Site icon Vistara News

Nepal plane crash | ವೈರಲ್‌ ವಿಡಿಯೊ| ಯೇತಿ ಏರ್‌ಲೈನ್ಸ್‌ನ ಕೊನೆಯ ಕ್ಷಣಗಳು ಫೇಸ್‌ಬುಕ್‌ನಲ್ಲಿ ದಾಖಲು!

nepal plane crash

ಕಠ್ಮಂಡು: ಭಾನುವಾರ ಸುಮಾರು 72 ಮಂದಿಯನ್ನು ಬಲಿ ತೆಗೆದುಕೊಂಡ ನೇಪಾಳದ ಯೇತಿ ಏರ್‌ಲೈನ್ಸ್‌ನ ವಿಮಾನದೊಳಗಿನ ಕೊನೆಯ ಕ್ಷಣಗಳು ಫೇಸ್‌ಬುಕ್‌ ಲೈವ್‌ ಒಂದರಲ್ಲಿ ದಾಖಲಾಗಿವೆ.

ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಒಬ್ಬರು ಪ್ರಯಾಣದ ಕೊನೆಯ ಕ್ಷಣಗಳನ್ನು ಫೇಸ್‌ಬುಕ್‌ನಲ್ಲಿ ಲೈವ್‌ ಮಾಡಿದ್ದರು. ಅದು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿದೆ. ಪೋಖರಾ ವಿಮಾಣದತ್ತ ಇಳಿಯುತ್ತಿದ್ದ ವಿಮಾನದ ಪ್ರಯಾಣಿಕರ ಖುಷಿಯ ಕ್ಷಣಗಳನ್ನು ದಾಖಲಿಸುತ್ತಿದ್ದ ಮೊಬೈಲ್‌ನಲ್ಲಿ ಇದ್ದಕ್ಕಿದ್ದಂತೆ ಆಗುತ್ತಿರುವ ಅಪಘಾತದ ಕೋಲಾಹಲ, ನಂತರ ಬೆಂಕಿ ಹತ್ತಿಕೊಂಡು ಉರಿಯುವ ಕ್ಷಣಗಳು ಕೂಡ ದಾಖಲಾಗಿವೆ. ವಿಮಾನ ಬಿದ್ದ ಬಳಿಕ ಬೆಂಕಿಯಲ್ಲಿ ಉರಿಯುತ್ತಿರುವುದನ್ನೂ ಇವರ ಮೊಬೈಲ್‌ ದಾಖಲಿಸಿಕೊಂಡಿದೆ.

ಇದನ್ನೂ ಓದಿ | Nepal Plane Crash | ವಿಮಾನ ದುರಂತದಲ್ಲಿ ಉ.ಪ್ರದ ಐವರ ಸಾವು, ಶವ ತರಲು ಕೇಂದ್ರಕ್ಕೆ ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಯೋಗಿ ಸೂಚನೆ

ಈ ದುರಂತದಲ್ಲಿ ವಿಮಾನದಲ್ಲಿದ್ದ 72 ಮಂದಿಯೂ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಕಳೆದ ಮೂರು ದಶಕಗಳಲ್ಲಿ ನೇಪಾಳ ಕಂಡಿರುವ ಅತಿ ದಾರುಣ ವಿಮಾನ ದುರಂತ ಇದಾಗಿದೆ. ಈ ವಿಮಾನದಲ್ಲಿ ಐವರು ಭಾರತೀಯರು ಸೇರಿ ಒಟ್ಟು 10 ಪ್ರಯಾಣಿಕರು ವಿದೇಶಿಯರು ಇದ್ದರು. ಭಾರತೀಯರೂ ಐವರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಸ್ಥಳದಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ. ಯೇತಿ ಏರ್​​ಲೈನ್ಸ್​​ಗೆ ಸೇರಿದ ಈ ವಿಮಾನ ಕಠ್ಮಂಡುವಿನಿಂದ ಪೊಖರಾಕ್ಕೆ ಆಗಮಿಸುತ್ತಿತ್ತು. ಇದರಲ್ಲಿ ನಾಲ್ವರು ಸಿಬ್ಬಂದಿ ಮತ್ತು 68 ಪ್ರಯಾಣಿಕರು ಸೇರಿ ಒಟ್ಟು 72 ಮಂದಿ ಇದ್ದರು. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​​ ಆಗುವುದಕ್ಕೂ ಮೊದಲು ಅಲ್ಲಿಯೇ ಸಮೀಪದಲ್ಲಿದ್ದ ಸೇತಿ ನದಿ ದಡದ ಮೇಲೆ ಪತನವಾಗಿದೆ. ಏರ್​ಪೋರ್ಟ್​ ಸದ್ಯ ಕ್ಲೋಸ್​ ಆಗಿದೆ. ವಿಮಾನವಂತೂ ಸಂಪೂರ್ಣ ಸುಟ್ಟುಹೋಗಿದೆ.

ಇದನ್ನೂ ಓದಿ | Nepal Plane Crash | ವಿಸ್ತಾರ ಫಾಲೋಅಪ್: ಐವರು ಭಾರತೀಯರು ಸೇರಿದಂತೆ 72 ಮಂದಿಯ ಸಾವು, 40 ಶವ ಪತ್ತೆ

Exit mobile version