ಕಾಠ್ಮಂಡು, ನೇಪಾಳ: ಭಾರತದ ನೆರೆಯ ಹಾಗೂ ಜಗತ್ತಿನ ಏಕೈಕ ಹಿಂದೂ ರಾಷ್ಟ್ರವಾಗಿರುವ ನೇಪಾಳದಲ್ಲಿ ಗುರುವಾರ ಅಧ್ಯಕ್ಷರ ಚುನಾವಣೆ ನಡೆಯಲಿದೆ(Nepal Presidential polls). ನೇಪಾಳ ಅಧ್ಯಕ್ಷರ ಎಲೆಕ್ಷನ್‌ಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗವು ಹೇಳಿದೆ. ಅಧ್ಯಕ್ಷ ಚುನಾವಣಾಗೆ ಸಂಬಂಧಿಸಿದಂತೆ ಬೆಳಗ್ಗೆ 10 ಗಂಟೆಯಿಂದಲೇ ಮತದಾನ ಕೂಡ ಆರಂಭವಾಗಿದೆ. ನೇಪಾಳಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಮ ಚಂದ್ರ ಪೌಡೆಲ್(Ram Chandra Poudel) ಮತ್ತು ಸಿಪಿಎನ್(ಯುಎಂಎಲ್) ಉಪಾಧ್ಯಕ್ಷ ಸುಭಾಶ್ ಚಂದ್ರ ನೆಂಬಾಂಗ್ (Subash Chandra Nembang) ಅವರು ನೇಪಾಳ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ನ್ಯೂ ಬನೇಶ್ವರ್‌ನಲ್ಲಿರುವ ಸಂಸತ್ ಭವನದ ಲೊಟ್ಸೆ ಹಾಲ್‌ನಲ್ಲಿ ನಡೆಯಲಿರುವ ಅಧ್ಯಕ್ಷರ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತದಾನಕ್ಕೆ ಅಗತ್ಯವಾಗಿರುವ ತಾಂತ್ರಿಕ, ಮಾನವ ಸಂಪನ್ಮೂಲ ಮತ್ತು ಇತರ ವ್ಯವಸ್ಥಾಪಕ ಸಂಬಂಧಿತ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ನೇಪಾಳ ಚುನಾವಣಾ ಅಧಿಕಾರಿ ಮಹೇಶ್ ಶರ್ಮಾ ಪೌಡೆಲ್ ತಿಳಿಸಿದ್ದಾರೆ.
ಇದನ್ನೂ ಓದಿ: ನೇಪಾಳದಿಂದ ಅಯೋಧ್ಯೆಗೆ ತಲುಪಿದ 2 ದೊಡ್ಡ ಶಿಲೆಗಳು; ‘ರಾಮಲಲ್ಲಾ’ ಆಗಿ ಬದಲಾಗಲಿವೆ ಈ ಪವಿತ್ರ ಕಲ್ಲುಗಳು
ಸಂಜೆ ಫಲಿತಾಂಶ ಪ್ರಕಟ
ಗುರುವಾರ ಬೆಳಗ್ಗೆ 10 ಗಂಟೆಗೆ ಶುರುವಾಗಿರುವ ಮತದಾನ ಮಧ್ಯಾಹ್ನ 3 ಗಂಟೆಗೆ ಮುಕ್ತಾಯವಾಗಲಿದೆ. ಆ ಬಳಿಕ ಮತ ಏಣಿಕೆ ಆರಂಭವಾಗಲಿದೆ. ಸಂಜೆ 7 ಗಂಟೆ ಹೊತ್ತಿಗೆ ಫಲಿತಾಂಶವು ಹೊರ ಬೀಳಲಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ. ಒಟ್ಟು 884 ಜನಪ್ರತಿನಿಧಿಗಳು ತಮ್ಮ ಮತಗಳನ್ನುಚಲಾಯಿಸಲಿದ್ದಾರೆ. ಈ ಪೈಕಿ 275 ಮಂದಿ ಹೌಸ್ ಆಫ್ ರಿಪ್ರಸೆಂಟೇಟಿವ್ ಸದಸ್ಯರಾಗಿದ್ದಾರೆ. ಉಳಿದ 550 ಮಂದಿ, ಏಳು ಪ್ರಾಂತ್ಯಗಳ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರಾಗಿದ್ದಾರೆ.