Paco Rabanne: ಪ್ರಸಿದ್ಧ ವಸ್ತ್ರ ವಿನ್ಯಾಸಕ ಪ್ಯಾಕೋ ರಬನ್ನೆ ನಿಧನ - Vistara News

ವಿದೇಶ

Paco Rabanne: ಪ್ರಸಿದ್ಧ ವಸ್ತ್ರ ವಿನ್ಯಾಸಕ ಪ್ಯಾಕೋ ರಬನ್ನೆ ನಿಧನ

ಸ್ಪೇನ್‌ನ ಪ್ರಸಿದ್ಧ ವಸ್ತ್ರ ವಿನ್ಯಾಸಕ ಹಾಗೂ ಪ್ಯಾಕೊ ಸುಗಂಧ ದ್ರವ್ಯದ ಮಾಲೀಕ ಪ್ಯಾಕೋ ರಬನ್ನೆ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮ್ಯಾಡ್ರಿಡ್‌: ಸ್ಪೇನ್‌ನ ಹೆಸರಾಂತ ವಸ್ತ್ರ ವಿನ್ಯಾಸಕ ಹಾಗೂ ಸುಗಂಧ ದ್ರವ್ಯ ಸಂಸ್ಥೆಯ ಮಾಲೀಕ ಪ್ಯಾಕೋ ರಬನ್ನೆ(88) (Paco Rabanne) ಶುಕ್ರವಾರದಂದು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಲೆಜೆಂಡರಿ ಸಿನಿಮಾಗಳು, ಮರೆಯಲಾಗದ ಹಾಡುಗಳು: ಕೆ. ವಿಶ್ವನಾಥ್‌ ಅಳಿದ ಮೇಲೂ ನಿತ್ಯ ನೆನಪು
ಪ್ಯಾಕೋ ರಬನ್ನೆ ಅವರು ವಸ್ತ್ರ ವಿನ್ಯಾಸ ಕ್ಷೇತ್ರದಲ್ಲಿ ತಮ್ಮ ವಿಭಿನ್ನ ದೃಷ್ಟಿಕೋನದಿಂದಲೇ ಪ್ರಸಿದ್ಧಿ ಪಡೆದವರು. 1960ರ ಕಾಲದಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದ ಇವರು, ಪೇಪರ್‌, ಲೋಹ ಹೀಗೆ ವಸ್ತ್ರ ವಿನ್ಯಾಸಕ್ಕೆ ಅಸಂಭವ ಎನ್ನುವಂತಹ ವಸ್ತುಗಳಿಂದಲೇ ವಸ್ತ್ರಗಳನ್ನು ತಯಾರಿಸಿದವರು.

#image_title


1968ರಲ್ಲಿ ಪುಯಿಗ್‌ ಹೆಸರಿನ ಫ್ಯಾಷನ್‌ ಮತ್ತು ಸುಗಂಧ ದ್ರವ್ಯದ ಸಂಸ್ಥೆಯೊಂದಿಗೆ ಕೈ ಜೋಡಿಸಿಕೊಂಡು ಸುಗಂಧ ದ್ರವ್ಯ ತಯಾರಿಯಲ್ಲಿ ತೊಡಗಿಸಿಕೊಂಡರು. ತಮ್ಮದೇ ಹೆಸರಿನಲ್ಲಿ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿ ಜಗತ್ತಿಗೇ ಪರಿಚಯವಾದವರು.

ಇದನ್ನೂ ಓದಿ: Viral video : ಕಾರು ಡಿಕ್ಕಿಯಾದ ಬಳಿಕ ನಾಯಿ ದಿಢೀರ್‌ ಕಣ್ಮರೆ, 70 ಕಿ.ಮೀ. ಸಾಗಿದ ಬಳಿಕ ಒಮ್ಮೆಗೇ ಪ್ರತ್ಯಕ್ಷ: ಹಾಗಿದ್ರೆ ಎಲ್ಲೋಗಿತ್ತು?

ಅಮೆರಿಕದ ಪ್ರಸಿದ್ಧ ಗಾಯಕಿ ಲೇಡಿ ಗಾಗಾ ಅವರು 2011ರಲ್ಲಿ ಸಂಗೀತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆ ವೇಳೆ ಅವರು ಪ್ಯಾಕೊ ಅವರು ವಿನ್ಯಾಸಗೊಳಿಸಿದ್ದ ವಸ್ತ್ರವನ್ನೇ ಧರಿಸಿದ್ದರು. ವಿಶೇಷವೆಂದರೆ ಆ ವಸ್ತ್ರವನ್ನು ಸಂಪೂರ್ಣವಾಗಿ ಪೇಪರ್‌ನಿಂದಲೇ ತಯಾರಿಸಲಾಗಿತ್ತು.

