ಲಂಡನ್: ಜೈಲಿನ ಮಹಿಳಾ ಸಿಬ್ಬಂದಿ ಕೈದಿಯ ಜೊತೆ ಲೈಂಗಿಕ ಕ್ರಿಯೆ(Physical relationship) ನಡೆಸಿರುವ ಶಾಕಿಂಗ್ ಘಟನೆ ಇಂಗ್ಲೆಂಡ್‌ನ ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದ್ದಂತೆ ಈ ಮಹಿಳಾ ಪೊಲೀಸ್ ಸಿಬ್ಬಂದಿ ಯಾರು ಎಂಬ ಬಗ್ಗೆ ಶಾಕಿಂಗ್ ವಿಚಾರವೊಂದು ಬಯಲಾಗಿದೆ. ಹಾಗಿದ್ದರೆ ಈ ಕೃತ್ಯ ಎಸಗಿರುವ ಈ ಮಹಿಳೆ ಯಾರು? ಇಲ್ಲಿದೆ ಸಂಪೂರ್ಣ ವರದಿ.
ಜೈಲಿನಲ್ಲಿ ಖೈದಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಕೆಯ ಹೆಸರು ಲಿಂಡಾ ಡಿ ಸೋಜಾ. 31ವರ್ಷದ ಈಕೆ ದಕ್ಷಿಣ ಲಂಡನ್‌ನಲ್ಲಿರುವ ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲಿ ಜೈಲಿನಲ್ಲಿ ಅಧಿಕಾರಿಯಾಗಿದ್ದಳು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆ ತಕ್ಷಣ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಳೆ. ಲಿಂಡಾಳ ಸಹೋದರಿ ಆಂಡ್ರೈನಾ ಪ್ರತಿಕ್ರಿಯಿಸಿದ್ದು, ಲಿಂಡಾ ಮತ್ತು ಪತಿ ನಾತನ್ 2023ರ ʼಓಪನ್ ಹೌಸ್: ದಿ ಗ್ರೇಟ್ ಸೆಕ್ಸ್ ಎಕ್ಸ್‌ಪರಿಮೆಂಟ್ʼ ಎಂಬ ಟಿವಿ ಶೋ ಸ್ಪರ್ಧಿಗಳಾಗಿದ್ದರು. ಅದೂ ಅಲ್ಲದೇ ಆಕೆ ಅಡಲ್ಡ್ ವಿಡಿಯೋ ಫ್ಲ್ಯಾಟ್‌ಫಾರ್ಮ್‌ನಲ್ಲಿ ಸೀಕ್ರೆಟ್ ಅಕೌಂಟನ್ನೂ ಹೊಂದಿದ್ದಾಳೆ ಎಂದು ಹೇಳಿದ್ದಾಳೆ.
ವೈರಲ್ ಆಗಿರುವ ವಿಡಿಯೋದಲ್ಲೇನಿದೆ?
ಎಕ್ಸ್‌ನಲ್ಲಿ ಭಾರೀ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವ ಜೈಲಿನ ಸಿಬ್ಬಂದಿ ಅಲ್ಲಿನ ಕೈದಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಇದನ್ನು ಅದೇ ಕೋಣೆಯಲ್ಲಿದ್ದ ಮತ್ತೊರ್ವ ಖೈದಿ ತನ್ನ ಮೊಬೈಲ್‌ನಲ್ಲಿ ಶೂಟ್ ಮಾಡಿಕೊಂಡಿದ್ದಾನೆ. ಕೈಯಲ್ಲಿ ಸಿಗರೇಟ್ ಹಿಡಿದು ವಿಡಿಯೋ ಮಾಡುತ್ತಿರುವ ಆ ವ್ಯಕ್ತಿ ” ಹಾಯ್.. ನಾವು ಇವತ್ತು ಇತಿಹಾಸ ಸೃಷ್ಟಿಸಿದ್ದೇವೆ. ನಾನು ಹೇಳುತ್ತಿರುವುದು ಇದೇ ವಿಚಾರವನ್ನು ಎಂದು ಹೇಳುತ್ತಾ ಕ್ಯಾಮೆರಾವನ್ನು ತಿರುಗಿಸುತ್ತಾನೆ. ಅಲ್ಲಿ ಜೈಲಿನ ಸಿಬ್ಬಂದಿ ಮತ್ತು ಕೈದಿ ಲೈಂಗಿಕ ಚಟುವಟಿಕೆಯಲ್ಲಿ ಭಾಗಿರುವುದನ್ನು ಕಾಣಬಹುದಾಗಿದೆ. ಅದೂ ಅಲ್ಲೇ ಇದ್ದ ಬೆಡ್ ಮೇಲೆ ಕೈದಿಗಳ ಬಟ್ಟೆ ಬಿದ್ದಿರುವುದನ್ನು ಕಾಣಬಹುದಾಗಿದೆ.
This UK prison guard video is mad, wedding ring and everything showing whilst giving f**k to an inmate 😭😭 pic.twitter.com/7E5XbNdgNm
— 🇿🇦🇫🇷🇺🇸Ⓜ⍶∩ⓓⓎ Ndlela KaMaMlobeli Camera🎥 Lady (@Fit_Mandisa) June 29, 2024
ಇನ್ನು ಇದೇ ಸಂದರ್ಭದಲ್ಲಿ ಮತ್ತೊರ್ವ ಖೈದಿ ಸೆಲ್ ಒಳಗೆ ಬರಲು ಯತ್ನಿಸುತ್ತಾರೆ. ಆಗ ವಿಡಿಯೋ ಮಾಡುತ್ತಿದ್ದವನು “ಸ್ವಲ್ಪ ಹೊತ್ತು ಇರು” ಅಂತಾನೆ. ಆಮೇಲೆ ಕ್ಯಾಮೆರಾವನ್ನು ಸುತ್ತ ತಿರುಗಿಸುತ್ತಾ “ಇದು ವಾಂಡ್‌ವರ್ಥ್ ಜೈಲು” ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇನ್ನು ಈ ಘಟನೆ ಬಗ್ಗೆ ಲಂಡನ್ ಪೊಲೀಸರು ಪ್ರತಿಕ್ರಿಯಿಸಿದ್ದು, ಇದು ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲೆ ನಡೆದಿರುವ ಘಟನೆ ಎಂಬುದು ಸ್ಪಷ್ಟವಾಗಿದೆ. ಕೇಸ್ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ಯಾವುದೇ ಬಂಧನವಾಗಿಲ್ಲ. ಕಾನೂನು ಸಚಿವಾಲಯದ ಜೊತೆಗೂ ಮಾತುಕತೆ ನಡೆದಿದೆ ಎಂದು ಹೇಳಿದ್ದಾರೆ.
HMP ಜೈಲು ಸೇವೆಯ ವಕ್ತಾರರು ಮಾತನಾಡಿ, ಘಟನೆಯು ಇತ್ತೀಚೆಗೆ ಸಂಭವಿಸಿದೆ ಎಂದು ಭಾವಿಸಲಾಗಿದೆ, ಮಹಿಳಾ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸಿಬ್ಬಂದಿ ಭ್ರಷ್ಟಾಚಾರವನ್ನು ಸಹಿಸಲಾಗುವುದಿಲ್ಲ ಮತ್ತು ಈ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಜೈಲು ಅಧಿಕಾರಿಯ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:Prajwal Revanna Case: ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್; ಬಂಧಿಸದಂತೆ ಹೈಕೋರ್ಟ್ ಆದೇಶ