ಒಟ್ಟಾವ: ಖಲಿಸ್ತಾನಿ ಉಗ್ರ (Khalistani Terrorist) ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ(Nijjar Killing) ಪ್ರಕರಣದಲ್ಲಿ ನಿನ್ನೆ ಬಂಧನಕ್ಕೊಳಗಾಗಿರುವ ಮೂವರು ಆರೋಪಿಗಳು ಭಾರತೀಯ ಮೂಲದವರು ಎಂಬುದು ಬಯಲಾಗಿದೆ. ಕಳೆದ ವರ್ಷ ಕೆನಡಾ (Canada) ಬ್ರಿಟೀಷ್ ಕೊಲಂಬಿಯಾದಲ್ಲಿ ಹರ್ದೀಪ್ ಸಿಂಗ್‌ನನ್ನು ಹತ್ಯೆ ಮಾಡಲಾಗಿತ್ತು. ಇದೀಗ ಮೂವರು ಹಂತಕರನ್ನು ಅರೆಸ್ಟ್ ಮಾಡಿರುವ ಕೆನಡಾ ಪೊಲೀಸರು ಬಂಧಿತರನ್ನು ಕರಣ್ ಪ್ರಿತ್ ಸಿಂಗ್(28) ಕಮಲ್ ಪ್ರಿತ್ ಸಿಂಗ್(22) ಮತ್ತು ಕರಣ್ ಬ್ರಾರ್(22) ಎಂದು ಗುರುತಿಸಲಾಗಿದೆ. ಅಲ್ಲದೇ ಪೊಲೀಸರು ಮೂವರು ಹಂತಕರ ಫೊಟೋವನ್ನೂ ಕೂಡ ರಿಲೀಸ್ ಮಾಡಿದ್ದಾರೆ.
ಅರೋಪಿಗಳ ವಿರುದ್ಧ ಕೊಲೆಗೆ ಸಂಚು ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಕೋರ್ಟ್‌ಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಲಾಗಿದೆ. ಇನ್ನಿ ಬಂಧಿತ ಆರೋಪಿಗಳು ಇದುವರೆಗೆ ಪೊಲೀಸರ ಕ್ರಿಮಿನಲ್ ರೆಕಾರ್ಡ್‌ನಲ್ಲಿಲ್ಲದ ವ್ಯಕ್ತಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ. ಅಲ್ಲದೇ ಹರ್ದೀಪ್ ಸಿಂಗ್ ಹತ್ಯೆಯಲ್ಲಿ ಭಾರತ ಸರ್ಕಾರದ ಕೈವಾಡ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಡೇವಿಡ್ ಟೆಬೌಲ್ ಹೇಳಿದ್ದಾರೆ. ಇನ್ನು ಬಂಧಿತ ಆರೋಪಿಗಳು ನಿಜ್ಜರ್ ಹತ್ಯೆ ಸಂದರ್ಭದಲ್ಲಿ ಶೂಟರ್, ಚಾಲಕ ಮತ್ತು ಸ್ಪಾಟರ್‌ಗಳಲ್ಲಿ ಕೊಲೆಯಲ್ಲಿ ಭಾಗಿಯಾಗಿದ್ದರು. ನಿನ್ನೆ ಎರಡು ಪ್ರದೇಶಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಮೂವರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮತ್ತೆ ಭಾರತದತ್ತ ಬೊಟ್ಟು ಮಾಡಿದ ಕೆನಾಡ
ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ಮೂಲದ ಮೂವರನ್ನು ಅರೆಸ್ಟ್ ಮಾಡಿರುವ ಬೆನ್ನಲ್ಲೇ ಕೆನಡಾ ಮತ್ತೆ ಭಾರತದತ್ತ ಬೊಟ್ಟು ಮಾಡಿ ತೋರಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೆನಡಾ ಸಂಸ ಜಗ್ಮಿತ್ ಸಿಂಗ್, ಪ್ರಕರಣದಲ್ಲಿ ಭಾರತದ ಕೈವಾಡವಿರುವುದು ಸಾಬೀತಾಗಿದೆ. ಕೆನಡಾದಂತಹ ಪೂಜ್ಯನೀಯ ಸ್ಥಳದಲ್ಲಿ ಕೆನಡಾ ಪ್ರಜೆಯನ್ನು ಕೊಲ್ಲಲು ಭಾರತ ಹಂತಕರನ್ನು ನೇಮಿಸಿದೆ ಎಂದು ಆರೋಪಿಸಿದ್ದಾರೆ.
2023ರ ಜೂನ್ 18ರಂದು ಕೆನಡಾದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೀಡಾಗಿದ್ದ. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪ ಕೂಡ ಮಾಡಿದ್ದರು. ಹೀಗೆ, ಕೆನಡಾವನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕಿಸ್ತಾನದ ಐಎಸ್‌ಐ ಇಂತಹ ಕುತಂತ್ರ ಮಾಡಿದೆ. ಆದರೆ, ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಆರೋಪವನ್ನು ತಿರಸ್ಕರಿಸುವ ಭಾರತ, ಆರೋಪಗಳಿಗೆ ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ.
ಇದನ್ನೂ ಓದಿ: Nijjar Killing: ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಕೆನಡಾ ಪೊಲೀಸರು; ಯಾರಿವರು?
“ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತು ನಾನು ಭಾರತದ ಜತೆ ಮಾತನಾಡಿದ್ದೇನೆ. ಆದರೆ, ಆತನ ಹತ್ಯೆಯ ಕುರಿತು ಭಾರತಕ್ಕೆ ತುಂಬ ವಾರಗಳ ಹಿಂದೆಯೇ ನಂಬಲರ್ಹ ಆರೋಪಗಳ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ತುಂಬ ಗಂಭೀರವಾದ ವಿಚಾರದ ಕುರಿತು ಭಾರತ ಹಾಗೂ ಕೆನಡಾ ಒಗ್ಗೂಡಿ ಕಾರ್ಯನಿರ್ವಹಿಸುವ ಕುರಿತು ಕೂಡ ಮನವರಿಕೆ ಮಾಡಲಾಗಿದೆ. ಗಂಭೀರ ಹತ್ಯೆಯ ವಿಚಾರದಲ್ಲಿ ಭಾರತವು ನಮ್ಮ ಜತೆ ಕೈಗೂಡಿಸುತ್ತದೆ ಎಂಬ ಆಶಾಭಾವನೆಯಲ್ಲಿ ಇದ್ದೇವೆ” ಎಂದು ಜಸ್ಟಿನ್ ಟ್ರುಡೋ ಹೇಳಿದ್ದರು. ಆದರೆ, ಭಾರತ ಮಾತ್ರ ಸರಿಯಾದ ಸಾಕ್ಷ್ಯ ಕೊಡಿ ಎಂದು ಹೇಳಿದೆ.