Site icon Vistara News

Oil Tanker Capsizes:ತೈಲ ತುಂಬಿದ್ದ ಹಡಗು ಮುಳುಗಡೆ; ಕಣ್ಮರೆಯಾಗಿದ್ದ 8 ಭಾರತೀಯರು ಸೇರಿ ಒಟ್ಟು 9 ನಾವಿಕರ ರಕ್ಷಣೆ

Oil Tanker Capsizes

ಒಮನ್‌: ಒಮನ್‌(Oman) ಸಮುದ್ರದಲ್ಲಿ ತೈಲ ತುಂಬಿದ್ದ ಹಡಗು ಮುಳುಗಿದ(Oil Tanker Capsizes) ಕಾರಣ ಕಣ್ಮರೆಯಾಗಿದ್ದ ನಾವಿಕರಲ್ಲಿ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದೆ. ಕಣ್ಮರೆಯಾಗಿದ್ದ 13 ಜನರಲ್ಲಿ ಎಂಟು ಮಂದಿ ಭಾರತೀಯರು ಸೇರಿದಂತೆ ಒಟ್ಟು ಒಂಬತ್ತು ಮಂದಿ ನಾವಿಕರು ರಕ್ಷಿಸಲ್ಪಟ್ಟಿದ್ದಾರೆ.

ಕೊಮೊರೊಸ್-ಧ್ವಜದ ತೈಲ ಟ್ಯಾಂಕರ್ ರಾಸ್ ಮದ್ರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಡುಕ್ಮ್ ಬಂದರು ಪಟ್ಟಣಕ್ಕೆ ಸಮೀಪದಲ್ಲಿ ಮುಳುಗಡೆಯಾಗಿತ್ತು. ಈ ಬಗ್ಗೆ ಎಂದು ಸಾಗರ ಭದ್ರತಾ ಕೇಂದ್ರ(MSC) X ನಲ್ಲಿನ ಪೋಸ್ಟ್‌ ಮಾಡಿ ತಿಳಿಸಿತ್ತು. ಇನ್ನು ದುಕ್ಮ್‌ ಪಟ್ಟಣ ಒಮನ್‌ ಆಗ್ನೇಯ ಭಾಗದಲ್ಲಿದೆ. ಇನ್ನು ಮುಳುಗಡೆಯಾಗಿರುವ ಹಡಗನ್ನು ಪ್ರೆಸ್ಟೀಜ್ ಫಾಲ್ಕನ್ ಎಂದು ಗುರುತಿಸಲಾಗಿದ್ದು, ಅದರಲ್ಲಿದ್ದ 16ಜನ ನಾವಿಕರನ್ನು 13 ನಾವಿಕರು ಕಣ್ಮರೆಯಾಗಿದ್ದರು. ಅವರಿಗಾಗಿ ಹುಡುಕಾಟ ನಡೆದಿತ್ತು. ನೌಕೆಯಲ್ಲಿ ಒಟ್ಟು 13 ಭಾರತೀಯರು ಹಾಗೂ 3 ಶ್ರೀಲಂಕಾ ಮೂಲದ ನಾವಿಕರಿದ್ದರು ಎನ್ನಲಾಗಿದೆ.

ಇದೀಗ ರಕ್ಷಣಾ ಕಾರ್ಯಾಚರಣೆಯಲ್ಲಿ 9 ನಾವಿಕರನ್ನು ರಕ್ಷಿಸಲಾಗಿದೆ. ಈ ಬಗ್ಗೆ ಒಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್‌ ಮಾಡಿದೆ. ಜುಲೈ 15 ರಂದು ಒಮಾನ್ ಕರಾವಳಿಯಲ್ಲಿ ಮುಳುಗಿದ ಕೊಮೊರೊಸ್ ಫ್ಲ್ಯಾಗ್ಡ್ ಹಡಗಿನ ಎಂಟಿ ಪ್ರೆಸ್ಟೀಜ್ ಫಾಲ್ಕನ್‌ನಲ್ಲಿದ್ದ ನಾವಿಕರಿಗಾಗಿ ರಾಯಭಾರ ಕಚೇರಿಯು ಒಮಾನಿ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಭಾರತೀಯ ನೌಕಾಪಡೆ ಮತ್ತು ಒಮನ್‌ SAR ಜಂಟೀ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದೆ. ಐಎನ್‌ಎಸ್ ಟೆಗ್ ಮೂಲಕ 8 ಭಾರತೀಯರು ಸೇರಿದಂತೆ 9 ಸಿಬ್ಬಂದಿಯನ್ನು ಇಂದು ರಕ್ಷಿಸಲಾಗಿದೆ. ಉಳಿದಿರುವವರಿಗಾಗಿ ಶೋಧ ಮುಂದುವರಿದಿದೆ” ಎಂದು ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ: Oil Tanker Capsizes: ತೈಲ ತುಂಬಿದ್ದ ಹಡಗು ಮುಳುಗಡೆ; 13 ಭಾರತೀಯರು ಜಲಸಮಾಧಿ

Exit mobile version