ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿ ಭಾನುವಾರ (ಜುಲೈ 30) ನಡೆದ ರಾಜಕೀಯ ಪಕ್ಷದ ಸಭೆಯಲ್ಲಿ (Political Meet) ಭೀಕರ ಆತ್ಮಹತ್ಯಾ ಬಾಂಬ್ ದಾಳಿ (Pakistan Blast) ನಡೆದಿದ್ದು, 44 ಜನ ಮೃತಪಟ್ಟಿದ್ದಾರೆ. ರಾಜಕೀಯ ನಾಯಕರು ಘೋಷಣೆ ಕೂಗಿದ ಬಳಿಕ ಪಾಲ್ಗೊಂಡ ಜನರು ಕೂಡ ಅಲ್ಲಾ ಹೋ ಅಕ್ಬರ್ ಎಂದು ಘೋಷಣೆ ಕೂಗುತ್ತಿದ್ದರು. ಇದೇ ವೇಳೆ ಭೀಕರವಾಗಿ ಬಾಂಬ್ ಸ್ಫೋಟ ಸಂಭವಿಸಿದ್ದು, ಸಿನಿಮೀಯ ರೀತಿಯ ಸ್ಫೋಟದ ವಿಡಿಯೊಗಳು ಲಭ್ಯವಾಗಿದೆ.
ಇಲ್ಲಿದೆ ಭೀಕರ ವಿಡಿಯೊ
ಈ ಭಯಂಕರ ದಾಳಿಯ ಹೊಣೆಯನ್ನು ಈವರೆಗೂ ಯಾವುದೇ ಗುಂಪು ವಹಿಸಿಕೊಂಡಿಲ್ಲ. ಆದರೆ, ಇತ್ತೀಚೆಗೆ ಜೆಯುಐ-ಎಫ್ ವಿರುದ್ದ ದಾಳಿ ನಡೆಸಿದ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರ ಸಂಘಟನೆಯ ಸ್ಥಳೀಯ ಗುಂಪು ಈ ಕೃತ್ಯವನ್ನು ಎಸಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಜೆಯುಐ-ಎಫ್ ಇಸ್ಲಾಮಿಕ್ ಗುಂಪಾಗಿದ್ದೂ, ವಿರೋಧಿ ಸರ್ಕಾರ ಹಾಗೂ ಸೇನೆಯನ್ನು ಬೆಂಬಲಿಸುತ್ತಿದೆ ಎಂದು ಜೆಹಾದಿ ಗುಂಪುಗಳು ಆರೋಪಿಸುತ್ತಿವೆ.
ಮತ್ತೊಂದು ವಿಡಿಯೊ
ಇದನ್ನೂ ಓದಿ: Suicide Blast: ರಾಜಕೀಯ ಪಕ್ಷದ ಸಮಾವೇಶದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ, 44 ಜನರು ಬಲಿ, 200 ಮಂದಿಗೆ ಗಾಯ
ಕೆಲವು ವರದಿಗಳ ಪ್ರಕಾರ ಬಜೌರ್‌ನ ಖಾರ್‌ನಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ (ಜೆಯುಐ-ಎಫ್) ಕಾರ್ಯಕರ್ತರ ಸಮಾವೇಶದಲ್ಲಿ ಸಂಜೆ 4 ಗಂಟೆಗೆ ಸ್ಫೋಟ ಸಂಭವಿಸಿದೆ. ಈ ಸಮಾವೇಶದಲ್ಲಿ ಪಕ್ಷದ ಸುಮಾರು 400ಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ಗಾಯಾಳುಗಳನ್ನು ಹೆಚ್ಚಿನ ವೈದ್ಯಕೀಯ ಆರೈಕೆಗಾಗಿ ಪ್ರಾಂತೀಯ ರಾಜಧಾನಿ ಪೇಶಾವರಕ್ಕೆ ವಿಮಾನದಲ್ಲಿ ಸಾಗಿಸಲಾಗುತ್ತಿದೆ ಎಂದು ಸರ್ಕಾರಿ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಳಿ ನಂತರದ ದೃಶ್ಯ
ಬಾಂಬ್ ದಾಳಿ ಸಂಭವಿಸುತ್ತಲೇ ಸಮಾವೇಶದ ಇಡೀ ಪ್ರದೇಶದ ತುಂಬ ರಕ್ತ ಚೆಲ್ಲಿತ್ತು. ಕೆಲವರ ದೇಹದ ಭಾಗಗಳು ತುಂಡಾಗಿ ಬಿದ್ದಿದ್ದವು. ಕೂಡಲೇ ಜನರನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ಸಾವಿನ ಸಂಖ್ಯೆ ಏರಿಕೆಯಾಯಿತು. ದಾಳಿಯ ತೀವ್ರತೆ ಅಷ್ಟರಮಟ್ಟಿಗೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.