ಮ್ಯಾಡ್ರಿಡ್: ಸ್ಪೇನ್‌ನ ಹೆಸರಾಂತ ವಸ್ತ್ರ ವಿನ್ಯಾಸಕ ಹಾಗೂ ಸುಗಂಧ ದ್ರವ್ಯ ಸಂಸ್ಥೆಯ ಮಾಲೀಕ ಪ್ಯಾಕೋ ರಬನ್ನೆ(88) (Paco Rabanne) ಶುಕ್ರವಾರದಂದು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಲೆಜೆಂಡರಿ ಸಿನಿಮಾಗಳು, ಮರೆಯಲಾಗದ ಹಾಡುಗಳು: ಕೆ. ವಿಶ್ವನಾಥ್ ಅಳಿದ ಮೇಲೂ ನಿತ್ಯ ನೆನಪು
ಪ್ಯಾಕೋ ರಬನ್ನೆ ಅವರು ವಸ್ತ್ರ ವಿನ್ಯಾಸ ಕ್ಷೇತ್ರದಲ್ಲಿ ತಮ್ಮ ವಿಭಿನ್ನ ದೃಷ್ಟಿಕೋನದಿಂದಲೇ ಪ್ರಸಿದ್ಧಿ ಪಡೆದವರು. 1960ರ ಕಾಲದಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದ ಇವರು, ಪೇಪರ್, ಲೋಹ ಹೀಗೆ ವಸ್ತ್ರ ವಿನ್ಯಾಸಕ್ಕೆ ಅಸಂಭವ ಎನ್ನುವಂತಹ ವಸ್ತುಗಳಿಂದಲೇ ವಸ್ತ್ರಗಳನ್ನು ತಯಾರಿಸಿದವರು.
1968ರಲ್ಲಿ ಪುಯಿಗ್ ಹೆಸರಿನ ಫ್ಯಾಷನ್ ಮತ್ತು ಸುಗಂಧ ದ್ರವ್ಯದ ಸಂಸ್ಥೆಯೊಂದಿಗೆ ಕೈ ಜೋಡಿಸಿಕೊಂಡು ಸುಗಂಧ ದ್ರವ್ಯ ತಯಾರಿಯಲ್ಲಿ ತೊಡಗಿಸಿಕೊಂಡರು. ತಮ್ಮದೇ ಹೆಸರಿನಲ್ಲಿ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿ ಜಗತ್ತಿಗೇ ಪರಿಚಯವಾದವರು.
ಅಮೆರಿಕದ ಪ್ರಸಿದ್ಧ ಗಾಯಕಿ ಲೇಡಿ ಗಾಗಾ ಅವರು 2011ರಲ್ಲಿ ಸಂಗೀತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆ ವೇಳೆ ಅವರು ಪ್ಯಾಕೊ ಅವರು ವಿನ್ಯಾಸಗೊಳಿಸಿದ್ದ ವಸ್ತ್ರವನ್ನೇ ಧರಿಸಿದ್ದರು. ವಿಶೇಷವೆಂದರೆ ಆ ವಸ್ತ್ರವನ್ನು ಸಂಪೂರ್ಣವಾಗಿ ಪೇಪರ್‌ನಿಂದಲೇ ತಯಾರಿಸಲಾಗಿತ್ತು.
ಪ್ಯಾಕೊ ಅವರ ನಿಧನದ ಬಗ್ಗೆ ಪುಯಿಗ್ ಸಂಸ್ಥೆಯು ತಮ್ಮ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. “ಪ್ಯಾಕೊ ತಮ್ಮ ವಿಶಿಷ್ಟವಾದ ದೃಷ್ಟಿಕೋನದಿಂದ ಫ್ಯಾಷನ್ ಲೋಕಕ್ಕೆ ತಲೆಮಾರುಗಳ ಕಾಲ ವಿಶೇಷ ಸೇವೆ ಸಲ್ಲಿಸಿದ್ದಾರೆ. ಅವರ ಪರಂಪರೆಯು ದೀರ್ಘಕಾಲ ಉಳಿಯಲಿದೆ” ಎಂದು ಪುಯಿಗ್ ಹೇಳಿದೆ.