Site icon Vistara News

Protest in China | ಲಾಕ್‌ಡೌನ್ ವಿರೋಧಿಸಿ ಚೀನಾದಲ್ಲಿ ಅಧ್ಯಕ್ಷ ಜಿನ್‌ಪಿಂಗ್ ವಿರುದ್ಧ ಭಾರೀ ಪ್ರತಿಭಟನೆ!

China Protest

ನವದೆಹಲಿ: ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದಿದೆ(Protest in China). ಜೀರೋ ಕೋವಿಡ್ ನೀತಿಯನ್ನು ಕಠಿಣವಾಗಿ ಜಾರಿಗೆ ತರಲಾಗುತ್ತಿದ್ದು, ಸೋಂಕಿತರಿದ್ದ ಕಟ್ಟಡವೊಂದಕ್ಕೆ ಬೆಂಕಿ ಬಿದ್ದು 10 ಜನರು ಸಾವಿಗೀಡಾಗಿದ್ದರು. ಈ ಘಟನೆಯ ಬೆನ್ನಲ್ಲೇ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿರುದ್ಧ ಪ್ರತಿಭಟನೆ ನಡೆದಿದೆ.

ಪ್ರತಿಭಟನೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಷೇರ್ ಆಗುತ್ತಿವೆ. ಕ್ಸಿಜಿಯಾಂಗ್ ಪ್ರಾಂತ್ಯದ ರಾಜಧಾನಿ ಉರುಂಕಿಯ ಬೀದಿಯಲ್ಲಿ ನೂರಾರು ಜನರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿವೆ. ಲಾಕ್‌ಡೌನ್ ತೆರವುಗೊಳಿಸಿ ಎಂದು ಜನರು ಗುಂಪು ಕೂಗುವ ಧ್ವನಿಯನ್ನೂ ಕೇಳಬಹುದು.

ಕ್ಸಿಜಿಯಾಂಗ್ ಪ್ರಾಂತ್ಯದಲ್ಲಿ ಚೀನಾ ಭಾರೀ ಕಟ್ಟುನಿಟ್ಟಿನ ಕೋವಿಡ್ ನಿಯಮಗಳನ್ನು ಜಾರಿ ಮಾಡಿದೆ. ಚೀನಾ ಜೀರೋ ಕೋವಿಡ್ ಪಾಲಿಸಿ ಅಳವಡಿಸಿಕೊಂಡಿದ್ದು, ಅದರಂತೆ ಬಿಗಿಯಾದ ಲಾಕ್‌ಡೌನ್ ಹೇರಿದೆ. ಇದರಿಂದಾಗಿ ಉರುಂಕಿಯ ಸುಮಾರು 40 ಲಕ್ಷ ಜನರು ಮನೆಯಿಂದ ಹೊರಗೆ ಬರುವುದನ್ನು ನಿರ್ಬಂಧಿಸಲಾಗಿದೆ. ಈ ನಗರದಲ್ಲಿ 200 ಹೊಸ ಕೋವಿಡ್ ಕೇಸ್‌ಗಳು ಪತ್ತೆಯಾಗಿವೆ.

ಇದನ್ನೂ ಓದಿ | Viral Video | ಚೀನಾದಲ್ಲೀಗ ಮನುಷ್ಯರಿಗೆ ಮಾತ್ರವಲ್ಲ, ಮೀನು, ಕಪ್ಪೆಗಳಿಗೂ ಕೋವಿಡ್‌ ಟೆಸ್ಟ್

Exit mobile version