Site icon Vistara News

Pepper X: ಯಪ್ಪೋ ಖಾರ; ಗಿನ್ನಿಸ್‌ ದಾಖಲೆ ಬರೆದ ಮೆಣಸಿನಕಾಯಿ, ಇದು ‘ಬ್ಯಾಡಗಿ’ಗಿಂತ ‘ಉರಿ’!

Pepper X Chilli

Pepper X dethrones Caroline Reaper as world's hottest chilli pepper

ವಾಷಿಂಗ್ಟನ್‌: ಊಟ ಮಾಡುವಾಗ ಅಪ್ಪಿತಪ್ಪಿ ಒಂದು ಮೆಣಸಿನಕಾಯಿಯ ತುಂಡು ಅಗೆದರೆ ಖಾರಕ್ಕೆ ಮೈ ಬೆವರುತ್ತದೆ. ಅದರಲ್ಲೂ, ಹಾವೇರಿಯ ಬ್ಯಾಡಗಿ ಮೆಣಸಿನಕಾಯಿಯ ಖಾರವನ್ನು ನೆನಪಿಸಿಕೊಂಡರೆ ಸಾಕು, ಮೈ ಜುಂ ಎನ್ನುತ್ತದೆ. ಬ್ಯಾಡಗಿ ಮೆಣಸಿನಕಾಯಿಯನ್ನೇ ನಾವು ಅತಿ ಖಾರದ ಮೆಣಸಿನಕಾಯಿ ಎನ್ನುತ್ತೇವೆ. ಆದರೆ, ಅಮೆರಿಕದ ಪೆಪ್ಪರ್‌ ಎಕ್ಸ್‌ (Pepper X) ಎಂಬ ಮೆಣಸಿನಕಾಯಿಯು (Chilli Pepper) ಜಗತ್ತಿನಲ್ಲೇ ಅತಿ ಹೆಚ್ಚು ಖಾರದ ಮೆಣಸಿನಕಾಯಿ ಎಂಬ ಖ್ಯಾತಿಗೆ ಭಾಜನವಾಗಿದೆ. ಇದು ಗಿನ್ನಿಸ್ ವಿಶ್ವದಾಖಲೆ (Guinness World Record) ಬರೆದಿದೆ. ‌

ಅಮೆರಿಕದ ದಕ್ಷಿಣ ಕೆರೊಲಿನಾದಲ್ಲಿ ಪೆಪ್ಪರ್‌ ಎಕ್ಸ್‌ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತಿದೆ. ಇದನ್ನು ಈಗ ಜಗತ್ತಿನಲ್ಲೇ ಅತಿ ಹೆಚ್ಚು ಖಾರದ ಮೆಣಸಿನಕಾಯಿ ಎಂದು ಘೋಷಿಸಲಾಗಿದೆ. ಇದುವರೆಗೆ ಕೆರೊಲಿನಾ ರೀಪರ್‌ ಮೆಣಸಿನಕಾಯಿಯು ಜಗತ್ತಿನಲ್ಲೇ ಅತಿ ಖಾರದ ಮೆಣಸಿನಕಾಯಿ ಎಂದು ಕರೆಯಲಾಗುತ್ತಿತ್ತು. ಅಷ್ಟೇ ಅಲ್ಲ, ಕಳೆದ 10 ವರ್ಷಗಳಿಂದಲೂ ಇದೇ ಮೆಣಸಿನಕಾಯಿಯ ದಾಖಲೆಯನ್ನು ಮುರಿಯಲು ಆಗಿರಲಿಲ್ಲ. ಈಗ ಪೆಪ್ಪರ್‌ ಎಕ್ಸ್‌ ಮೆಣಸಿನಕಾಯಿಯು ಹೊಸ ದಾಖಲೆ ಬರೆದಿದೆ.

