Site icon Vistara News

Pakistani Labours: ಭಿಕ್ಷಾಟನೆ, ಅಪರಾಧ ಕೃತ್ಯ; ಪಾಕಿಸ್ತಾನಿಯರನ್ನು ಒದ್ದು ಓಡಿಸುತ್ತಿರುವ ಗಲ್ಫ್‌ ರಾಷ್ಟ್ರಗಳು!

Pakistani Labours

ಆರ್ಥಿಕ ಸಂಕಷ್ಟಕ್ಕೆ (bankrupt) ಸಿಲುಕಿ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ (pakistan) ಜಾಗತಿಕ ಮಟ್ಟದಲ್ಲಿ ಮತ್ತೊಂದು ಹೊಡೆತ ಬಿದ್ದಿದೆ. ವಿಶ್ವ ಮಟ್ಟದಲ್ಲೇ ಬಹುದೊಡ್ಡ ಅವಮಾನ ಎದುರಾಗಿದೆ. ಹಲವಾರು ಗಲ್ಫ್ ರಾಷ್ಟ್ರಗಳು (Gulf countries) ಪಾಕಿಸ್ತಾನಿ ವಲಸಿಗರು ಮತ್ತು ಪಾಕಿಸ್ತಾನಿ ಕಾರ್ಮಿಕ ಬಲದ (Pakistani Labours) ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಹೊರದೇಶಗಳಲ್ಲಿ ದುಡಿಯುವ ಅನೇಕ ಪಾಕಿಸ್ತಾನಿ ನಾಗರಿಕರು (Pakistani citizens) ಇದರಿಂದ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು.

ಸಾಗರೋತ್ತರ ಪಾಕಿಸ್ತಾನಿಗಳ ಕುರಿತ ಸೆನೆಟ್ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಪಾಕಿಸ್ತಾನದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಈ ವಿಷಯ ಬಹಿರಂಗವಾಗಿದೆ ಎಂದು ಸಾಗರೋತ್ತರ ಪಾಕಿಸ್ತಾನಿಗಳ ಕಾರ್ಯದರ್ಶಿ ಡಾ. ಅರ್ಷದ್ ಹೇಳಿದರು.

ಸೌದಿ ಅರೇಬಿಯಾ, ಕತಾರ್, ಕುವೈತ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿದೇಶದಲ್ಲಿ ವಾಸಿಸುವ ಪಾಕಿಸ್ತಾನಿಗಳಿಗೆ ಸಂಬಂಧಿಸಿ ಅನೇಕ ವಿಷಯಗಳ ಬಗ್ಗೆ ಆಕ್ಷೇಪ ಎತ್ತಲಾಗಿದೆ. ಪಾಕಿಸ್ತಾನದಿಂದ ಭಿಕ್ಷುಕರು ಇರಾಕ್ ಮತ್ತು ಸೌದಿ ಅರೇಬಿಯಾಗೆ ತೀರ್ಥಯಾತ್ರೆಯ ನೆಪದಲ್ಲಿ ಹೋಗುತ್ತಾರೆ. ಬಳಿಕ ಅಲ್ಲಿ ಮಾಡಬಾರದ ಕೆಲಸ ಮಾಡಲು ತೊಡಗುತ್ತಾರೆ. ಉಮ್ರಾ ಪರವಾನಗಿ ಹೊಂದಿರುವ ಹೆಚ್ಚಿನ ಪ್ರವಾಸಿಗರು ಸೌದಿ ಅರೇಬಿಯಾವನ್ನು ಪ್ರವೇಶಿಸುತ್ತಾರೆ. ಅನಂತರ ಭಿಕ್ಷಾಟನೆಯಲ್ಲಿ ತೊಡಗುತ್ತಾರೆ. ಬಂಧಿಸಲ್ಪಟ್ಟ ಭಿಕ್ಷುಕರಲ್ಲಿ ಶೇ. 90ರಷ್ಟು ಮಂದಿ ಪಾಕಿಸ್ತಾನಿಗಳಾಗಿದ್ದಾರೆ.

ಗಲ್ಫ್ ರಾಷ್ಟ್ರಗಳ ಇತ್ತೀಚಿನ ಹೇಳಿಕೆಯು ಪಾಕಿಸ್ತಾನಿಯರಿಗೆ ಹೆಚ್ಚು ಸಮಸ್ಯೆಯನ್ನು ತಂದೊಡ್ಡಬಲ್ಲದು. ಯಾಕೆಂದರೆ ಇದು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ವಾಸಿಸುವ ಪಾಕಿಸ್ತಾನಿಯರ ಸಾಕಷ್ಟು “ಅನುಚಿತ” ನಡವಳಿಕೆಯನ್ನು ಬಹಿರಂಗಪಡಿಸಿದೆ. ದುಬೈನಲ್ಲಿ ವಾರ್ಷಿಕ ಒಟ್ಟು 6 ರಿಂದ 8 ಲಕ್ಷ ಜನರಲ್ಲಿ 2- 3 ಲಕ್ಷ ಪಾಕಿಸ್ತಾನಿಗಳು ತಮ್ಮ ವಿದೇಶ ಪ್ರವಾಸವನ್ನು ಮುಗಿಸಿ ಹಿಂದಿರುಗುತ್ತಾರೆ. ಉಳಿದವರು ಅಲ್ಲಿ ಇಲ್ಲಿ ಅಡಗಿಕೊಂಡು ಅಕ್ರಮದಲ್ಲಿ ತೊಡಗುತ್ತಾರೆ.


