Site icon Vistara News

Pakistan Economic Crisis: ಪಾಕ್‌ ಆಸ್ಪತ್ರೆಗಳಲ್ಲಿ ಔಷಧ ಕೊರತೆ, ಆರ್ಥಿಕ ಬಿಕ್ಕಟ್ಟಿನ ಬೆನ್ನಲ್ಲೇ ಮತ್ತೊಂದು ಪೆಟ್ಟು

Pakistan Hospitals Running Out Of Insulin, Disprin, Other Medicines

ಪಾಕಿಸ್ತಾನ

ಇಸ್ಲಾಮಾಬಾದ್‌: ಅಸಮರ್ಥ ನಾಯಕತ್ವ, ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯ ಪೋಷಣೆ, ಆರ್ಥಿಕ ನೀತಿಗಳ ಕೊರತೆಯಿಂದಾಗಿ (Pakistan Economic Crisis) ಪಾಕಿಸ್ತಾನದ ಆರ್ಥಿಕತೆಯು ಹಳ್ಳ ಹಿಡಿದಿದೆ. ಅಗತ್ಯ ವಸ್ತುಗಳ ಬೆಲೆಯೇರಿಕೆ, ಅಗತ್ಯ ವಸ್ತುಗಳ ಪೂರೈಕೆಯಾಗದಂತಹ ಪರಿಸ್ಥಿತಿ, ಹೆಚ್ಚಿದ ಸಾಲದಿಂದಾಗಿ ಪಾಕಿಸ್ತಾನವು ಜಗತ್ತಿನ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಇದರ ಬೆನ್ನಲ್ಲೇ, ಪಾಕಿಸ್ತಾನದ ಆಸ್ಪತ್ರೆಗಳಲ್ಲಿ ಔಷಧಗಳಿಗೂ ಕೊರತೆಯುಂಟಾಗಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನದ ದೇಶೀಯ ಔಷಧ ಉತ್ಪಾದನೆಗೆ ಹೊಡೆತ ಬಿದ್ದಿದೆ. ಇದರಿಂದಾಗಿ ಔಷಧ ಉತ್ಪಾದನೆ ಕುಂಠಿತವಾಗಿದೆ. ಇದರಿಂದ ರೋಗಿಗಳಿಗೆ ಆಸ್ಪತ್ರೆಯಲ್ಲಿ ಔಷಧ ಸಿಗುತ್ತಿಲ್ಲ. ಹಾಗೆಯೇ, ಔಷಧ ಹಾಗೂ ವೈದ್ಯಕೀಯ ಸಲಕರಣೆಗಳ ಪೂರೈಕೆಯಾಗದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರೋಗಿಗಳು ಆಸ್ಪತ್ರೆಯಲ್ಲಿಯೇ ಮೃತಪಡುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಪಾಕಿಸ್ತಾನದ ಜನರಲ್ಲಿ ಆತಂಕ ಮನೆ ಮಾಡಿದೆ. ಆರ್ಥಿಕ ದಿವಾಳಿತನ ಜತೆಗೆ ವೈದ್ಯಕೀಯವಾಗಿಯೂ ಪಾಕಿಸ್ತಾನ ಅರಾಜಕತೆಯ ಹಂತ ತಲುಪಿದೆ.

ಇದನ್ನೂ ಓದಿ: Pakistan Economic Crisis: ಬೀದಿಗೆ ಬಂದ ಪಾಕ್‌, ಸೈನಿಕರಿಗೆ ಊಟಕ್ಕೂ ದಿಕ್ಕಿಲ್ಲ, ಸಚಿವರಿಗೆ ಓಡಾಡಲು ಕಾರಿಲ್ಲ

Exit mobile version