ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ, ವಿಶ್ವಸಂಸ್ಥೆಯಿಂದ ಹಣ ಪಡೆದು, ಆ ಹಣವನ್ನು ಅಭಿವೃದ್ಧಿಗೆ ಬಳಸದೆ ಶಸ್ತ್ರಾಸ್ತ್ರ ಸಂಗ್ರಹ, ಉಗ್ರ ಸಂಘಟನೆಗಳ ಪೋಷಣೆಗೆ ಬಳಸುತ್ತಿದ್ದ ಪಾಕಿಸ್ತಾನವೀಗ ತಕ್ಕ ಬೆಲೆ ತೆರುತ್ತಿದೆ. ಇತ್ತೀಚೆಗೆ ಪಾಕಿಸ್ತಾನದ ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿಯಲ್ಲಿ ಬಾಂಬ್ ದಾಳಿ (Karachi Attack) ನಡೆಸಿದ ಉಗ್ರರು ತಾಲಿಬಾನಿಗಳಲ್ಲ, ಸ್ಥಳೀಯ ಉಗ್ರರು ಎಂದು ಪಾಕ್ ಪೊಲೀಸರೇ ತಿಳಿಸಿದ್ದಾರೆ. ಸ್ಥಳೀಯ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (Tehreek-e-Taliban Pakistan-TTP) ಉಗ್ರರೇ ದಾಳಿ ನಡೆಸಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ ೧೭ರಂದು ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿದ ಉಗ್ರರು ೮ ಕೆಜಿ ಸ್ಫೋಟಕ ಸ್ಫೋಟಿಸಿದ್ದರು. ಇದರಿಂದ ಮೂವರು ಭದ್ರತಾ ಸಿಬ್ಬಂದಿ ಸೇರಿ ಏಳು ಜನ ಮೃತಪಟ್ಟಿದ್ದರು. ೧೮ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದವು. ಇದಾದ ಬಳಿಕ ಪಾಕಿಸ್ತಾನದ ಪೊಲೀಸರು ತನಿಖೆ ನಡೆಸಿದ್ದು, ಇವರು ಟಿಟಿಪಿ ಉಗ್ರರೇ ಎಂದು ತಿಳಿದುಬಂದಿದೆ. ಇದಾದ ಬಳಿಕ ಟಿಟಿಪಿಯ ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ದಾಳಿ ನಡೆಸಿದ ಐವರು ಉಗ್ರರಲ್ಲಿ ಇಬ್ಬರು ರೌಡಿ ಶೀಟರ್‌ಗಳು ಎಂಬುದಾಗಿ ತಿಳಿದುಬಂದಿದೆ. ಜಲಾ ನೂರ್ ಹಾಗೂ ಕೈಫಾಯತುಲ್ಲಾ ಅವರು ದಾಳಿಯ ಪ್ರಮುಖ ರೂವಾರಿಗಳಾಗಿದ್ದು, ಇವರು ದಾಳಿಗೂ ಮುನ್ನ ಇಡೀ ಪೊಲೀಸ್ ಕಚೇರಿಯ ಮಾಹಿತಿ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Israeli Missile Strikes: ಸಿರಿಯಾ ವಸತಿ ಕಟ್ಟಡದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ; 15 ಮಂದಿ ಸಾವು