ಇಸ್ಲಾಮಾಬಾದ್ : ವಿಶ್ವ ಸಂಸ್ಥೆಯಲ್ಲಿ ಭಾರತದ ಪ್ರಭಾವ ಹೆಚ್ಚಾಗುತ್ತಿರುವ ಕಾರಣ ಕಾಶ್ಮೀರದ ವಿಚಾರದಲ್ಲಿ ನಮ್ಮ ಆಟ ನಡೆಯುತ್ತಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಹೇಳಿಕೊಂಡಿದ್ದಾರೆ. ಈ ಮೂಲಕ ಕಾಶ್ಮೀರದ ವಿಷಯವನ್ನೇ ಹಿಡಿದುಕೊಂಡು ಜಾಗತಿಕಮಟ್ಟದಲ್ಲಿ ರಂಪ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.
ವಿಶ್ವ ಸಂಸ್ಥೆಯಲ್ಲಿ ಕಾಶ್ಮೀರದ ವಿವಾದವನ್ನು ಮುಂದಿಡುವುದು ನಮ್ಮ ಅಜೆಂಡಾವಾಗಿದ್ದರೂ, ಭಾರತ ಹೆಚ್ಚು ಪ್ರಭಾವ ಹೊಂದಿರುವ ಕಾರಣ ನಮ್ಮ ತಂತ್ರ ನಡೆಯುತ್ತಿಲ್ಲ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಕಾಶ್ಮೀರ ವಿವಾದವನ್ನು ಪ್ಯಾಲೆಸ್ತಿನ್ ಸಮಸ್ಯೆಗೆ ಹೋಲಿಕೆ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗೆ ಬಿಲಾವಲ್ ಭುಟ್ಟೊ ಜರ್ದಾರಿ ಈ ರೀತಿ ಉತ್ತರಿಸಿದ್ದಾರೆ.
ವಿಯಾನ್ ಶೇರ್ ಮಾಡಿರುವ ವಿಡಿಯೊ ಇಲ್ಲಿದೆ
ವಿಶ್ವ ಸಂಸ್ಥೆಯಲ್ಲಿ ಪ್ರತಿ ಬಾರಿಯೂ ಕಾಶ್ಮೀರದ ವಿಚಾರವನ್ನು ಮುನ್ನೆಲೆಗೆ ತಂದಾಗ ನಮ್ಮ ನೆರೆಯ ದೇಶದ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತದೆ. ಅದು ವಿಶ್ವ ಸಂಸ್ಥೆಯಲ್ಲಿ ಚರ್ಚೆಯಾಗಬೇಕಾದ ವಿಚಾರವಲ್ಲ ಎಂಬುದಾಗಿ ವಾದ ಮಾಡುತ್ತಿದೆ. ನಮ್ಮ ವಾದಕ್ಕೆ ಇತರ ಸದಸ್ಯ ರಾಷ್ಟ್ರಗಳಿಂದ ಬೆಂಬಲವೂ ದೊರೆಯುತ್ತಿಲ್ಲ ಎಂಬುದಾಗಿ ಜರ್ದಾರಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : Vivek Agnihotri | ವಿವಾದದ ಬೆನ್ನಲ್ಲೇ ‘ದಿ ಕಾಶ್ಮೀರ್ ಫೈಲ್ಸ್’ ಪಾರ್ಟ್ 2 ಘೋಷಿಸಿದ ವಿವೇಕ್ ಅಗ್ನಿಹೋತ್ರಿ
ಇದೇ ವೇಳೆ ಅವರು ಹೇಗಾದರೂ ಮಾಡಿದ ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚೆ ನಡೆಸಲು ಯತ್ನಿಸಲಾಗುವುದು ಎಂದು ಭುಟ್ಟೊ ಹೇಳಿದ್ದಾರೆ.