Site icon Vistara News

Pakistan Economic Crisis: ಬೀದಿಗೆ ಬಂದ ಪಾಕ್‌, ಸೈನಿಕರಿಗೆ ಊಟಕ್ಕೂ ದಿಕ್ಕಿಲ್ಲ, ಸಚಿವರಿಗೆ ಓಡಾಡಲು ಕಾರಿಲ್ಲ

Not Able to Feed Soldiers, No cars to Ministers; Pakistan on its edge to Collapse

Pakistan Economic Crisis

ಇಸ್ಲಾಮಾಬಾದ್:‌ ಆರ್ಥಿಕ ಹಿಂಜರಿತದಿಂದ ಬಳಲುತ್ತಿರುವ ಪಾಕಿಸ್ತಾನದ ಪರಿಸ್ಥಿತಿ (Pakistan Economic Crisis) ದಿನೇದಿನೆ ಹದಗೆಡುತ್ತಿದೆ. ಬೆಲೆಯೇರಿಕೆಯಿಂದಾಗಿ ಜನ ಪರದಾಡುವಂತಾಗಿದೆ. ಜನರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಲೂ ಸರ್ಕಾರಕ್ಕೆ ಆಗುತ್ತಿಲ್ಲ. ಅದರಲ್ಲೂ, ಈಗಿನ ವಿತ್ತೀಯ ಪರಿಸ್ಥಿತಿಯಂತೂ ಪಾಕಿಸ್ತಾನ ಮತ್ತೊಂದು ಶ್ರೀಲಂಕಾ ಆಗಿ ಪರಿವರ್ತನೆಗೊಂಡಿದೆ. ಪಾಕಿಸ್ತಾನದ ಸೈನಿಕರಿಗೆ ಪೌಷ್ಟಿಕಾಂಶಯುಕ್ತ ಊಟ ಕೊಡಲೂ, ಸಚಿವರು ಕಾರಿನಲ್ಲಿ ಓಡಾಡಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂಬರುವ ದಿನಗಳಲ್ಲಿ ಜನ ದಂಗೆಯೆದ್ದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಪಾಕಿಸ್ತಾನದ ಸೈನಿಕರಿಗೆ ರಾವಲ್ಪಿಂಡಿಯಲ್ಲಿರುವ ಜನರಲ್‌ ಕೇಂದ್ರ ಕಚೇರಿಯಿಂದಲೇ ಯಾವುದೇ ಅಗತ್ಯ ವಸ್ತುಗಳ ಪೂರೈಕೆಯಾಗುತ್ತಿಲ್ಲ. ಸೇನೆಯ ಮೆಸ್‌ಗಳಲ್ಲಿ ಸಮರ್ಪಕವಾದ ವಸ್ತುಗಳ ಪೂರೈಕೆಯಾಗದ ಕಾರಣ ಪಾಕಿಸ್ತಾನದ ಸೈನಿಕರು ಅರೆಹೊಟ್ಟೆಯಲ್ಲಿಯೇ ದೇಶ ಕಾಯುವ ದುಸ್ಥಿತಿ ಬಂದೊದಗಿದೆ ಎಂದು ಸೇನೆಯ ಉನ್ನತ ಮೂಲಗಳು ತಿಳಿಸಿವೆ. ಸೈನಿಕರಿಗೆ ನೀಡುವ ಆಹಾರದ ಅನುದಾನವನ್ನೇ ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಸಚಿವರಿಗೆ ಚಹಾ-ಬಿಸ್ಕತ್ತೇ ಗತಿ

ಪ್ರಧಾನಿ ಶೆಹಬಾಜ್‌ ಷರೀಫ್‌ ಅವರ ಸಂಪುಟ ಸದಸ್ಯರಿಗೆ ನೀಡಲಾಗಿದ್ದ ಐಷಾರಾಮಿ ಸೇವೆಗಳನ್ನು ಕಡಿತಗೊಳಿಸಲಾಗಿದೆ. “ಸಂಪುಟ ಸದಸ್ಯರ ಐಷಾರಾಮಿ ಕಾರುಗಳ ಓಡಾಟವನ್ನು ನಿಲ್ಲಿಸಲಾಗಿದೆ. ಹಾಗೆಯೇ, ಅವರಿಗೆ ಒಂದೇ ಕಾರಿನ ಭದ್ರತೆ (ಎಸ್ಕಾರ್ಟ್) ಒದಗಿಸಲಾಗುತ್ತದೆ.‌ ಎಲ್ಲ ಸಚಿವರು ಈಗಾಗಲೇ ಸಂಬಳ ಪಡೆಯದಿರುವ ತೀರ್ಮಾನ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಅವರು ಫೈವ್‌ಸ್ಟಾರ್‌ ಹೋಟೆಲ್‌ಗಳಲ್ಲಿ ತಂಗುವುದಿಲ್ಲ. ಚಹಾ-ಬಿಸ್ಕಿಟ್‌ನಲ್ಲಿಯೇ ಸಭೆ ಮುಗಿಸಲು ತೀರ್ಮಾನಿಸಲಾಗಿದೆ” ಎಂದು ಪ್ರಧಾನಿಯೇ ಘೋಷಣೆ ಮಾಡಿದ್ದಾರೆ. ಇದು ಕೂಡ ಪಾಕ್‌ ಹಣಕಾಸು ದಿವಾಳಿತನಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Javed Akhtar: 26/11 ಮುಂಬೈ ದಾಳಿಕೋರರು ಇನ್ನೂ ನಿಮ್ಮಲ್ಲೇ ಇದ್ದಾರೆ! ಪಾಕಿಸ್ತಾನಕ್ಕೆ ಅಖ್ತರ್ ಖಡಕ್ ಉತ್ತರ

Exit mobile version