕಥೆ

ಕಠ್ಮಂಡು: ಅಂದು 16 ವರ್ಷಗಳ ಹಿಂದೆ ಅಂದರೆ 2006ರ ಜೂನ್‌ 21. ನೇಪಾಳದ ಯೇತಿ ಏರ್‌ಲೈನ್ಸ್‌ನ 9N AEQ ವಿಮಾನ ನೇಪಾಲ್‌ಗಂಜ್‌ನತ್ತ ಸಾಗುತ್ತಿತ್ತು. ಆದರೆ ದುರಾದೃಷ್ಟವಶಾತ್‌ ಆ ವಿಮಾನ ಅಪಘಾತಕ್ಕೀಡಾಗಿ, ಅದರಲ್ಲಿದ್ದ ಆರು ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದರು. ಆ ವಿಮಾನದ ಕೋ-ಪೈಲಟ್‌ ಆಗಿದ್ದ ದೀಪಕ್‌ ಪೋಖ್ರೇಲ್‌ ಪೈಲಟ್‌ ಆಗುವ ಕನಸು ನನಸಾಗುವುದಕ್ಕೂ ಮೊದಲೇ ಪ್ರಾಣ ಬಿಟ್ಟಿದ್ದರು. ಇದೀಗ ಭಾನುವಾರ ನೇಪಾಳದಲ್ಲಿ ನಡೆದ ವಿಮಾನ ಅಪಘಾತದಲ್ಲಿ (Nepal Plane Crash) ಸಾವನ್ನಪ್ಪಿದ ಕೋ-ಪೈಲಟ್‌ ಅಂಜು ಕಾಥಿವಾಡ್‌ ಬೇರಾರೂ ಅಲ್ಲ, 16 ವರ್ಷಗಳ ಹಿಂದೆ ಮೃತಪಟ್ಟ ಆ ಕೋ ಪೈಲಟ್‌ ದೀಪಕ್‌ ಅವರ ಪತ್ನಿಯೇ.

ಇದನ್ನೂ ಓದಿ: Nepal Plane Crash | ವಿಮಾನ ದುರಂತದಲ್ಲಿ ಉ.ಪ್ರದ ಐವರ ಸಾವು, ಶವ ತರಲು ಕೇಂದ್ರಕ್ಕೆ ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಯೋಗಿ ಸೂಚನೆ

ಹೌದು, ಅಂಜು ಕೂಡ ಗಂಡನಂತೆಯೇ ಪೈಲಟ್‌ ಆಗುವ ಕನಸು ಕಂಡವರು. ವರದಿಗಳ ಪ್ರಕಾರ ಭಾನುವಾರದ ವಿಮಾನ ಹಾರಾಟವು ಕೋ-ಪೈಲಟ್‌ ಆಗಿ ಅವರ ಕೊನೆಯ ವಿಮಾನವಾಗಿತ್ತು. ಆ ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಿದ್ದರೆ ಅವರು ಕ್ಯಾಪ್ಟನ್‌ ಆಗಿ ಬಡ್ತಿ ಪಡೆಯುತ್ತಿದ್ದರು. ಕೋ-ಪೈಲಟ್‌ಗಳು ನೂರು ತಾಸುಗಳ ವಿಮಾನ ಹಾರಾಟವನ್ನು ಸಂಪೂರ್ಣಗೊಳಿಸಿದ ನಂತರ ಅವರನ್ನು ಕ್ಯಾಪ್ಟನ್‌ ಆಗಿ ಬಡ್ತಿ ನೀಡಲಾಗುತ್ತದೆ. ಅದೇ ರೀತಿ ಅಂಜು ಅವರಿಗೆ ಇನ್ನು ಕೆಲವು ಸೆಕೆಂಡುಗಳ ಕಾಲ ವಿಮಾನ ಹಾರಾಟ ನಡೆಸಿದ್ದರೆ ಅವರು ಕ್ಯಾಪ್ಟನ್‌ ಆಗುವುದಕ್ಕೆ ಅರ್ಹರಾಗಿರುತ್ತಿದ್ದರು. ಆದರೆ ಅದಕ್ಕೂ ಮುನ್ನವೇ ಪತಿ ದೀಪಕ್‌ ಮೃತಪಟ್ಟ ರೀತಿಯಲ್ಲೇ ಅಂಜು ಕೂಡ ಕೊನೆಯುಸಿರೆಳೆದಿದ್ದಾರೆ.

ಅಂಜು ಅವರ ಜತೆ ಹಿರಿಯ ಪೈಲಟ್‌ ಕಮಲ್‌.ಕೆ.ಸಿ ಅವರು ವಿಮಾನ ಹಾರಾಟದಲ್ಲಿದ್ದರು. ಸುಮಾರು 35 ವರ್ಷಗಳಷ್ಟು ಅನೂಭವವಿರುವ ಅವರು ಅನೇಕ ಪೈಲಟ್‌ಗಳಿಗೆ ತರಬೇತಿ ನೀಡಿದ್ದರು ಕೂಡ.

ಇದನ್ನೂ ಓದಿ: Nepal plane crash | ವೈರಲ್‌ ವಿಡಿಯೊ| ಯೇತಿ ಏರ್‌ಲೈನ್ಸ್‌ನ ಕೊನೆಯ ಕ್ಷಣಗಳು ಫೇಸ್‌ಬುಕ್‌ನಲ್ಲಿ ದಾಖಲು!

Exit mobile version