Site icon Vistara News

Nostradamus: ನಾಸ್ಟ್ರಾಡಾಮಸ್‌ ಭವಿಷ್ಯದಂತೆ ರಾಣಿ ಕೇಟ್‌ಗೆ ಕ್ಯಾನ್ಸರ್;‌ ಇನ್ನೂ ಏನೆಲ್ಲ ಕಾದಿದೆ?

Kate Middleton

Nostradamus' Predictions Resurface Amid UK Royal Family's Health Concerns

ನವದೆಹಲಿ: ಬ್ರಿಟನ್‌ ರಾಜಕುಮಾರ ಚಾರ್ಲ್ಸ್‌ (King Charles) ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದರ ಬೆನ್ನಲ್ಲೇ, ವೇಲ್ಸ್‌ ರಾಜಕುಮಾರಿ, ರಾಯಲ್‌ ಕುಟುಂಬದ ಕೇಟ್‌ ಮಿಡಲ್ಟನ್‌ (Kate Middleton) ಅವರಿಗೂ ಕ್ಯಾನ್ಸರ್‌ (Cancer) ಪತ್ತೆಯಾಗಿದೆ. ಹಾಗಾಗಿ, ರಾಜಮನೆತನದಲ್ಲೀಗ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇದರ ಬೆನ್ನಲ್ಲೇ, 15ನೇ ಶತಮಾನದ ಫ್ರಾನ್ಸ್‌ ತತ್ವಜ್ಞಾನಿ ನಾಸ್ಟ್ರಾಡಾಮಸ್‌ (Nostradamus) ಅವರು ರಾಜಮನೆತನ ಸೇರಿ 2024ರಲ್ಲಿ ಜಗತ್ತಿನಾದ್ಯಂತ ಏನೆಲ್ಲ ಸಂಭವಿಸಲಿದೆ ಎಂಬ ಕುರಿತು ಭವಿಷ್ಯ ನುಡಿದಿರುವುದು ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಬ್ರಿಟನ್‌ ರಾಜಕುಮಾರಿ ಕ್ವೀನ್‌ ಎಲಿಜಬೆತ್‌ ಅವರ ನಿಧನದ ಕುರಿತು ನಾಸ್ಟ್ರಾಡಾಮಸ್‌ ಹೇಳಿದ ಭವಿಷ್ಯ ನಿಜವಾಗಿದೆ. ಇನ್ನು ಈಗಿನ ರಾಜ ಚಾರ್ಲ್ಸ್‌ ಅವರ ಹುದ್ದೆಯನ್ನು ಅನಿರೀಕ್ಷಿತವಾಗಿ ಬೇರೊಬ್ಬರು ಏರಬಹುದು ಎಂದು ನಾಸ್ಟ್ರಾಡಾಮಸ್‌ ಭವಿಷ್ಯ ಹೇಳಿದ್ದಾರೆ. ಅಲ್ಲದೆ, ರಾಜಮನೆತನಕ್ಕೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂದು ಕೂಡ ಭವಿಷ್ಯ ನುಡಿದಿದ್ದಾರೆ. ಅದರಂತೆ, ಕೇಟ್‌ ಮಿಡಲ್ಟನ್‌ ಅವರಿಗೆ ಕ್ಯಾನ್ಸರ್‌ ಪತ್ತೆಯಾಗಿದೆ. ಈ ಕುರಿತು ಕೆಲ ದಿನಗಳ ಹಿಂದಷ್ಟೇ ಕೇಟ್‌ ಮಿಡಲ್ಟನ್‌ ಅವರು ಮಾಹಿತಿ ನೀಡಿದ್ದಾರೆ.

ನಾಸ್ಟ್ರಾಡಾಮಸ್

ನಾಸ್ಟ್ರಾಡಾಮಸ್‌ 2024ರ ಕುರಿತು ನುಡಿದಿದ್ದೇನು?

ಹವಾಮಾನ ವೈಪರೀತ, ಬರಗಾಲ ಅಥವಾ ಅತಿಯಾದ ಮಳೆಯಿಂದಾಗಿ ಜಗತ್ತಿನ ಹಲವೆಡೆ ಮನುಕುಲ ನಲುಗಲಿದೆ. ಲಕ್ಷಾಂತರ ಜನ ಇದರಿಂದ ಮೃತಪಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅಷ್ಟೇ ಅಲ್ಲ, ಹಿಂದು ಮಹಾಸಾಗರದಲ್ಲಿ ಚೀನಾ ಆಕ್ರಮಣಕಾರಿ ನೀತಿ, ಚೀನಾ-ಅಮೆರಿಕ ಯುದ್ಧ, ಅಮೆರಿಕದಲ್ಲಿ ಹೊಸ ಪೋಪ್‌ ಆಯ್ಕೆ ಸೇರಿ ನಾಸ್ಟ್ರಾಡಾಮಸ್‌ ಹಲವು ಭವಿಷ್ಯ ನುಡಿದಿದ್ದಾರೆ. ಹಾಗಾಗಿ, 2024ರಲ್ಲಿ ಇನ್ನೂ ಏನೆಲ್ಲ ಅನಾಹುತಗಳು ಸಂಭವಿಸಲಿವೆ ಎಂಬ ಆತಂಕಗಳು ಎದುರಾಗಿವೆ.

ಇದನ್ನೂ ಓದಿ: Kate Middleton: ಬ್ರಿಟನ್​ ರಾಜಕುಮಾರಿ ಕೇಟ್​ ಮಿಡಲ್ಟನ್​ಗೆ ಕ್ಯಾನ್ಸರ್​

ನಾಸ್ಟ್ರಾಡಾಮಸ್‌ ಯಾವೆಲ್ಲ ಭವಿಷ್ಯವಾಣಿ ನಿಜ?

ಕಳೆದ ಹಲವು ಶತಮಾನಗಳಲ್ಲಿ ನಾಸ್ಟ್ರಾಡಾಮಸ್‌ ನುಡಿದ ಹತ್ತಾರು ಭವಿಷ್ಯವಾಣಿಗಳು ನಿಜವಾಗಿವೆ. ಜರ್ಮನಿಯಲ್ಲಿ ಹಿಟ್ಲರನ ಉದಯ, ಅವನ ಅಟ್ಟಹಾಸ, ಅಮೆರಿಕ ಮಾಜಿ ಅಧ್ಯಕ್ಷ ಜಾನ್‌ ಎಫ್‌. ಕೆನಡಿ ಮೇಲೆ ಗುಂಡಿನ ದಾಳಿ, ಬ್ರಿಟನ್‌ನ ಕ್ವೀನ್‌ ಎಲಿಜಬೆತ್‌ ಸಾವು, 9/11ರ ದಾಳಿ, ಫ್ರಾನ್ಸ್‌ ಕ್ರಾಂತಿ, ನೆಪೋಲಿಯನ್‌ನ ಏಳಿಗೆ ಸೇರಿ ಹಲವು ಘಟನೆಗಳ ಕುರಿತು ನಾಸ್ಟ್ರಾಡಾಮಸ್‌ ನುಡಿದ ಭವಿಷ್ಯವಾಣಿಗಳು ನಿಜವಾಗಿವೆ. ಹಾಗಾಗಿ, ಪ್ರತಿ ವರ್ಷ ನಾಸ್ಟ್ರಾಡಾಮಸ್‌ ಭವಿಷ್ಯವಾಣಿ ಕುರಿತು ಭಾರಿ ಚರ್ಚೆಯಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version