#image_title


ಪ್ಯಾಕೊ ಅವರ ನಿಧನದ ಬಗ್ಗೆ ಪುಯಿಗ್‌ ಸಂಸ್ಥೆಯು ತಮ್ಮ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. “ಪ್ಯಾಕೊ ತಮ್ಮ ವಿಶಿಷ್ಟವಾದ ದೃಷ್ಟಿಕೋನದಿಂದ ಫ್ಯಾಷನ್‌ ಲೋಕಕ್ಕೆ ತಲೆಮಾರುಗಳ ಕಾಲ ವಿಶೇಷ ಸೇವೆ ಸಲ್ಲಿಸಿದ್ದಾರೆ. ಅವರ ಪರಂಪರೆಯು ದೀರ್ಘಕಾಲ ಉಳಿಯಲಿದೆ” ಎಂದು ಪುಯಿಗ್‌ ಹೇಳಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ಕಂಪನಿಯಲ್ಲಿ 1 ವರ್ಷ ವೇತನ ಸಹಿತ ರಜೆ ಪಡೆದ ಉದ್ಯೋಗಿ; ಈ ಲಕ್‌ ನಿಮ್ಮದಾಗಬೇಕೆ? ಹೀಗೆ ಮಾಡಿ

ಚೀನಾದ ವ್ಯಕ್ತಿಯೊಬ್ಬ 365 ದಿನಗಳ ಅಂದರೆ ವರ್ಷಪೂರ್ತಿ ರಜೆಯನ್ನು ಪಡೆಯುವ ಅವಕಾಶ ಪಡೆದುಕೊಂಡಿದ್ದಾನೆ. ಅದು ಸಂಬಳ ಸಮೇತ. ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿರುವ ಈ ವಿಡಿಯೋ ನೋಡಿ ಆತ ನಿಜವಾಗಲೂ ಅದೃಷ್ಟವಂತ ಎಂದು ಹಲವಾರು ಮಂದಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

VISTARANEWS.COM


on

By

Viral News
Koo

ಕಂಪನಿಯಲ್ಲಿ ಗರಿಷ್ಠ ಎಂದರೆ ಒಂದೆರಡು ತಿಂಗಳು ರಜೆ (leave) ತೆಗೆಯಬಹುದು. ಅದೂ ಅನಾರೋಗ್ಯದ ನಿಮಿತ್ತ ಮಾತ್ರ. ಆದರೆ ಇಲ್ಲೊಬ್ಬ ಕಂಪನಿಯಿಂದ 365 ದಿನಗಳ ಪಾವತಿ ರಜೆ (Paid Leaves) ಪಡೆದಿದ್ದಾನೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral News) ಆಗಿದ್ದು, ಸಾಕಷ್ಟು ಮಂದಿ ಇಂತಹ ರಜೆ ನಮಗೆ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯಕರ ಕೆಲಸ ಮತ್ತು ಜೀವನದ ಸಮತೋಲನ ಕಾಪಾಡಿಕೊಳ್ಳಲು ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಪಾವತಿ ರಜೆಗಳನ್ನು ಒದಗಿಸುತ್ತವೆ. ಇದು ಎಲ್ಲ ಕಂಪನಿಗಳಲ್ಲಿ ಒಂದೇ ರೀತಿ ಇರುವುದಿಲ್ಲ. ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಆದರೆ ಈ ರಜೆಯನ್ನು ಒಂದು ವರ್ಷದವರೆಗೆ ವಿಸ್ತರಿಸುವ ಅವಕಾಶ ಎಲ್ಲೂ ಇರುವುದಿಲ್ಲ.

ಆದರೆ ಇಲ್ಲೊಬ್ಬ ಮಾತ್ರ 365 ದಿನಗಳ ಅಂದರೆ ವರ್ಷಪೂರ್ತಿ ರಜೆಯನ್ನು ಪಡೆಯುವ ಅವಕಾಶ ಪಡೆದುಕೊಂಡಿದ್ದಾನೆ. ಅದು ಸಂಬಳ ಸಮೇತ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ ಆತ ನಿಜವಾಗಲೂ ಅದೃಷ್ಟವಂತ ಎಂದು ಹಲವಾರು ಮಂದಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಚೀನಾದ ಶೆನ್‌ಜೆನ್ ಪ್ರದೇಶದ ವ್ಯಕ್ತಿಯೊಬ್ಬ ಕಂಪನಿಯ ಪಾರ್ಟಿಯಲ್ಲಿ ಲಕ್ಕಿ ಡ್ರಾ ಗೆದ್ದ ಅನಂತರ 365 ದಿನಗಳ ವೇತನ ಸಹಿತ ರಜೆಯನ್ನು ಗಳಿಸಿದ್ದಾನೆ.

ಸಂಸ್ಥೆಯಲ್ಲಿ ನಡೆದ ಭಾನುವಾರದ ಭೋಜನಕೂಟದಲ್ಲಿ ಭಾಗವಹಿಸಿದ ಉದ್ಯೋಗಿ ಆ ರಾತ್ರಿ ದೊಡ್ಡ ಸೌಲಭ್ಯವನ್ನು ಪಡೆದನು. 365 ದಿನಗಳವರೆಗೆ ದೀರ್ಘ ರಜೆಯನ್ನು ನೀಡುವ ಚೆಕ್ ಅವರಿಗೆ ಸಿಕ್ಕಿತ್ತು. ಆ ಚೆಕ್‌ನಲ್ಲಿ “365 ದಿನಗಳ ಪಾವತಿಸಿದ ರಜೆ” ಎಂದು ಬರೆಯಲಾಗಿದೆ.

