Site icon Vistara News

Jon Peters Will: ಕೇವಲ 12 ದಿವಸದ ದಾಂಪತ್ಯ, ಪರಿತ್ಯಕ್ತ ಗಂಡನಿಂದ ನಟಿ ಪಮೇಲಾಗೆ ಸಿಕ್ಕಿತು 82 ಕೋಟಿ ರೂ. ಪರಿಹಾರ!

Jon Peters Will

#image_title

ವಾಷಿಂಗ್ಟನ್‌: ಬಹುತೇಕ ಸೆಲೆಬ್ರಿಟಿಗಳ ದಾಂಪತ್ಯ ಜೀವನ ಅಪಥ್ಯವಾಗಿರುತ್ತದೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ಅವರು ಬೇರೆ ಬೇರೆಯಾಗುತ್ತಾರೆ. ಅದರಲ್ಲೂ, ಹಾಲಿವುಡ್‌ನಲ್ಲಂತೂ ಇದು ಸಾಮಾನ್ಯ ಎಂಬಂತಾಗಿದ್ದು, ಕೆಲವೇ ವರ್ಷ, ತಿಂಗಳು ಬಿಡಿ, ಕೆಲವೇ ದಿನಗಳಲ್ಲಿ ದಾಂಪತ್ಯ ಅಂತ್ಯವಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ನಟಿ ಪಮೇಲಾ ಆ್ಯಂಡರ್ಸನ್‌ (55) ಹಾಗೂ ಖ್ಯಾತ ನಿರ್ಮಾಪಕ ಜಾನ್‌ ಪೀಟರ್ಸ್‌ (77) ಅವರ ದಾಂಪತ್ಯ ಜೀವನವು 2020ರಲ್ಲಿ ಕೇವಲ 12 ದಿನಗಳಿಗೆ ಅಂತ್ಯವಾಗಿತ್ತು. ಈಗ ಈ 12 ದಿನದ ದಾಂಪತ್ಯಕ್ಕಾಗಿ ಜಾನ್‌ ಪೀಟರ್ಸ್‌ (Jon Peters Will) ಅವರು ತಮ್ಮ ಮಾಜಿ ಪತ್ನಿಗೆ ಸುಮಾರು 82 ಕೋಟಿ ರೂ. (10 ದಶಲಕ್ಷ ಡಾಲರ್)‌ ಪರಿಹಾರ ನೀಡಿದ್ದಾರೆ.

2020ರಲ್ಲಿ ಇಬ್ಬರೂ ಮದುವೆಯಾಗಿದ್ದರು. ಇದಾದ ಕೇವಲ 12 ದಿನಕ್ಕೆ ಬೇರೆ ಬೇರೆಯಾಗಿದ್ದರು. ಈಗ ಜಾನ್‌ ಪೀಟರ್ಸ್‌ ಅವರು ವಿಲ್‌ (ಉಯಿಲು) ಬರೆದಿದ್ದು, ಮಾಜಿ ಪತ್ನಿಗಾಗಿ 82 ಕೋಟಿ ರೂ. ಪರಿಹಾರ ನೀಡಿದ್ದಾರೆ. ಹಾಗೆಯೇ, “ನಾನು ಯಾವಾಗಲೂ ಪಮೇಲಾಳನ್ನು ಪ್ರೀತಿಸುತ್ತೇನೆ. ನನ್ನ ಹೃದಯದಲ್ಲಿ ಎಂದಿಗೂ ಅವಳಿಗಾಗಿ ಜಾಗ ಮೀಸಲಿದೆ” ಎಂದು ಬರೆಯುವ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Johnny Depp Vs Amber Heard: ಹೆಂಡತಿ ಬರೆದ ಲೇಖನದಿಂದ ಅಪಮಾನ, ಜಾನಿಡೆಪ್‌ಗೆ ₹116 ಕೋಟಿ ಪರಿಹಾರ ಧನ

ಜತೆಗಿದ್ದಿದ್ದು ಕೇವಲ 5 ದಿನ

ಮದುವೆಯಾಗಿ 12 ದಿನಕ್ಕೆ ಬೇರೆಯಾದರೂ, ಇಷ್ಟು ದಿನದಲ್ಲಿ ಪಮೇಲಾ ಹಾಗೂ ಜಾನ್‌ ಜತೆಗೆ ಕಾಲ ಕಳೆದಿದ್ದು ಕೇವಲ 5 ದಿನ ಎಂದು ಪಮೇಲಾ ಅವರೇ ವಿಚ್ಛೇದನ ಬಳಿಕ ಮಾಹಿತಿ ನೀಡಿದ್ದರು. “12 ದಿನದಲ್ಲಿ ನಾವಿಬ್ಬರು 5 ದಿನ ಮಾತ್ರ ಜತೆಗಿದ್ದೆವು. ಟೆಕ್ಸ್ಟ್‌ ಮೆಸೇಜ್‌ ಮೂಲಕ ಜಾನ್‌ ಪೀಟರ್ಸ್‌ ವಿಚ್ಛೇದನದ ಮಾಹಿತಿ ನೀಡಿದ್ದರು” ಎಂದು ಪಮೇಲಾ ಹೇಳಿದ್ದರು. “ನನಗೆ ಅಂತಾರಾಷ್ಟ್ರೀಯ ಖ್ಯಾತಿಯೊಂದರ ಸಂಬಂಧಕ್ಕಿಂತ ಸಾಮಾನ್ಯ ಜೀವನ ಮುಖ್ಯ. ಮದುವೆ ನನಗೆ ಆಗದ ಸಂಬಂಧ ಎಂಬುದು 74ನೇ ವಯಸ್ಸಿನಲ್ಲಿ ಗೊತ್ತಾಗಿದೆ” ಎಂಬುದಾಗಿ ಜಾನ್‌ ಪೀಟರ್ಸ್‌ ಸಂದೇಶ ರವಾನಿಸಿದ್ದರು ಎಂದು ಪಮೇಲಾ ಹೇಳಿದ್ದರು.

Exit mobile version