Site icon Vistara News

Imran Khan | ಮಾಧ್ಯಮಗಳಲ್ಲಿ ಇಮ್ರಾನ್‌ ಖಾನ್‌ ಭಾಷಣ ಪ್ರಸಾರ ಮಾಡುವಂತಿಲ್ಲ, ಗುರಾಣಿ ಬಳಸಿತೇ ಸರ್ಕಾರ?

Imran Khan

ಇಸ್ಲಾಮಾಬಾದ್:‌ ಕೆಲ ದಿನಗಳ ಹಿಂದಷ್ಟೇ ರ‍್ಯಾಲಿ ಮಾಡುವಾಗ ನಡೆದ ಗುಂಡಿನ ದಾಳಿಯಲ್ಲಿ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಅವರ ಮೇಲೆ ಆಳುವ ಸರ್ಕಾರ ಗುರಾಣಿ ಬಳಸಿದೆ. “ಇಮ್ರಾನ್‌ ಖಾನ್‌ ಅವರ ಯಾವುದೇ ಭಾಷಣ ಹಾಗೂ ಸುದ್ದಿಗೋಷ್ಠಿಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದು” ಎಂದು ಶೆಹಬಾಜ್‌ ಷರೀಫ್‌ (Shehbaz Sharif) ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.

ದೇಶದ ವಿದ್ಯುನ್ಮಾನ ಮಾಧ್ಯಮಗಳಿಗೆ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ಹಾಗೂ ನಿಯಂತ್ರಣ ಪ್ರಾಧಿಕಾರವು (PEMRA) ಈ ಕುರಿತು ಆದೇಶ ಹೊರಡಿಸಿದೆ. ಸಂವಿಧಾನದ 19ನೇ ಕಲಂ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪ್ರಾಧಿಕಾರವು ಇಂತಹ ಕ್ರಮ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

ಯು ಟರ್ನ್‌ ಹೊಡೆಯಿತೇ ಸರ್ಕಾರ?

ಇಮ್ರಾನ್‌ ಖಾನ್‌ ಅವರ ಭಾಷಣ ವರದಿಗಳ ಪ್ರಸಾರ ನಿಷೇಧಿಸಿದ ಕೆಲವೇ ಗಂಟೆಗಳಲ್ಲಿ ಶೆಹಬಾಜ್‌ ಷರೀಪ್‌ ಅವರ ಸರ್ಕಾರ ಯು ಟರ್ನ್‌ ಹೊಡೆದಿದೆ ಎಂದು ತಿಳಿದುಬಂದಿದೆ. ಇಮ್ರಾನ್‌ ಖಾನ್‌ ಭಾಷಣಗಳ ವರದಿ ಪ್ರಸಾರ ಕುರಿತು ಪಿಇಎಂಆರ್‌ಎ ಹೇರಿದ್ದ ನಿಷೇಧ ಹಿಂಪಡೆಯುವಂತೆ ಶೆಹಬಾಜ್‌ ಷರೀಫ್‌ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ನಿಷೇಧ ಹಾಗೂ ನಿಷೇಧ ಹಿಂಪಡೆದಿರುವುದು ದೃಢಪಟ್ಟಿಲ್ಲ.

ಇದನ್ನೂ ಓದಿ | Imran Khan | ದಾಳಿ ಬಗ್ಗೆ ಮೊದಲೇ ಗೊತ್ತಿತ್ತು, ಮೊದಲ ಸುದ್ದಿಗೋಷ್ಠಿಯಲ್ಲಿ ಇಮ್ರಾನ್‌ ಖಾನ್‌ ಹೇಳಿದ್ದೇನು?

Exit mobile version