Site icon Vistara News

Pakistan News : ಪಾಕಿಸ್ತಾನದಲ್ಲಿ ಉಗ್ರರ ಗುಂಪಿನ ಮುಖ್ಯಸ್ಥ ಮಸೂದ್ ಉಸ್ಮಾನಿ ಗುಂಡಿಕ್ಕಿ ಹತ್ಯೆ

usmani masood

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ನಿಷೇಧಿತಗೊಂಡಿರುವ ಸಿಪಾಹ್-ಎ-ಸಹಾಬಾ ಉಗ್ರಗಾಮಿ ಗುಂಪಿನ ಮುಖ್ಯಸ್ಥರಾಗಿದ್ದ ಮೌಲ್ವಿಯನ್ನು ರಾಜಧಾನಿ ಇಸ್ಲಾಮಾಬಾದ್​​ನ ಹೊರವಲಯದಲ್ಲಿ ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ (Pakistan News) ಎಂದು ಪೊಲೀಸರು ತಿಳಿಸಿದ್ದಾರೆ. ಘೌರಿ ಪಟ್ಟಣದ ಬಳಿ ಅಪರಿಚಿತ ಬಂದೂಕುಧಾರಿಗಳು ಮಸೂದ್ ರೆಹಮಾನ್ ಉಸ್ಮಾನಿ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಘಟನೆಯಲ್ಲಿ ಅವರ ಚಾಲಕ ಗಾಯಗೊಂಡಿದ್ದಾರೆ ಎಂದು ಇಸ್ಲಾಮಾಬಾದ್ ಪೊಲೀಸರು ತಿಳಿಸಿದ್ದಾರೆ.

ದಾಳಿಯ ಜವಾಬ್ದಾರಿಯನ್ನು ಯಾರೂ ವಹಿಸಿಕೊಂಡಿಲ್ಲ. ಆದರೆ ದಾಳಿಕೋರರನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಸ್ಲಾಮಾಬಾದ್​ನಲ್ಲಿ ಅಧಿಕಾರಿಗಳು ಹೆಚ್ಚುವರಿ ಪೊಲೀಸರನ್ನು ನಿಯೋಜಿಸುವ ಮೂಲಕ ಭದ್ರತೆ ಹೆಚ್ಚಿಸಿದ್ದಾರೆ. ಮಸೂದ್ ರೆಹಮಾನ್ ಉಸ್ಮಾನಿ ಅವರ ಅಂತ್ಯಕ್ರಿಯೆ ನಡೆದ ಪ್ರದೇಶಕ್ಕೆ ಭೇಟಿ ನೀಡದಂತೆ ಕೆಲವು ರಾಯಭಾರ ಕಚೇರಿಗಳು ತಮ್ಮ ಪ್ರಜೆಗಳಿಗೆ ಸಲಹೆ ನೀಡಿವೆ.

ಮಸೂದ್ ರೆಹಮಾನ್ ಉಸ್ಮಾನಿ ಯಾರು?

ಮಸೂದ್ ರೆಹಮಾನ್ ಉಸ್ಮಾನಿ ಅವರು ತಮ್ಮ ಸುನ್ನಿ ಉಲೇಮಾ ಕೌನ್ಸಿಲ್​​ನಲ್ಲಿ ಉಪ ಕಾರ್ಯದರ್ಶಿಯಾಗಿದ್ದರು. ಈ ಕೌನ್ಸಿಲ್​ ಸಿಪಾಹ್-ಎ-ಸಹಾಬಾ ಉಗ್ರಗಾಮಿ ಗುಂಪನ್ನು ನಿಷೇಧಿಸಿದ ನಂತರ ಬೆಳೆದಿತ್ತು. ಮಸೂದ್ ರೆಹಮಾನ್ ಉಸ್ಮಾನಿ ಹತ್ಯೆಯ ಹಿಂದೆ ಯಾರು ಇದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ ಶಿಯಾಗಳು ಪಾಲ್ಗೊಂಡಿದ್ದಾರೆ. ಅವರು ನೆರೆಯ ಇರಾನ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ : Assault Case : ಜಸ್ಟ್‌ ಮುಟ್ಟಿದ್ದಕ್ಕೆ ವಿದ್ಯಾರ್ಥಿನಿಯ ಕಪಾಳಕ್ಕೆ ಭಾರಿಸಿದ ಕಂಡಕ್ಟರ್‌!

ಘಟನೆ ನಡೆದ ಸ್ಥಳದಲ್ಲಿ ಭಾರಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ ಎಂದು ಇಸ್ಲಾಮಾಬಾದ್ ಪೊಲೀಸರು ತಿಳಿಸಿದ್ದಾರೆ, “ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಶಂಕಿತರನ್ನು ಪತ್ತೆಹಚ್ಚಲಾಗುತ್ತಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಿ ನ್ಯಾಯದ ಮುಂದೆ ತರಲಾಗುವುದು” ಎಂದು ಹೇಳಿದ್ದಾರೆ.

Exit mobile version