ಇದಕ್ಕೆ ಸಾಕಷ್ಟು ಮಂದಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ಘಟನೆ ಕಳೆದ ವರ್ಷದ್ದು. ಆದರೂ ಅದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತರ ಉದ್ಯೋಗಿಗಳು ಆತನ ಬಗ್ಗೆ ಖಂಡಿತ ಅಸೂಯೆ ಪಟ್ಟಿರುತ್ತಾರೆ ಎಂದು ಹೇಳಿದ್ದಾರೆ. ಇನ್ನು ಕೆಲವರು “ನಮಗೆ ಅದು ಬೇಕು” ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಕೆಲವರು ಇಷ್ಟೊಂದು ರಜೆಯೇ ಎಂದು ಈ ಗೆಲುವಿನ ಬಗ್ಗೆ ಭಯ ವ್ಯಕ್ತಪಡಿಸಿದ್ದು, ಇದು ಅಪಾಯಕಾರಿ ಎಂದು ಹೇಳಿದ್ದಾರೆ. ಇದರಿಂದ ಉದ್ಯೋಗಿಗಳ ಉದ್ಯೋಗ ಭವಿಷ್ಯಕ್ಕೆ ಅಪಾಯ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೊಬ್ಬರು ಕಾಮೆಂಟ್ ನಲ್ಲಿ 366 ನೇ ದಿನ: ಕ್ಷಮಿಸಿ, ಕಡಿಮೆ ಕಾರ್ಯಕ್ಷಮತೆ ಮತ್ತು ಅಸಮರ್ಥತೆಯ ಕಾರಣದಿಂದ ನಿಮ್ಮನ್ನು ವಜಾಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ತಂಡ ಗೆದ್ದ ಸಂತಸದಲ್ಲಿ ಬಣ್ಣದ ಚಿಟ್ಟೆಯಂತೆ ಹಾರಾಡಿ ಸಂಭ್ರಮಿಸಿದ ಹೈದರಾಬಾದ್​ ಮಾಲಕಿ ಕಾವ್ಯಾ ಮಾರನ್

365 ದಿನಗಳ ವೇತನ ಸಹಿತ ರಜೆಯ ಪ್ರಸ್ತಾಪವನ್ನು ಇದು ಹೊಂದಿರಲಿಲ್ಲ. ಇದು ಹೆಚ್ಚಿನದನ್ನು ಹೊಂದಿತ್ತು. ವರದಿಗಳ ಪ್ರಕಾರ ಕಂಪೆನಿಯ ವಿಜೇತ ಉದ್ಯೋಗಿಗೆ ಪಾವತಿಸಿದ ರಜೆ ಮತ್ತು ಇನ್ನೊಂದು ವಿಶಿಷ್ಟ ಕೊಡುಗೆಯ ಬಗ್ಗೆ ಚರ್ಚಿಸಲು ತೀರ್ಮಾನಿಸಿತ್ತು. ಆತ ದೀರ್ಘವಾದ ರಜೆಯನ್ನು ಆನಂದಿಸುತ್ತಾನೋ ಅಥವಾ ಕೆಲಸ ಮಾಡುವ ಮೂಲಕ ಹಣವನ್ನು ಎನ್‌ಕ್ಯಾಶ್ ಮಾಡಲು ಬಯಸುತ್ತಾನೋ ಎಂಬ ಲೆಕ್ಕಾಚಾರ ಇದರಲ್ಲಿತ್ತು ಎನ್ನಲಾಗಿದೆ.

Continue Reading

ವಿದೇಶ

Landslide: ಪಪುವಾ ನ್ಯೂಗಿನಿಯಾದಲ್ಲಿ ಯಮರೂಪಿ ಭೂಕುಸಿತಕ್ಕೆ 670 ಜನ ಬಲಿ; ಊರಿಗೂರೇ ಮಸಣ!

Landslide: ಶುಕ್ರವಾರದಿಂದಲೂ ಸಾಲು ಸಾಲು ಭೂಕುಸಿತ ಸಂಭವಿಸಿವೆ. ಶುಕ್ರವಾರವೇ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇದಾದ ಬಳಿಕ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಸಂಬಂಧಿಕರನ್ನು ಕಳೆದುಕೊಂಡವರ ದುಃಖವು ಮುಗಿಲುಮುಟ್ಟಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಮೃತರ ಸಂಬಂಧಿಕರು ಶವಗಳನ್ನು ಹೊರತೆಗೆಯಲು ಭೂಮಿ ಅಗೆಯುತ್ತಿದ್ದಾರೆ. ಇದರಿಂದಾಗಿ ಜನರನ್ನು ನಿಯಂತ್ರಿಸುವುದು ಕೂಡ ಸಿಬ್ಬಂದಿಗೆ ಕಷ್ಟವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Landslide
Koo

