Site icon Vistara News

Namaz Ban: ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಿಷೇಧ; ಮಸೂದೆ ಮಂಡಿಸಿದ ಸರ್ಕಾರ

Italy withdrawn from Chinas vast Belt and Road project Says Sources

ನವದೆಹಲಿ: ಮುಸ್ಲಿಮರು ರಸ್ತೆ ಮಧ್ಯೆಯೇ ನಮಾಜ್(Namaz Ban) ಮಾಡುತ್ತಾರೆ. ಈ ಪ್ರವೃತ್ತಿಗೆ ಕಡಿವಾಣ ಹಾಕಬೇಕೆಂಬ ಒತ್ತಾಯವು ಸಾಮಾನ್ಯವಾಗಿ ಕೇಳಿ ಬರುತ್ತದೆ. ಉತ್ತರ ಪ್ರದೇಶದಲ್ಲಂತೂ ಈ ಕುರಿತು ಗಲಾಟೆ ಜೋರು. ಈ ಮಧ್ಯೆ, ಇಟಲಿ (Italy) ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಿಷೇಧಿಸುವ ಹೊಸ ಕಾನೂನು ಜಾರಿಗೆ ತರಲು ಹೊರಟಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಲಪಂಥೀಯ ಸಮ್ಮಿಶ್ರ ಸರ್ಕಾರ ನೇತೃತ್ವ ವಹಿಸಿಕೊಂಡಿರುವ ಪ್ರಧಾನಿ ಜಾರ್ಜಿಯಾ ಮೆಲೋನಿ (Prime Minister Giorgia Meloni) ಅವರು ಈ ಕುರಿತು ವಿಧೇಯಕವನ್ನು (Bill) ಸಿದ್ಧಪಡಿಸುತ್ತಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಿಷೇಧಿಸುವ ವಿಧೇಯಕವನ್ನು ಬ್ರದರ್ಶ್ ಆಫ್ ಇಟಲಿ (FdI) ಪಕ್ಷವೂ ಪ್ರಸ್ತಾಪಿಸಿದೆ. ಸದ್ಯ ಈ ಬಿಲ್, ಸಂಸತ್ತಿನ ಪರಿಸರ ಸಮಿತಿ ಪರಿಶೀಲನೆಯಲ್ಲಿದೆ. ಹಾಗೆಯೇ, ಗ್ಯಾರೇಜ್‌ಗಳನ್ನು ಮತ್ತು ಕೈಗಾರಿಕಾ ದಾಸ್ತಾನುಗಳನ್ನು ನಮಾಜ್ ಮಾಡಲು ಸ್ಥಳಗಳಾಗಿ ಬಳಸುವು ಪ್ರಸ್ತಾಪವನ್ನು ಈ ಬಿಲ್ ಹೊಂದಿದೆ ಎಂದು ಸ್ಥಳೀಯ ಮಾಧ್ಯಮ ಡೈಲಿ 24 ಒರೆ ವರದಿ ಮಾಡಿದೆ.

ಈ ಮಧ್ಯೆ, ಈ ಮಸೂದೆಗೆ ಪ್ರತಿಪಕ್ಷದ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ. ಮಸೂದೆಯನ್ನು ಪರಿಶೀಲನೆ ನಡೆಸುತ್ತಿರುವ ಪರಿಸರ ಸಮಿತಿಯಲ್ಲಿ ಪ್ರತಿಪಕ್ಷದ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಟಾಲಿಯನ್ ರಾಜ್ಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಸ್ಥೆಗಳು ಆಸ್ತಿಯನ್ನು ಪೂಜಾ ಸ್ಥಳವಾಗಿ ಬಳಸಲು ಅನುಮತಿಸುವುದಿಲ್ಲ ಎಂದು ದಿನಪತ್ರಿಕೆ ಹೇಳಿದೆ, ದೇಶದ ಮುಸ್ಲಿಂ ಸಮುದಾಯವು ರಾಜ್ಯದೊಂದಿಗೆ ಅಂತಹ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Namaz In Train | ರೈಲಿನಲ್ಲಿ ನಮಾಜ್‌ ಮಾಡಿದ ಮುಸ್ಲಿಮರು, ದೂರು ದಾಖಲಿಸಿದ ಬಿಜೆಪಿ ಮಾಜಿ ಶಾಸಕ

ರೋಮ್‌ನ ಮ್ಯಾಗ್ಲಿಯಾನಾ ಮಸೀದಿಯ ಇಮಾಮ್ ಸಾಮಿ ಸೇಲಂ ಅವರು ಸ್ಥಳೀಯ ದಿನ ಪತ್ರಿಕೆಯೊಂದಿಗೆ ಮಾತನಾಡಿ, ಈ ಮಸೂದೆಯು ಮುಸ್ಲಿಮರ ವಿರುದ್ಧ ಸ್ಪಷ್ಟವಾಗಿ ತಾರತಮ್ಯ ಮಾಡುತ್ತದೆ. ಇಟಲಿಯಲ್ಲಿ ವಾಸಿಸುವ ಎಲ್ಲಾ ನಾಗರಿಕರನ್ನು ರಕ್ಷಿಸುವ ಇಟಾಲಿಯನ್ ಸಂವಿಧಾನವನ್ನು ಈ ಮೂಸದೆ ಗೌರವಿಸುವುದಿಲ್ಲ ಎಂದು ಹೇಳಿದ್ದಾರೆ.

ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version