ಪಾಕಿಸ್ತಾನಿಯರಿಂದ ಶೇ. 50ರಷ್ಟು ಅಪರಾಧ

ಪಾಕಿಸ್ತಾನಿಗಳು ಮಲೇಷ್ಯಾದಲ್ಲಿ ಒಂದು ವರ್ಷ ಕಳೆಯುತ್ತಾರೆ. ಅನಂತರ ತಮ್ಮ ವಾಸ್ತವ್ಯವನ್ನು ವಿಸ್ತರಿಸಿದ್ದಕ್ಕಾಗಿ ಬಂಧಿಸಲ್ಪಡುತ್ತಾರೆ. ಇರಾಕ್‌ನಲ್ಲಿಯೂ ಇವರ ನಿಖರವಾದ ಸಂಖ್ಯೆ ಎಷ್ಟಿದೆ ಎಂಬುದು ತಿಳಿದಿಲ್ಲ.

ಸೆನೆಟರ್ ನಾಸಿರ್ ಅಬ್ಬಾಸ್ ಮಾತನಾಡಿ, ಪಾಕಿಸ್ತಾನಿಗಳಿಗಿಂತ ಬಾಂಗ್ಲಾದೇಶೀಯರು ಹೆಚ್ಚಿನ ಉದ್ಯೋಗ ಪಡೆಯುತ್ತಿದ್ದಾರೆ. ಇರಾಕ್‌ನಲ್ಲಿ ಪಾಕಿಸ್ತಾನಿಗಳನ್ನು “ಅಸಹಾಯಕರು” ಎಂದು ಕರೆದ ಅವರು, ಅಗ್ಗದ ಕಾರ್ಮಿಕರಾಗಿ ಅವರನ್ನು ಬಳಸಲಾಗುತ್ತಿದೆ. ಇರಾಕ್‌ನಲ್ಲಿ ಅವರನ್ನು “ಕೈದಿಗಳು” ಎಂದು ಪರಿಗಣಿಸಲಾಗಿದೆ ಎಂದು ತಿಳಿಸಿದರು. ಇರಾಕ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳಿಗೆ ಕಾರ್ಮಿಕರ ಅಗತ್ಯವಿದೆ. ಇರಾಕ್‌ನಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿಯರಿಗೆ ಹಲವಾರು ಸಮಸ್ಯೆಗಳಿವೆ ಎಂದು ಹೇಳಿದರು.

ಸೌದಿ ಅರೇಬಿಯಾದಲ್ಲಿ 2 ಲಕ್ಷ ಜನರು ವಾಸಿಸುತ್ತಿದ್ದು, ವಾರ್ಷಿಕವಾಗಿ 4 ಲಕ್ಷ ಪಾಕಿಸ್ತಾನಿಗಳು ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಭಿಕ್ಷುಕರು ಮತ್ತು ರೋಗಿಗಳನ್ನು ಕಳುಹಿಸದಂತೆ ಪಾಕಿಸ್ತಾನಕ್ಕೆ ಸೂಚನೆ ನೀಡಲಾಗಿದೆ. ಯುಎಇಯಲ್ಲಿ ನಡೆಯುವ ಎಲ್ಲಾ ಅಪರಾಧಗಳಲ್ಲಿ ಶೇ. 50ರಷ್ಟನ್ನು ಪಾಕಿಸ್ತಾನಿಗಳು ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.


ಪಾಕಿಸ್ತಾನಿ ಉದ್ಯೋಗಿಗಳ ಭವಿಷ್ಯ ಏನು?

ಗಲ್ಫ್ ಸರ್ಕಾರಗಳು ಈಗ ಆಫ್ರಿಕನ್ ಕಾರ್ಮಿಕರ ಕಡೆಗೆ ತಿರುಗುತ್ತಿವೆ. ಯುಎಇಯಲ್ಲಿ ಉದ್ಯೋಗವನ್ನು ಹುಡುಕುವ ನಿರೀಕ್ಷೆಯಲ್ಲಿರುವ ಪಾಕಿಸ್ತಾನಿ ಕಾರ್ಮಿಕರ ಭವಿಷ್ಯದ ಬಗ್ಗೆ ಸಚಿವಾಲಯವು ಆತಂಕ ವ್ಯಕ್ತಪಡಿಸಿದೆ. ಯಾಕೆಂದರೆ ಅವರಿಗೆ ಕೆಲಸ ಕೊಡಲು ಗಲ್ಫ್‌ ರಾಷ್ಟ್ರಗಳು ಹಿಂದೆಮುಂದೆ ನೋಡುತ್ತಿವೆ. ಮತ್ತೊಂದೆಡೆ, ಕೆಎಸ್‌ಎ ಆಯಾ ಪ್ರಾಧಿಕಾರವಾದ ರಾಷ್ಟ್ರೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ (ತಕಾಮುಲ್) ನಿರ್ವಹಿಸುವ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ವ್ಯಕ್ತಿಗಳನ್ನು ಮಾತ್ರ ನೇಮಿಸಿಕೊಳ್ಳುವುದಾಗಿ ಹೇಳಿದೆ.

ಇದನ್ನೂ ಓದಿ: Ismail Haniyeh: ಇಸ್ರೇಲ್‌ ದಾಳಿಗೆ ಹತನಾಗುವ ಮುನ್ನ ಹಮಾಸ್‌ ಉಗ್ರ ಇಸ್ಮಾಯಿಲ್‌ ಏನು ಮಾಡುತ್ತಿದ್ದ? ಇಲ್ಲಿದೆ ವರದಿ

Exit mobile version