ಪೋರ್ಟ್‌ ಮೋರ್‌ಸ್ಬಿ: ಪಪುವಾ ನ್ಯೂಗಿನಿಯಾದಲ್ಲಿ (Papua New Guinea) ಕಂಡು ಕೇಳರಿಯದ ಭೂಕುಸಿತ (Landslide) ಸಂಭವಿಸಿದ್ದು, ಸಾವಿನ ಸಂಖ್ಯೆ 670ಕ್ಕೆ ಏರಿಕೆಯಾಗಿದೆ. ಸಾವಿರಾರು ಜನ ಗಾಯಗೊಂಡಿದ್ದು, ನೂರಾರು ಜನ ಭೂಮಿ ಅವಶೇಷಗಳ ಅಡಿಯಲ್ಲಿ ಹುದುಗಿಹೋಗಿವೆ. ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಸಾವಿನ ಸಂಖ್ಯೆ 670ಕ್ಕೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಪಪುವಾ ನ್ಯೂಗಿನಿಯಾದಲ್ಲಿ ಇತ್ತೀಚಿನ ದಶಕಗಳಲ್ಲಿ ಸಂಭವಿಸಿದ ಭೀಕರ ದುರಂತ ಇದಾಗಿದೆ ಎಂದು ಹೇಳಲಾಗುತ್ತಿದೆ.

ಎಂಗಾ ಪ್ರಾಂತ್ಯದ ಯಂಬಾಳಿ ಗ್ರಾಮದ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ಭಾರಿ ಪ್ರಮಾಣದ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. “ಸಾವಿನ ಸಂಖ್ಯೆ 670ಕ್ಕೆ ಏರಿಕೆಯಾಗಿದೆ. 150 ಮನೆಗಳು ಭೂಮಿಯಲ್ಲಿ ಹುದುಗಿಹೋಗಿವೆ. ಮಳೆಯ ನೀರು ಇನ್ನೂ ಹರಿಯುತ್ತಿರುವ ಕಾರಣ ಜನರ ರಕ್ಷಣೆಯು ಕಷ್ಟವಾಗುತ್ತಿದೆ. ಸಾವಿರಾರು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯು ಮಾಹಿತಿ ನೀಡಿದೆ.

ಶುಕ್ರವಾರದಿಂದಲೂ ಸಾಲು ಸಾಲು ಭೂಕುಸಿತ ಸಂಭವಿಸಿವೆ. ಶುಕ್ರವಾರವೇ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇದಾದ ಬಳಿಕ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಸಂಬಂಧಿಕರನ್ನು ಕಳೆದುಕೊಂಡವರ ದುಃಖವು ಮುಗಿಲುಮುಟ್ಟಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಮೃತರ ಸಂಬಂಧಿಕರು ಶವಗಳನ್ನು ಹೊರತೆಗೆಯಲು ಭೂಮಿ ಅಗೆಯುತ್ತಿದ್ದಾರೆ. ಇದರಿಂದಾಗಿ ಜನರನ್ನು ನಿಯಂತ್ರಿಸುವುದು ಕೂಡ ಸಿಬ್ಬಂದಿಗೆ ಕಷ್ಟವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅವಶೇಷಗಳ ಅಡಿಯಲ್ಲಿ ಯಾರಾದರೂ ಬದುಕಿದ್ದಾರೇನೋ ಎಂಬ ವಿಶ್ವಾಸದಿಂದ ಭೂಮಿಯನ್ನು ಅಗೆಯಲಾಗುತ್ತಿದೆ. ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಜನರು ಕೂಡ ಇದಕ್ಕೆ ಸಾಥ್‌ ನೀಡುತ್ತಿದ್ದಾರೆ. ಆದರೆ, ಗಾಯಾಳುಗಳ ಬದಲು ಶವಗಳನ್ನೇ ಹೊರ ತೆಗೆಯುವಂತಾಗಿದೆ. ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನಲ್ಲಿ 4 ಸಾವಿರ ಜನ ವಾಸವಿದ್ದರು. ದಿಢೀರನೆ ಭೂಕುಸಿತ ಉಂಟಾದ ಕಾರಣ ಇಡೀ ಗ್ರಾಮವೇ ನರಕಸದೃಶವಾಗಿದೆ ಎಂಬುದಾಗಿ ಮಾಧ್ಯಮಗಳ ವರದಿಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: LandSlide: ಫಿಲಿಪ್ಪೀನ್ಸ್‌ನ ಚಿನ್ನದ ಗಣಿಯಲ್ಲಿ ಭೂಕುಸಿತ, 54 ಮಂದಿ ಸಮಾಧಿ

Continue Reading

ವಿದೇಶ

Iran-Israel Conflict: “ಅಚ್ಚರಿಯ ದಾಳಿ ನಿರೀಕ್ಷಿಸಿ”- ಇಸ್ರೇಲ್‌ಗೆ ಇರಾನ್‌ನಿಂದ ವಾರ್ನಿಂಗ್‌

Iran-Israel Conflict: ಹಿಜ್ಬುಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಸನ್‌ ನಸ್ರಲ್ಲಾ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಭಾಷಣದಲ್ಲಿ ಇಸ್ರೇಲ್‌ಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. “ಪ್ಯಾಲೇಸ್ಟಿನಿಯನ್ ಹಮಾಸ್ ಗುಂಪು ಅಕ್ಟೋಬರ್ 7 ರಂದು ನಡೆಸಿದ ದಾಳಿಯ ನಂತರ ಇಸ್ರೇಲ್ ಗಾಜಾದಲ್ಲಿ ಮಿಲಿಟರಿ ಆಕ್ರಮಣವನ್ನು ನಡೆಸುತ್ತಿದ್ದು, ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸದ್ಯದಲ್ಲೇ ನಮ್ಮಿಂದ ಇಸ್ರೇಲ್‌ ಒಂದು ಅಚ್ಚರಿ ದಾಳಿಯನ್ನು ನಿರೀಕ್ಷಿಸಬಹುದು ಎಂದು ಎಚ್ಚರಿಸಿದ್ದಾರೆ.