ಇದು ಬ್ಯಾಡಗಿ ಮೆಣಸಿನಕಾಯಿಗಿಂತ ಎಷ್ಟು ಹೆಚ್ಚು ಖಾರ?

ಪೆಪ್ಪರ್‌ ಎಕ್ಸ್‌ ಮೆಣಸಿನಕಾಯಿಯು 20.69 ಲಕ್ಷ ಸ್ಕೊವಿಲ್ಲೆ ಹೀಟ್‌ ಯೂನಿಟ್‌ (Scoville Heat Units) ಹೊಂದಿದೆ. Scoville Heat Unitsಅನ್ನು ಮೆಣಸಿನಕಾಯಿಯ ಖಾರದ ಪ್ರಮಾಣವನ್ನು ಅಳೆಯುವ ವಿಧಾನಹೊಂದಿದೆ. ಕರ್ನಾಟಕದಲ್ಲಿ ಬೆಳೆಯುವ ಬ್ಯಾಡಗಿ ಮೆಣಸಿನಕಾಯಿತು 50 ಸಾವಿರದಿಂದ 1 ಲಕ್ಷ ಸ್ಕೊವಿಲ್ಲೆ ಹೀಟ್‌ ಯೂನಿಟ್‌ ಹೀಟ್‌ ಹೊಂದಿದೆ. ಇದುವರೆಗೆ ಗಿನ್ನಿಸ್‌ ವಿಶ್ವದಾಖಲೆ ಪುಟದಲ್ಲಿದ್ದ ಕೆರೊಲಿನಾ ರೀಪರ್‌ ಮೆಣಸಿನಕಾಯಿಯು 16 ಲಕ್ಷ ಸ್ಕೊವಿಲ್ಲೆ ಹೀಟ್‌ ಯೂನಿಟ್‌ ಹೊಂದಿತ್ತು.

ಇದನ್ನೂ ಓದಿ: Video Viral: ವಡಾ ಪಾವ್ ತಿಂದು, ಅಯ್ಯೋ ಖಾರ ಅಂದ್ರು ಜಪಾನ್ ರಾಯಭಾರಿ! ಹೀಗೆ ವಿಡಿಯೋ ಪೋಸ್ಟ್ ಮಾಡಿ ಅಂದ್ರು ಮೋದಿ

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಪಕರ್‌ಬಟ್‌ ಪೆಪ್ಪರ್‌ ಕಂಪನಿಯನ್ನು ಮುನ್ನಡೆಸುತ್ತಿರುವ, ಅದರ ಸಂಸ್ಥಾಪಕರೂ ಆದ ಎಕ್‌ ಕರೀ (Ed Currie) ಅವರು ಪೆಪ್ಪರ್‌ ಎಕ್ಸ್‌ ಮೆಣಸಿನಕಾಯಿಯನ್ನು ಬೆಳೆದಿದ್ದಾರೆ. ಮಿಶ್ರತಳಿಯ ಮೂಲಕ ಪೆಪ್ಪರ್‌ ಎಕ್ಸ್‌ ತಳಿಯ ಮೆಣಸಿನಕಾಯಿಯನ್ನು ಇವರು ಕಳೆದ 10 ವರ್ಷದಿಂದಲೂ ಬೆಳೆಯುತ್ತಿದ್ದಾರೆ. ಗಿನ್ನಿಸ್‌ ವಿಶ್ವದಾಖಲೆ ಬರೆದರೂ, ಈಗ ಜಗತ್ತಿನಾದ್ಯಂತ ಖ್ಯಾತಿಯಾದರೂ, ಪೆಪ್ಪರ್‌ ಎಕ್ಸ್‌ ಮೆಣಸಿನಕಾಯಿಯನ್ನು ತಿನ್ನಲು ಯಾರೂ ಮುಂದೆ ಬರುತ್ತಿಲ್ಲವಂತೆ, ಧೈರ್ಯ ಮಾಡುತ್ತಿಲ್ಲವಂತೆ!

Exit mobile version