Site icon Vistara News

Lanka on fire| ಶ್ರೀಲಂಕಾ ನೂತನ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ವಿರುದ್ಧ ನಿಲ್ಲದ ಪ್ರತಿಭಟನೆ

srilanka crises

ಕೊಲಂಬೊ: ಶ್ರೀಲಂಕಾದಲ್ಲಿ ನೂತನ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಅವರು ಹೊಸ ಪ್ರಧಾನಿ ಮತ್ತು ಸಂಪುಟ ರಚನೆಗೆ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದು ಕಡೆ ನೂರಾರು ಪ್ರತಿಭಟನಾಕಾರರು ಅಧ್ಯಕ್ಷರ ಕಚೇರಿ ಮುಂದೆ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ಲಂಕಾ ಸರ್ಕಾರ ಪ್ರತಿಭಟನಾಕಾರರ ಶುಕ್ರವಾರ ಟೆಂಟ್‌ಗಳನ್ನು ತೆರವುಗೊಳಿಸಲು ಮುಂದಾಗಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿದೆ. ” ರನಿಲ್‌ ವಿಕ್ರಮಸಿಂಘೆ ಅವರು ನಮ್ಮನ್ನು ನಾಶಪಡಿಸಲು ಯತ್ನಿಸುತ್ತಿದ್ದಾರೆ. ಆದರೆ ನಾವು ಈ ಅಸಹ್ಯ ರಾಜಕಾರಣದಿಂದ ದೇಶವನ್ನು ಮುಕ್ತಗೊಳಿಸುತ್ತೇವೆʼʼ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರನಿಲ್‌ ವಿಕ್ರಮಸಿಂಘೆ ರಾಜೀನಾಮೆ ನೀಡುವ ತನಕ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಜನರ ಸಂಸತ್ತು ರಚನೆಯಾದಾಗ ಮಾತ್ರ ನಮಗೆ ವಿಜಯ ಲಭಿಸಿದಂತಾಗಲಿದೆ. ಅಲ್ಲಿಯವರೆಗೆ ನಾವು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಮತ್ತೊಂದು ಕಡೆ ಅಧ್ಯಕ್ಷೀಯ ಭವನವನ್ನು ಅತಿಕ್ರಮಿಸಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರನಿಲ್‌ ವಿಕ್ರಮಸಿಂಘೆ ಎಚ್ಚರಿಸಿದ್ದಾರೆ.

ಶ್ರೀಲಂಕಾದ ಸಂಸದರಿಂದ ನೂತನ ಅಧ್ಯಕ್ಷರಾಗಿರುವ ರನಿಲ್‌ ವಿಕ್ರಮಸಿಂಘೆ, ರಾಜಪಕ್ಸ ಕುಟುಂಬಕ್ಕೆ ಆಪ್ತ ಹಾಗೂ, ಹೊಸ ಸಚಿವ ಸಂಪುಟದಲ್ಲಿ ರಾಜಪಕ್ಸ ಕುಟುಂಬಕ್ಕೆ ನಿಷ್ಠರಾದವರನ್ನು ಸೇರಿಸಲು ಯತ್ನಿಸುತ್ತಿರುವುದು ಪ್ರತಿಭಟನಾಕಾರರ ಅಸಮಾಧಾನವನ್ನು ಹೆಚ್ಚಿಸಿದೆ.

Exit mobile version