VISTARANEWS.COM


on

Iran-Israel Conflict
Koo

ಇರಾನ್‌: ಇಸ್ರೇಲ್‌-ಗಾಜಾ(Israel-Gaza) ಪಟ್ಟಣದ ನಡುವಿನ ಸಂಘರ್ಷ ಎಂಟು ತಿಂಗಳು ಕಳೆದರೂ ಬೂದಿ ಮುಚ್ಚಿದ ಕೆಂಡದಂತಿದೆ. ಇದೀಗ ಇರಾನ್‌ ಬೆಂಬಲಿತ ಸಂಘಟನೆಯಾಗಿರುವ ಹಿಜ್ಬೊಲ್ಲಾ(Hezbollah), ಇಸ್ರೇಲ್‌ಗೆ ಬಿಗ್‌ ವಾರ್ನಿಂಗ್‌ ಒಂದನ್ನು ಕೊಟ್ಟಿದೆ. ತನ್ನ ಕಡೆಯಿಂದ ಇಸ್ರೇಲ್‌ ಒಂದು ಅಚ್ಚರಿಯ ದಾಳಿಯನ್ನು ನಿರೀಕ್ಷಿಸಬಹುದು ಎಂಬ ಎಚ್ಚರಿಕೆ ಸಂದೇಶವನ್ನು ಹಿಜ್ಬೊಲ್ಲಾ ರವಾನಿಸಿದೆ. ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ದುರಂತ ಸಾವಿನ ಬೆನ್ನಲ್ಲೇ ಈ ಸಂದೇಶ ಇರಾನ್‌ನಿಂದ ಇಸ್ರೇಲ್‌ಗೆ ರವಾನೆ ಆಗಿದ್ದು(Iran-Israel Conflict), ಮಹಾಯುದ್ಧದ ಮುನ್ಸೂಚನೆಯಂತೆ ಕಾಣುತ್ತಿದೆ.

ಹಿಜ್ಬುಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಸನ್‌ ನಸ್ರಲ್ಲಾ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಭಾಷಣದಲ್ಲಿ ಇಸ್ರೇಲ್‌ಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. “ಪ್ಯಾಲೇಸ್ಟಿನಿಯನ್ ಹಮಾಸ್ ಗುಂಪು ಅಕ್ಟೋಬರ್ 7 ರಂದು ನಡೆಸಿದ ದಾಳಿಯ ನಂತರ ಇಸ್ರೇಲ್ ಗಾಜಾದಲ್ಲಿ ಮಿಲಿಟರಿ ಆಕ್ರಮಣವನ್ನು ನಡೆಸುತ್ತಿದ್ದು, ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ನಮ್ಮ ಗುರಿ ಇನ್ನೂ ತಲುಪಿಲ್ಲ. ಅದನ್ನು ತಲುಪಲು ಇನ್ನೂ ಐದು ವರ್ಷಗಳು ಬೇಕಾಗಬಹುದು ಎಂದು ಸ್ವತಃ ಇಸ್ರೇಲ್‌ನ ಭದ್ರತಾ ಮಂಡಳಿ ಮುಖ್ಯಸ್ಥ ಹೇಳಿದ್ದಾರೆ. ಅದೂ ಅಲ್ಲದೇ ಇಸ್ರೇಲ್ ತನ್ನ ಮಿಲಿಟರಿ ಆಕ್ರಮಣವನ್ನು ತಕ್ಷಣವೇ ನಿಲ್ಲಿಸಲು ಅಂತರಾಷ್ಟ್ರೀಯ ನ್ಯಾಯಾಲಯದ (ICJ) ಆದೇಶ ಇದ್ದರೂ ರಫಾದ ಮೇಲೆ ಹಿಂಸಾತ್ಮಕ ದಾಳಿಗಳನ್ನು ನಡೆಸುತ್ತಿದೆ ಮತ್ತು ಅಂತರರಾಷ್ಟ್ರೀಯ ನಿರ್ಣಯಗಳನ್ನು ಗೌರವಿಸುತ್ತಿಲ್ಲ ಎಂದು ನಸ್ರಲ್ಲಾ ಆರೋಪಿಸಿದರು. ಹೀಗಾಗಿ ಸದ್ಯದಲ್ಲೇ ನಮ್ಮಿಂದ ಇಸ್ರೇಲ್‌ ಒಂದು ಅಚ್ಚರಿ ದಾಳಿಯನ್ನು ನಿರೀಕ್ಷಿಸಬಹುದು ಎಂದು ಎಚ್ಚರಿಸಿದ್ದಾರೆ.

