ನವದೆಹಲಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ(Oscar Nominations 2024). ಗ್ರೇಟಾ ಗೆರ್ವಿಗ್ ಅವರ ಬಾರ್ಬಿ(Barbie), ಕ್ರಿಸ್ಟೋಫರ್ ನೋಲನ್ ಅವರ ಒಪೆನ್‌ಹೈಮರ್ (Oppenheimer) ಮತ್ತು ಮಾರ್ಟಿನ್ ಸ್ಕಾರ್ಸೆಸ್ ಅವರ ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ (Killers of Flower Moon) ಸೇರಿದಂತೆ 96ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಸಿಂಹಪಾಲು ಪಡೆದಿವೆ.
ಅತ್ಯುತ್ತಮ ಚಿತ್ರಗಳ ಸ್ಪರ್ಧೆಯಲ್ಲಿ ಅಮೆರಿಕನ್ ಫಿಕ್ಷನ್, ಅನಾಟಮಿ ಆಫ್ ಎ ಫಾಲ್, ಬಾರ್ಬೀ, ದಿ ಹಾಲ್ಡೋವರ್ಸ್, ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್, ಮೇಸ್ಟ್ರು, ಓಪನ್ ಹೈಮರ್, ಪಾಸ್ಟ್ ಲೈವ್ಸ್, ಪ್ಯೂರ್ ಥಿಂಗ್ಸ್, ದಿ ಝೋನ್ ಆಫ್ ಇಂಟರೆಸ್ಟ್ ಸಿನಿಮಾಗಳಿವೆ.
ಇನ್ನು ನಿರ್ದೇಶಕರ ಪಟ್ಟಿಯಲ್ಲಿ ಅನಾಟಮಿ ಆಫ್ ಎ ಫಾಲ್ ಚಿತ್ರ ನಿರ್ದೇಶಕ ಜಸ್ಟೀನ್ ಟೈಟ್, ಕಿಲ್ಲರ್ಸ್ ಆಫ್ ದಿ ಮೂನ್ ಫ್ಲವರ್ ಡೈರೆಕ್ಟರ್ ಮಾರ್ಟಿನ್ ಸ್ಕಾರ್ಸೆಸೆ, ಓಪನ್‌ಹೈಮರ್ ಚಿತ್ರದ ಕ್ರಿಸ್ಟೋಫರ್ ನೋಲಾನ್, ಪ್ಯೂರ್ ಥಿಂಗ್ಸ್ ಡೈರೆಕ್ಟರ್ ಯಾರ್ಗೋಸ್ ಲ್ಯಾಂಥಿಮೋಸ್, ದಿ ಝೋನ್ ಆಫ್ ಇಂಟರೆಸ್ಟ್ ಸಿನಿಮಾ ನಿರ್ದೇಶಕ ಜೋನಾಥನ್ ಗ್ಲಾಜೆರ್ ಸ್ಪರ್ಧೆ ನಡೆಸುತ್ತಿದ್ದಾರೆ.
ಅತ್ಯುತ್ತಮ ನಟರ ಪ್ರಶಸ್ತಿಗಾಗಿ ಮೆಸ್ಟ್ರೋ ಚಿತ್ರದ ಬ್ರಾಡ್ಲೀ ಕೂಪರ್, ರಸ್ಟಿನ್ ಸಿನಿಮಾದ ಕೋಲ್ಮನ್ ಡೋಮಿಂಗೊ, ಹಾಲ್ಡೋವರ್ಸ್ ಚಿತ್ರದ ಪೌಲ್ ಗಿಯಾಮಟ್ಟಿ, ಓಪನ್ ಹೈಮರ್ ಚಿತ್ರದ ಸಿಲಿಯನ್ ಮುರ್ಫಿ, ಅಮೆರಿಕನ್ ಫಿಕ್ಷನ್ ಚಿತ್ರದ ಝೆಫ್ರಿ ರೈಟ್ ಅವರು ಸ್ಪರ್ಧೆಯಲ್ಲಿದ್ದಾರೆ.
ಅತ್ಯುತ್ತಮ ನಟಿ ಪ್ರಶಸ್ತಿಗಾಗಿ ನ್ಯಾಡ್ ಚಿತ್ರದ ಅನ್ನೇಟೆ, ಕಿಲ್ಲರ್ಸ್ ಆಫ್ ಫ್ಲವರ್ ಮೂನ್ ಚಿತ್ರದ ನಾಯಕಿ ಲಿಲಿ ಗ್ಲಾಡ್‌ಸ್ಟೋನ್, ಅನಾಟಮಿ ಆಫ್ ಎ ಫಾಲ್ ಚಿತ್ರದ ಸಾಂಡ್ರಾ ಹುಲ್ಲೇರ್, ಮೆಸ್ಟ್ರೋ ಚಿತ್ರದ ಕ್ಯಾರೇ ಮಲ್ಲೀಗನ್, ಪ್ಯೂರ್ ಥಿಂಗ್ಸ್ ಸಿನಿಮಾದ ಎಮ್ಮಾ ಸ್ಟೋನ್ ಅವರು ಪೈಪೋಟಿ ನಡೆಸುತ್ತಿದ್ದಾರೆ.
ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ, ಬೆಸ್ಟ್ ಕಾಸ್ಟೂಮ್ ಡಿಸೈನ್, ಬೆಸ್ಟ್ ಮೇಕ್ ಅಪ್ ಮತ್ತು ಹೇರ್ ಸ್ಟೈಲ್, ಬೆಸ್ಟ್ ಅಡಾಪ್ಟೆಡ್ ಸ್ಕ್ರೀನ್ ಪ್ಲೇ, ಅತ್ಯುತ್ತಮ ಸಂಗೀತ ಸೇರಿದಂತೆ ಅನೇಕ ವಿಭಾಗಗಳಲ್ಲಿ ಹಲವು ಸಿನಿಮಾಗಳು ಸ್ಪರ್ಧೆ ಮಾಡುತ್ತಿವೆ.
ಈ ಸುದ್ದಿಯನ್ನೂ ಓದಿ: Oscars 2024: ಆಸ್ಕರ್ ರೇಸ್‌ನಿಂದ ಹೊರ ಬಿದ್ದ ಮಲಯಾಳಂ ʻ2018ʼ ಸಿನಿಮಾ