Site icon Vistara News

Pakistan | ಸಾಲದ ಸುಳಿಯಲ್ಲಿ ಪಾಕಿಸ್ತಾನ, ಫ್ಯಾನ್- ಬಲ್ಬ್ ಉತ್ಪಾದನೆಯೂ ಸ್ಥಗಿತ!

ಇಸ್ಲಾಮಾಬಾದ್: ನೆರೆ ದೇಶ ಪಾಕಿಸ್ತಾನವು ವಿಪರೀತ ಸಾಲದ ಸುಳಿಗೆ ಸಿಲುಕಿದ್ದು, ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದೆ. ಪಾಕಿಸ್ತಾನ(Pakistan) ಸರ್ಕಾರವು ಎಲ್ಲ ರೀತಿಯಲ್ಲಿಯೂ ಹಣ ಉಳಿಸುವುದಕ್ಕೆ ಪ್ರಯತ್ನ ಮಾಡಲಾರಂಭಿಸಿದೆ. ಅದೇ ಹಿನ್ನೆಲೆ ವಿದ್ಯುತ್ ಉಳಿತಾಯ ಮಾಡಬೇಕೆಂದು ಮಾರುಕಟ್ಟೆಗಳು, ಮದುವೆ ಹಾಲ್‌ಗಳ ಸಮಯವನ್ನು ಕಡಿಮೆಗೊಳಿಸಲಾಗಿದೆ. ಫ್ಯಾನ್ ಹಾಗೂ ಬಲ್ಬ್‌ಗಳ ಉತ್ಪಾದನೆಯನ್ನೂ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಮಾರಕಾಸ್ತ್ರ ಹಿಡಿದು ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿದ್ದವನ ಹತ್ಯೆಗೈದ ಬಿಎಸ್​ಎಫ್​; ಈ ವರ್ಷದ ಮೊದಲ ಪ್ರಕರಣ

ಇನ್ನು ಮುಂದೆ ದೇಶದಲ್ಲಿ ಎಲ್ಲ ಮಾರುಕಟ್ಟೆಗಳು ರಾತ್ರಿ 8.30ಕ್ಕೆ ಮುಚ್ಚಬೇಕು ಹಾಗೆಯೇ ಮದುವೆ ಹಾಲ್‌ಗಳನ್ನು ಕೂಡ ರಾತ್ರಿ 10ರೊಳಗೆ ಮುಚ್ಚಬೇಕು ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜ್ ಆಸಿಫ್ ಆದೇಶಿಸಿದ್ದಾರೆ. ಈ ರೀತಿ ಮಾಡುವುದರಿಂದ ದೇಶಕ್ಕೆ 26 ಮಿಲಿಯನ್ ಡಾಲರ್ (215 ಕೋಟಿ ರೂ.) ಉಳಿತಾಯ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಹಾಗೆಯೇ ಫ್ಯಾನ್‌ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಕ್ಕೆ ಆದೇಶಿಸಲಾಗಿದೆ. ಹಲವು ಕಂಪನಿಗಳು ತಯಾರಿಸುತ್ತಿರುವ ಫ್ಯಾನ್‌ಗಳು 120-130 ವ್ಯಾಟ್ ವಿದ್ಯುತ್ ಬಳಸಿಕೊಳ್ಳುತ್ತಿವೆ. ಆದರೆ ಜಾಗತಿಕವಾಗಿ ಕೇವಲ 60-80 ವ್ಯಾಟ್ ಬಳಕೆ ಮಾಡಿಕೊಳ್ಳುವ ಫ್ಯಾನ್‌ಗಳು ಲಭ್ಯವಿವೆ. ಹಾಗಾಗಿ ಹೆಚ್ಚು ವಿದ್ಯುತ್ ಬಳಸುವ ಫ್ಯಾನ್‌ಗಳ ಉತ್ಪಾದನೆಯನ್ನೂ ಸ್ಥಗಿತಗೊಳಿಸಲು ಮುಂದಾಗಿದೆ. ಹಾಗೆಯೇ ಹೆಚ್ಚು ವಿದ್ಯುತ್ ಬಳಸಿಕೊಳ್ಳುವ ಬಲ್ಬ್‌ಗಳ (incandescent bulb) ಉತ್ಪಾದನೆಯನ್ನೂ ಸ್ಥಗಿತಗೊಳಿಸುವುದಾಗಿ ಆಸಿಫ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Taliban shames Pakistan | 71ರ ಯುದ್ಧದಲ್ಲಿ ಭಾರತಕ್ಕೆ ಶರಣಾದ ಚಿತ್ರ ತೋರಿಸಿ ಪಾಕಿಸ್ತಾನವನ್ನು ಅಣಕಿಸಿದ ತಾಲಿಬಾನ್‌!

ಎಲ್ಲ ಸರ್ಕಾರಿ ಕಚೇರಿಗಳಲ್ಲೂ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲಾಗುವುದು. ಈ ನಿಟ್ಟಿನಲ್ಲಿ ವರ್ಕ್ ಫ್ರಂ ಹೋಂ ಪಾಲಿಸಿಯನ್ನು ಇನ್ನು 10 ದಿನಗಳಲ್ಲಿ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ. ವರದಿಯೊಂದರ ಪ್ರಕಾರ ಪಾಕಿಸ್ತಾನವು ಸದ್ಯ 10.5 ಬಿಲಿಯನ್ ಡಾಲರ್‌ನಷ್ಟು ಸಾಲದ ಹೊರೆಯಲ್ಲಿದೆ ಎಂದು ಪಾಕಿಸ್ತಾನ ವಿದ್ಯುತ್ ಇಲಾಖೆ ಹೇಳಿದೆ. ಇದು ಕಳೆದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 6,700 ಕೋಟಿ ರೂ. (815 ಮಿಲಿಯನ್ ಡಾಲರ್) ಹೆಚ್ಚಾಗಿದೆ.

Exit mobile version