ಅಫಘಾನಿಸ್ತಾನದಲ್ಲಿ ಉಗ್ರರ ಆಡಳಿತ, ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ, ಹಮಾಸ್‌ ಉಗ್ರರು ಹಾಗೂ ಇಸ್ರೇಲ್‌ ನಡುವಿನ ಸಮರವು ಜಾಗತಿಕ ಅಸ್ಥಿರತೆ ಉಂಟಾಗಿರುವ ಬೆನ್ನಲ್ಲೇ ಇಸ್ರೇಲ್‌ ಮೇಲೆ ಇರಾನ್‌ ದಾಳಿ ಮಾಡಿತ್ತು ಇಸ್ರೇಲ್‌ನ ಟೆಲ್‌ಅವಿವ್‌ ಮೇಲೆ ಇರಾನ್‌ 200ಕ್ಕೂ ಅಧಿಕ ಡ್ರೋನ್‌ ಹಾಗೂ ಕ್ಷಿಪಣಿಗಳ ಮೂಲಕ ದಾಳಿ (Israel Iran War) ಮಾಡಿತ್ತು. ಸುತ್ತಲೂ ಇಸ್ಲಾಮಿಕ್‌ ದೇಶಗಳನ್ನೇ ಒಳಗೊಂಡಿರುವ, ಶತ್ರುರಾಷ್ಟ್ರಗಳ ಭೀತಿ ಇದ್ದರೂ ಪ್ರತಿದಾಳಿ ಮೂಲಕ ಸೆಟೆದು ನಿಲ್ಲುವ ಇಸ್ರೇಲ್‌ ಇರಾನ್‌ ದಾಳಿಯಿಂದ ತತ್ತರಿಸಿತ್ತು.

ಇದನ್ನೂ ಓದಿ:Narendra Modi: 10 ವರ್ಷ ಬಲಿಷ್ಠ ಪ್ರತಿಪಕ್ಷ ಇರಲಿಲ್ಲ ಎಂಬುದೇ ನೋವು ತಂದಿದೆ; ಮೋದಿ ಬೇಸರ

ಇನ್ನು ಕಳೆದ ವಾರ ಹೆಲಿಕಾಪ್ಟರ್‌ ದುರಂತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ಅವರ ಜೊತೆಗಿದ್ದ ಎಂಟು ಮಂದಿ ದುರ್ಮರಣಕ್ಕೀಡಾಗಿದ್ದರು. ಅರಸ್‌ ನದಿಗೆ ಇರಾನ್‌ ಹಾಗೂ ಅಜರ್‌ಬೈಜಾನ್‌ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಮತ್ತು ಇತರ ಗಣ್ಯರು ಅಜರ್‌ಬೈಜಾನ್‌ಗೆ ತೆರಳಿದ್ದರು.
ದುರಂತ ಸಾವನ್ನಪ್ಪಿದ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವಿನ ಬೆನ್ನಲ್ಲೇ ಇದೊಂದು ಆಕಸ್ಮಿಕ ಘಟನೆ ಅಲ್ಲ ವಿಧ್ವಂಸಕ ಕೃತ್ಯ ಎಂಬ ಶಂಕೆ ವ್ಯಕ್ತವಾಗಿತ್ತು. ಪ್ರಪಂಚಾದ್ಯಂತ ಇರಾನ್‌ನ ಬದ್ಧ ವೈರಿ ರಾಷ್ಟ್ರವಾಗಿರುವ ಇಸ್ರೇಲ್‌(Israel)ನ ಕುಕೃತ್ಯ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಆದರೆ ಈ ಎಲ್ಲಾ ಅನುಮಾನಗಳಿಗೆ ಇಸ್ರೇಲ್‌ ತೆರೆ ಎಳೆಯುವ ಪ್ರಯತ್ನ ಮಾಡಿತ್ತು. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್‌ ಈ ದುರಂತಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ರೂಟರ್ಸ್‌ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್‌ ಅಧಿಕಾರಿಗಳು, ರೈಸಿ ಸಾವಿಗೂ ಇಸ್ರೇಲ್‌ಗೂ ಯಾವುದೇ ಸಂಬಂಧ ಇಲ್ಲ. ಹೆಲಿಕಾಪ್ಟರ್‌ ದುರಂತದಲ್ಲಿ ಇಸ್ರೇಲ್‌ ಕೈವಾಡ ಇದೆ ಎಂಬ ಆರೋಪ ನಿರಾಧಾರ. ಈ ದುರ್ಘಟನೆಗೂ ಇಸ್ರೇಲ್ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದೆ.

Continue Reading

ವಿದೇಶ

Mob Attacks: ಕುರಾನ್ ಅಪವಿತ್ರ ನೆಪ; ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ನರ ಮೇಲೆ ಮುಸ್ಲಿಮರ ದಾಳಿ

ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ನೂರಾರು ಜನರು ಧರ್ಮನಿಂದೆಯ ಆರೋಪದ ಮೇಲೆ ಕ್ರಿಶ್ಚಿಯನ್ ಸಮುದಾಯದ ಮೇಲೆ ದಾಳಿ (Mob Attacks) ನಡೆಸಿದರು.

