ಲಂಡನ್: ಬ್ರಿಟನ್‌ನಲ್ಲಿ ಕೋವಿಡ್ ವೈರಸ್‌ನ ಹೊಸ ರೂಪಾಂತರಿಯೊಂದು (New Covid variant) ವೇಗವಾಗಿ ಹರಡುತ್ತಿದ್ದು, ಇದು ಬ್ರಿಟನ್ ಹಾಗೂ ಸುತ್ತಮುತ್ತಲಿನ ದೇಶಗಳಲ್ಲಿ ಕಳವಳಕ್ಕೆ ಕಾರಣವಾಗಿದೆ. ಎರಿಸ್ (Eris) ಎಂದು ಇದನ್ನು ಹೆಸರಿಸಲಾಗಿದೆ.
ಇದು ವೇಗವಾಗಿ ಹರಡುತ್ತಿರುವ Omicronನ ಇನ್ನೊಂದು ರೂಪಾಂತರಿಯಾಗಿದೆ. EG.5.1 ಎಂಬುದು ಇದರ ವೈಜ್ಞಾನಿಕ ಹೆಸರು. ಇದನ್ನು ಮೊದಲ ಬಾರಿಗೆ ಯುಕೆಯಲ್ಲಿ ಕಳೆದ ತಿಂಗಳು ಪತ್ತೆಹಚ್ಚಲಾಯಿತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ, ವಿಶೇಷವಾಗಿ ಏಷ್ಯಾದಲ್ಲಿ ಹೆಚ್ಚುತ್ತಿರುವ ಕೋವಿಡ್ (covid 19) ಪ್ರಕರಣಗಳ ಪರಿಶೀಲನೆಯ ಭಾಗವಾಗಿ 3 ಜುಲೈ 2023ರಂದು ನಡೆಸಲಾದ ಪರೀಕ್ಷೆಯಲ್ಲಿ EG.5.1 ಅನ್ನು ಮೊದಲು ಗಮನಿಸಲಾಯಿತು. ಯುಕೆಯ ಡೇಟಾದಲ್ಲಿ ಇದರ ಜಿನೋಮ್‌ಗಳು ಹೆಚ್ಚುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರ ಬೆಳವಣಿಗೆಯನ್ನು ಗಮನಿಸಲಾಗುತ್ತಿದ್ದು, ವಿವರವಾದ ಗುಣಲಕ್ಷಣ ಮತ್ತು ವಿಶ್ಲೇಷಣೆಯನ್ನು ಮಾಡಲಾಗುತ್ತಿದೆ. ತಜ್ಞರ ಪ್ರಕಾರ ಈಗ ಏಳು ಹೊಸ COVID ಪ್ರಕರಣಗಳಲ್ಲಿ ಒಂದರಲ್ಲಿ ಹೊಸ ರೂಪಾಂತರಿಯು ಕಂಡುಬರುತ್ತಿದೆ. ಆಗಸ್ಟ್ 3ರ ವರದಿಯ ಪ್ರಕಾರ, ಉಸಿರಾಟದ ಸಮಸ್ಯೆಯ 4,396 ಮಾದರಿಗಳಲ್ಲಿ 5.4 ಪ್ರತಿಶತ COVID-19 ಎಂದು ಗುರುತಿಸಲಾಗಿದೆ. ಇದು ಹಿಂದಿನ ವರದಿಗಿಂತ ಹೆಚ್ಚಿದೆ. ಈ ಏರಿಕೆಯ ನಡುವೆ ಇತರ ದೇಶಗಳಿಗೆ ಜಾಗರೂಕರಾಗಿರಿ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಸಲಹೆ ನೀಡಿದೆ.
ರೂಪಾಂತರಿ ಎರಿಸ್ ಹೇಗಿದೆ?
ಹೊಸ ರೂಪಾಂತರಿ EG.5.1, ವೇಗವಾಗಿ ಹರಡುತ್ತಿರುವ Omicronನಿಂದ ಬಂದಿದೆ. ಕಳೆದ ತಿಂಗಳು, ಎರಿಸ್ ಎಂಬ ಅಡ್ಡಹೆಸರನ್ನು ಮೊದಲು ಬಳಸಲಾಯಿತು. ಇದು ಈಗ ದೇಶದಾದ್ಯಂತ ವೇಗವಾಗಿ ಹರಡುತ್ತಿದೆ. ಜನರು ಲಸಿಕೆಗಳಿಂದಾಗಿ ಈಗ ಹೆಚ್ಚು ಸುರಕ್ಷಿತಾಗಿದ್ದಾರೆ. ಆದರೂ ಇದನ್ನು ನಿರ್ಲಕ್ಷಿಸಬಾರದು ಎಂದು WHO ಡೈರೆಕ್ಟರ್ ಜನರಲ್ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಎರಿಸ್‌ನ ಲಕ್ಷಣಗಳೇನು?
ಅಧ್ಯಯನದ ಪ್ರಕಾರ, ಇದರ ಮುಖ್ಯ ರೋಗಲಕ್ಷಣಗಳು ಓಮಿಕ್ರಾನ್ ಅನ್ನೇ ಹೋಲುತ್ತವೆ. ಇತ್ತೀಚಿನ ವರದಿಗಳ ಪ್ರಕಾರ ಉಸಿರಾಟದ ತೊಂದರೆ, ವಾಸನೆಯ ನಷ್ಟ ಮತ್ತು ಜ್ವರಗಳು ಮುಖ್ಯ ಲಕ್ಷಣಗಳಲ್ಲ. ಇತರ ಪ್ರಮುಖ ಲಕ್ಷಣಗಳು ಹೀಗಿವೆ:
- ಗಂಟಲು ಕೆರೆತ
- ಮೂಗು ಸೋರುವಿಕೆ
- ಮೂಗು ಬ್ಲಾಕ್
- ಸೀನು
- ಒಣ ಕೆಮ್ಮು
- ತಲೆನೋವು
- ಆರ್ದ್ರ ಕೆಮ್ಮು
- ಒರಟಾದ ಧ್ವನಿ
- ಸ್ನಾಯು ನೋವು
- ವಾಸನೆ ಬದಲಾವಣೆ
ಇದನ್ನೂ ಓದಿ: CoWin Data leak : ಕೋವಿಡ್ ಲಸಿಕೆ ಪಡೆದವರ ವಿವರ ಟೆಲಿಗ್ರಾಂ ಆ್ಯಪ್‌ನಲ್ಲಿ ಸೋರಿಕೆ, ಈ ಬಗ್ಗೆ ಇಲಾಖೆ ಹೇಳಿದ್ದೇನು?