Site icon Vistara News

Viral Video | ಕುತ್ತಿಗೆವರೆಗೆ ನೀರು ಬಂದರೂ ಪ್ರವಾಹದ ವರದಿ ಮಾಡಿದ ಪತ್ರಕರ್ತ, ಇಲ್ಲಿದೆ ವಿಡಿಯೊ

Pakistan Floods

ಇಸ್ಲಾಮಾಬಾದ್:‌ ಪತ್ರಕರ್ತರು, ಅದರಲ್ಲೂ ವರದಿಗಾರರ ಪಾಡೇ ಹಾಗೆ. ಕೊಲೆ ನಡೆಯಲಿ, ಬಾಂಬ್‌ ದಾಳಿಯಾಗಲಿ, ಪ್ರವಾಹ ಉಂಟಾಗಲಿ, ಗಲಾಟೆ, ಗದ್ದಲ, ಗಲಭೆ… ಹೀಗೆ ಯಾವುದೇ ಅವಘಡ ಸಂಭವಿಸಿದರೂ ಎದೆಗುಂದದೆ, ಕೆಲವೊಮ್ಮೆ ಪ್ರಾಣಕ್ಕೂ ಹೆದರದೆ ವರದಿ ಮಾಡಬೇಕಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಪಾಕಿಸ್ತಾನದಲ್ಲಿ ವರದಿಗಾರರೊಬ್ಬರು ಕುತ್ತಿಗೆವರೆಗೆ ನೀರು ಬಂದರೂ, ಅದೇ ನೀರಿನಲ್ಲಿ ನಿಂತು ಪ್ರವಾಹದ ಭೀಕರತೆಯ ವರದಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವರದಿಯ ವಿಡಿಯೊ ವೈರಲ್‌ (Viral Video) ಆಗಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನವು ಕಳೆದ ಒಂದು ದಶಕದಲ್ಲಿಯೇ ಕಂಡು ಕೇಳರಿಯದ ಹವಾಮಾನ ವೈಪರೀತ್ಯ ಎದುರಿಸುತ್ತಿದೆ. ಕಳೆದ ಹಲವು ತಿಂಗಳಿಂದ ಉಂಟಾದ ಪ್ರವಾಹದಲ್ಲಿ ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಇದೇ ರೀತಿ ಪ್ರವಾಹ ಉಂಟಾದ ಸ್ಥಳಕ್ಕೆ ತೆರಳಿದ ಪತ್ರಕರ್ತರೊಬ್ಬರು, ನೀರಿನಲ್ಲಿಯೇ ನಿಂತು ಪ್ರವಾಹದ ಭೀಕರತೆಯನ್ನು ಜನರಿಗೆ ಮನದಟ್ಟು ಮಾಡಿದ್ದಾರೆ. ಹೀಗೆ ಪ್ರಾಣವನ್ನೂ ಲೆಕ್ಕಿಸದೆ ವರದಿ ಮಾಡಿದ್ದಕ್ಕೆ ಜನ ಶ್ಲಾಘಿಸಿದ್ದಾರೆ.

ಇದನ್ನೂ ಓದಿ | Pakistan Floods | ಮಳೆ, ಪ್ರವಾಹಕ್ಕೆ 343 ಮಕ್ಕಳು ಸೇರಿ 937 ಬಲಿ, ನೆರವಿಗೆ ಅಂಗಲಾಚಿದ ಪಾಕಿಸ್ತಾನ

Exit mobile version