VISTARANEWS.COM


on

By

Mob Attacks
Koo

ಪಾಕಿಸ್ತಾನ: ಕ್ರಿಶ್ಚಿಯನ್ (Christian) ವ್ಯಕ್ತಿಯೊಬ್ಬರು ಕುರಾನ್ (Quran) ಅನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನದ (Pakistan) ಸರಗೋಧದಲ್ಲಿ (Sargodha) ಅವರ ಶೂ ತಯಾರಿಸುವ ಕಾರ್ಖಾನೆಯನ್ನು ನೂರಾರು ಜನರು ಸುಟ್ಟು ಹಾಕಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಸ್ಲಾಂ (Islam) ಧರ್ಮವು ಪಾಕಿಸ್ತಾನದ ಅಧಿಕೃತ ಧರ್ಮವಾಗಿದ್ದರೂ ಇಲ್ಲಿ ಇತರ ಅಲ್ಪಸಂಖ್ಯಾತರೂ ಇದ್ದಾರೆ. ಪಾಕಿಸ್ತಾನದ ಪೂರ್ವ ಪಂಜಾಬ್ (eastern Punjab) ಪ್ರಾಂತ್ಯದಲ್ಲಿ ನೂರಾರು ಜನರು ಧರ್ಮನಿಂದೆಯ ಆರೋಪದ ಮೇಲೆ ಕ್ರಿಶ್ಚಿಯನ್ ಸಮುದಾಯದ ಮೇಲೆ ದಾಳಿ ನಡೆಸಿದರು.

ಸರಗೋಧ ನಗರದ ಮುಜಾಹಿದ್ ಕಾಲೋನಿ ಪ್ರದೇಶದಲ್ಲಿ ಈ ದಾಳಿ ನಡೆದಿದೆ.

ಕ್ರಿಶ್ಚಿಯನ್ ವ್ಯಕ್ತಿಯೊಬ್ಬ ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ ಅನ್ನು ಅಪವಿತ್ರಗೊಳಿಸಿದ್ದಾನೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಗಲಾಟೆಯಲ್ಲಿ ಕ್ರಿಶ್ಚಿಯನ್ ವ್ಯಕ್ತಿಯ ಸಣ್ಣ ಶೂ ತಯಾರಿಸುವ ಕಾರ್ಖಾನೆ ಸುಟ್ಟು ಭಸ್ಮವಾಗಿದೆ.

ಗಲಭೆಕೋರರು ಪೊಲೀಸರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ. ಹಿಂಸಾಚಾರದ ವೇಳೆ ಕನಿಷ್ಠ ಐವರನ್ನು ಅಧಿಕಾರಿಗಳು ರಕ್ಷಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಸರಗೋಧ ಪೊಲೀಸ್ ಮುಖ್ಯಸ್ಥ ಸಾರಿಕ್ ಖಾನ್ ತಿಳಿಸಿದ್ದಾರೆ.


ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಇಜಾಜ್ ಮಾಲ್ಹಿ ತಿಳಿಸಿದ್ದು, ಧರ್ಮನಿಂದೆಯ ಆರೋಪಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.

ಅಧಿಕಾರಿಗಳು ಗುಂಪನ್ನು ಚದುರಿಸಿದರು ಮತ್ತು ಉದ್ವಿಗ್ನತೆಯನ್ನು ಶಮನಗೊಳಿಸಲು ಧಾರ್ಮಿಕ ವಿದ್ವಾಂಸರಿಂದ ಸಹಾಯ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಪಾಕಿಸ್ತಾನದಲ್ಲಿ ಹಿಂಸಾಚಾರ

ಇಸ್ಲಾಂ ಪಾಕಿಸ್ತಾನದ ಅಧಿಕೃತ ಧರ್ಮವಾಗಿದೆ ಮತ್ತು ದಕ್ಷಿಣ ಏಷ್ಯಾದ ದೇಶದ ನಿವಾಸಿಗಳಲ್ಲಿ ಶೇ. 96ಕ್ಕಿಂತ ಹೆಚ್ಚು ಜನರು ಇದನ್ನು ಪ್ರತಿಪಾದಿಸುತ್ತಾರೆ. ಕ್ರಿಶ್ಚಿಯನ್ನರು ಪಾಕಿಸ್ತಾನದ ಎರಡನೇ ಅತಿ ದೊಡ್ಡ ಅಲ್ಪಸಂಖ್ಯಾತ ಗುಂಪಾಗಿದ್ದು, ಜನಸಂಖ್ಯೆಯ ಸುಮಾರು ಶೇ. 1.3 ರಷ್ಟಿದ್ದಾರೆ.

ಪಾಕಿಸ್ತಾನದ ಧರ್ಮನಿಂದೆಯ ಕಾನೂನಿನ ಅಡಿಯಲ್ಲಿ, ಇಸ್ಲಾಂ ಧರ್ಮವನ್ನು ಅವಮಾನಿಸಿದ ಯಾರಿಗಾದರೂ ಮರಣದಂಡನೆಯನ್ನು ನೀಡಬಹುದು. ಆದರೆ ಈವರೆಗೆ ಧರ್ಮನಿಂದನೆಗಾಗಿ ಯಾರನ್ನೂ ಗಲ್ಲಿಗೇರಿಸಲಾಗಿಲ್ಲ, ಆರೋಪಗಳು ಗಲಭೆಗಳು ಮತ್ತು ಗುಂಪು ಹಿಂಸಾಚಾರಕ್ಕೆ ಕಾರಣವಾಗಿವೆ.

ಇದನ್ನೂ ಓದಿ: ಹನಿ ಟ್ರ್ಯಾಪ್‌ ಮಾಡಿ ಕೋಲ್ಕತಾಗೆ ಕರೆಸಿಕೊಂಡು ಬಾಂಗ್ಲಾದೇಶ ಸಂಸದನ ಕೊಲೆ; ಚರ್ಮ ಸುಲಿದು, ದೇಹ ಪೀಸ್‌ ಪೀಸ್‌

ಕಳೆದ ವರ್ಷದ ಆಗಸ್ಟ್‌ನಲ್ಲಿ ಪಂಜಾಬ್ ಪ್ರಾಂತ್ಯದ ಜರನ್‌ವಾಲಾ ಪ್ರದೇಶದಲ್ಲಿ ಕ್ರೈಸ್ತರು ಕುರಾನ್‌ನ ಪುಟಗಳನ್ನು ಹರಿದು ಹಾಕುತ್ತಿದ್ದಾರೆ ಎಂದು ವದಂತಿ ಹಬ್ಬಿಸಿ ಮುಸ್ಲಿಂ ನಿವಾಸಿಗಳು ಚರ್ಚ್‌ಗಳ ಮೇಲೆ ದಾಳಿ ನಡೆಸಿದ್ದರು.

2009ರಲ್ಲಿ ಮಧ್ಯ ಪಂಜಾಬ್‌ನ ಗೊಜ್ರಾ ಜಿಲ್ಲೆಯಲ್ಲಿ ಆರು ಕ್ರಿಶ್ಚಿಯನ್ನರು ಕೊಲ್ಲಲ್ಪಟ್ಟರು ಮತ್ತು ಹಲವಾರು ಮನೆಗಳನ್ನು ಸುಟ್ಟುಹಾಕಲಾಯಿತು.

Continue Reading
Advertisement
Karnataka Rain
ಮಳೆ6 mins ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

MS Dhoni
ಕ್ರೀಡೆ11 mins ago

M S Dhoni: ಫ್ರಾನ್ಸ್ ಮೂಲದ ಕಾರು ಕಂಪನಿಯ ಬ್ರಾಂಡ್​ ಅಂಬಾಸಿಡರ್ ಆಗಿ ನೇಮಕಗೊಂಡ ಲೆಜೆಂಡ್​ ಧೋನಿ

Karnataka Council Election
ಕರ್ನಾಟಕ24 mins ago

ವಿಧಾನ ಪರಿಷತ್‌ ಚುನಾವಣೆ: ಖರ್ಗೆ, ಸಿದ್ದು, ಡಿಕೆಶಿ ಆಪ್ತರಿಗೆ ಸ್ಥಾನ ಕೊಡಿಸಲು 2+2+2+1=7 ಫಾರ್ಮುಲಾ; ಏನಿದು?

Krishna Water Dispute
ಕರ್ನಾಟಕ33 mins ago

Krishna Water Dispute: ಕೃಷ್ಣಾ ನೀರಿನ ವಿಚಾರ ಮತ್ತೆ ಮಹಾ ಕ್ಯಾತೆ; ರಾಜ್ಯಕ್ಕೆ ಹರಿದು ಬರ್ತಿದ್ದ ನೀರು ತಡೆ ಹಿಡಿದ ಮಹಾರಾಷ್ಟ್ರ!

Latest45 mins ago

Shilpa Shetty : 3.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​​ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ; ವಿಡಿಯೊ ನೋಡಿ

Actor Darshan fans against forest officials Construction of Arjuna tomb
ಸ್ಯಾಂಡಲ್ ವುಡ್46 mins ago

Actor Darshan: ಅರ್ಜುನನ ಸಮಾಧಿ ನಿರ್ಮಾಣ: ಅರಣ್ಯಾಧಿಕಾರಿಗಳ ವಿರುದ್ಧ ದರ್ಶನ್ ಅಭಿಮಾನಿಗಳಿಂದ ಆಕ್ರೋಶ!

Mango Nail Art
ಫ್ಯಾಷನ್47 mins ago

Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

Viral News
ವೈರಲ್ ನ್ಯೂಸ್49 mins ago

Viral News: ಕಂಪನಿಯಲ್ಲಿ 1 ವರ್ಷ ವೇತನ ಸಹಿತ ರಜೆ ಪಡೆದ ಉದ್ಯೋಗಿ; ಈ ಲಕ್‌ ನಿಮ್ಮದಾಗಬೇಕೆ? ಹೀಗೆ ಮಾಡಿ

Basavanagudi News
ಬೆಂಗಳೂರು1 hour ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Road Accident
ಕರ್ನಾಟಕ1 hour ago

Road Accident: ಕೆಎಸ್ಆರ್‌ಟಿಸಿ ಬಸ್-ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ6 mins ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 hour ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